Friday, March 13, 2026

ರಾಷ್ಟ್ರೀಯ

ಬೆಂಗಳೂರು

ರಾಜ್ಯದ ಎಂಟು ಪ್ರಮುಖ ನಗರದಲ್ಲಿ ರಾತ್ರಿ 10ರಿಂದ ಬೆಳಗ್ಗೆ 5ರ ವರೆಗೆ ನೈಟ್ ಕಫ್ರ್ಯೂ ; ರಾತ್ರಿ ಪಾಳಿಯ ನೌಕರರಿಗೆ ಕಂಪನಿಯ ಗುರುತಿನ ಚೀಟಿ ಕಡ್ಡಾಯ-ಕಹಳೆ ನ್ಯೂಸ್

ಬೆಂಗಳೂರು : ಶನಿವಾರದಿಂದ ರಾತ್ರಿ 10ರಿಂದ ಬೆಳಗ್ಗೆ 5ರ ವರೆಗೆ ರಾಜ್ಯದ ಎಂಟು ಪ್ರಮುಖ ನಗರದಲ್ಲಿ ಕಫ್ರ್ಯೂ ವಿಧಿಸಲಾಗಿದೆ. ಆದರೆ, ಇದು ರಾತ್ರಿ ಪಾಳಿಯ ನೌಕರರಿಗೆ ಗೊಂದಲವನ್ನುಂಟು ಮಾಡಿತ್ತು. ಆದರೆ ಈಗ ರಾತ್ರಿಪಾಳಿಯ ನೌಕರರಿಗೆ ಕೆಲವು ಷರತ್ತುಗಳ ಮೇಲೆ ಕೆಲಸಕ್ಕೆ ಹೋಗಿ ಬರಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿ ಕುಮಾರ್ ಅವರು ರಾತ್ರಿಪಾಳಿಯ ಕೆಲಸಗಾರರನ್ನು ಕರೆದೊಯ್ಯುವ ಸಂಸ್ಥೆಯ ವಾಹನಗಳಲ್ಲಿ ಆ ಸಂಬಂಧ ಆಯಾ ಕಂಪನಿಗಳಿಂದ...
ಬೆಂಗಳೂರು

2020 ನೇ ಸಾಲಿನಲ್ಲಿ ಬೆಂ.ವಿ.ವಿ ಯಿಂದ ರ‍್ಯಾಂಕ್‌ ಪಡೆದ ಸುರಾನಾ ಕಾಲೇಜಿನ ವಿದ್ಯಾರ್ಥಿಗಳಿಗೆ ಎಡಿಜಿಪಿ ಭಾಸ್ಕರ್ ರಾವ್ ಅವರಿಂದ ಸನ್ಮಾನ-ಕಹಳೆ ನ್ಯೂಸ್

ಬೆಂಗಳೂರು : ಪ್ರತಿನಿತ್ಯ ರಾಜ್ಯದ ರೈಲ್ವೇ ಹಳಿಗಳ ಮೇಲೆ 5 ರಿಂದ 6 ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅವರಲ್ಲಿ ಬಹುತೇಕರು 14 ರಿಂದ 30 ರ ವಯಸ್ಸಿನವರಾಗಿದ್ದು, ಏನನ್ನಾದರೂ ಸಾಧಿಸುವಂತಹ ವಯಸ್ಸಿನಲ್ಲಿ ಆತ್ಮಹತ್ಯೆಯಂತಹ ಕ್ರಮಕ್ಕೆ ಮುಂದಾಗುವುದು ವಿಷಾದದ ಸಂಗತಿಯಾಗಿದೆ. ಈ ಹಿನ್ನಲೆಯಲ್ಲಿ ಯುವಕರು ಮತ್ತು ವಿದ್ಯಾರ್ಥಿಗಳಲ್ಲಿ ಸವಾಲುಗಳನ್ನು ಸಮರ್ಥವಾಗಿ ಎದುರಿಸುವಂತಹ ಆತ್ಮಸ್ಥೈರ್ಯವನ್ನು ಬೆಳಸಿಕೊಳ್ಳುವುದು ಅತ್ಯವಶ್ಯಕ ಎಂದು ರೈಲ್ವೇ ಎಡಿಜಿಪಿ ಭಾಸ್ಕರ್ ರಾವ್ ಅಭಿಪ್ರಾಯಪಟ್ಟರು. ಬೆಂಗಳೂರು ವಿಶ್ವವಿದ್ಯಾಲಯದ ವತಿಯಿಂದ ನಡೆದ 2020...
ಬೆಂಗಳೂರು

ದಕ್ಷಿಣ ಕನ್ನಡ, ಉಡುಪಿ ಸೇರಿ ರಾಜ್ಯದ ಹಲವೆಡೆ ಇಂದಿನಿಂದ ಏಪ್ರಿಲ್ 10ರವರೆಗೆ ಮಳೆ ನಿರೀಕ್ಷೆ ; ಹವಾಮಾನ ಇಲಾಖೆ ಮುನ್ಸೂಚನೆ-ಕಹಳೆ ನ್ಯೂಸ್

ಬೆಂಗಳೂರು : ಏರುತ್ತಿರುವ ಬಿಸಿಲಿನ ಬೇಗೆಯ ನಡುವೆಯೂ ಇಂದಿನಿಂದ 10ರವರೆಗೆ ರಾಜ್ಯದ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯೂ ಮುನ್ಸೂಚನೆ ನೀಡಿದೆ. ಏಪ್ರಿಲ್ 6ರಂದು ಮೈಸೂರು, ಚಾಮರಾಜನಗರ, ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ, ಮತ್ತು ಏಪ್ರಿಲ್ 7ರಂದು ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಚಾಮರಾಜನಗರ, ಹಾಸನ, ಕೊಡಗು ಭಾಗದಲ್ಲಿ ಮಳೆಯಾಗಲಿದೆ. ಹಾಗೂ ಏಪ್ರಿಲ್ 8ರಂದು ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು, ಕೊಡಗು, ಹಾಸನದಲ್ಲಿ...
ಬೆಂಗಳೂರು

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಕೊರೋನಾ ಸೋಂಕು ದೃಢ-ಕಹಳೆ ನ್ಯೂಸ್

ಬೆಂಗಳೂರು : ಇಂದು ಎಸ್‍ಐಟಿ ವಿಚಾರಣೆಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಹಾಜರಾಗಬೇಕಿದ್ದು, ಆದರೆ ಕೊರೋನಾ ಸೋಂಕು ತಗುಲಿರುವ ಬಗ್ಗೆ ಸಚಿವ ಭೈರತಿ ಬಸವರಾಜ್ ಮಾಹಿತಿ ನೀಡಿದ್ದಾರೆ. ರಮೇಶ್ ಜಾರಕಿಹೊಳಿ ಅವರು ಬೆಂಗಳೂರಿನಲ್ಲಿಯೇ ಇದ್ದಾರೆ. ನಾನು ನಿನ್ನೆಯಷ್ಟೇ ಅವರ ಜೊತೆ ಮಾತನಾಡಿದೆ ಎಂದು ಹೇಳಿದರು. ಹಾಗೂ ಕೊರೋನಾ ನೆಗೆಟಿವ್ ಬಂದ ನಂತರ ಬೆಳಗಾವಿಗೆ ಪ್ರಚಾರಕ್ಕೆ ಬರುತ್ತಾರೆ ಎಂದಿದ್ದಾರೆ. ಏಪ್ರಿಲ್ 1ರಂದು ಆಸ್ಪತ್ರೆಗೆ ಬಂದಿದ್ದ ರಮೇಶ್ ಜಾರಕಿಹೊಳಿಗೆ ಕೊರೋನಾ ಪಾಸಿಟಿವ್...
ಬೆಂಗಳೂರು

ಸೆಕ್ಸ್ ಸಿಡಿ ಹಗರಣ ಸಂಬಂಧ ವಿಚಾರಣೆಗೆ ಗೈರು ಹಾಜರಾದ ರಮೇಶ್ ಜಾರಕಿಹೊಳಿ-ಕಹಳೆ ನ್ಯೂಸ್

ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಸೆಕ್ಸ್ ಸಿಡಿ ಹಗರಣ ಸಂಬಂಧ ವಿಚಾರಣೆಗೆ ಇಂದು ಹಾಜರಾಗುವಂತೆ ಸೂಚಿಸಲಾಗಿದ್ದರೂ, ಹಾಜರಾಗಿಲ್ಲ. ಅವರು ತಮ್ಮ ವಕೀಲರ ಮೂಲಕ ತಾವು ವಿಚಾರಣೆಗೆ ಬರುತ್ತಿಲ್ಲ ಎಂಬ ಮಾಹಿತಿಯನ್ನು ವಿಶೇಷ ತನಿಖಾ ತಂಡಕ್ಕೆ ತಿಳಿಸಿದರು. ಮತ್ತು ಸಂತ್ರಸ್ತೆ ವಿಚಾರಣೆ ವೇಳೆ ಹಲವು ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದ್ದಾರೆ ಎಂದು ಹೇಳಲಾಗಿರುವ ಕಾರಣ ರಮೇಶ್ ಜಾರಕಿಹೊಳಿ ಇಂದು ವಿಚಾರಣೆಯಿಂದ ತಪ್ಪಿಸಿಕೊಂಡಿದ್ದಾರೆ ಎಂಬ ಟೀಕೆಗಳು ಕೇಳಿ ಬಂದಿದ್ದು,...
ಬೆಂಗಳೂರು

ಮುಖ್ಯಮಂತ್ರಿ ಚಿನ್ನದ ಪದಕ ಗೌರವಕ್ಕೆ ಪಾತ್ರರಾದ ಲೋಕಾಯುಕ್ತ ಇನ್ಸ್‌ಪೆಕ್ಟರ್ ರಾಘವೇಂದ್ರ ಎಮ್ –ಕಹಳೆ ನ್ಯೂಸ್

ಬೆಂಗಳೂರು : ಕರ್ನಾಟಕ ಲೋಕಾಯುಕ್ತದಲ್ಲಿ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿರುವ, ಬೈಂದೂರು ಮೂಲದ ರಾಘವೇಂದ್ರ ಎಮ್. ಅವರು 2020ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕ ಗೌರವಕ್ಕೆ ಪಾತ್ರರಾಗಿದ್ದಾರೆ. 1997ರಲ್ಲಿ ಉಡುಪಿ ಜಿಲ್ಲೆಯಲ್ಲಿ ಪೊಲೀಸ್ ಪೇದೆಯಾಗಿ ವೃತ್ತಿ ಜೀವನ ಆರಂಭಿಸಿದ ರಾಘವೇಂದ್ರ ಅವರು ಜಿಲ್ಲೆಯ ಶಂಕರನಾರಾಯಣ, ಉಡುಪಿ ಟೌನ್ ಹಾಗೂ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿ 2007ರಲ್ಲಿ ಪಿಎಸ್ಐ ಆಗಿ ಭಡ್ತಿ ಹೊಂದಿದರು. ಬೆಂಗಳೂರಿನ ಯಶವಂತಪುರ, ಆರ್.ಎನ್.ಎಸ್ ಯಾರ್ಡ್, ಸಿಸಿಬಿ,...
ಬೆಂಗಳೂರು

ರಾಜ್ಯದ 1ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಮೇ ತಿಂಗಳಲ್ಲಿ ಬೇಸಗೆ ರಜೆ ಸಾಧ್ಯತೆ-ಕಹಳೆ ನ್ಯೂಸ್

ಬೆಂಗಳೂರು : ಸಾರ್ವಜನಿಕ ಶಿಕ್ಷಣ ಇಲಾಖೆಯು ಕೊರೋನ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಮತ್ತು ಬೇಸಿಗೆ ತಾಪಮಾನ ಹೆಚ್ಚುತ್ತಿರುವ ಕಾರಣ ರಾಜ್ಯದ 1ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಮೇ ತಿಂಗಳಲ್ಲಿ ಬೇಸಗೆ ರಜೆ ನೀಡಲು ಚಿಂತನೆ ನಡೆಸುತ್ತಿದೆ. ಎಪ್ರಿಲ್ ಅಂತ್ಯದೊಳಗೆ 9ನೇ ಪಠ್ಯಕ್ರಮ ಪೂರ್ಣಗೊಳಿಸಿ ಮೇ ತಿಂಗಳಲ್ಲಿ ರಜೆ ಘೋಷಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ವಿ.ಅನ್ಬುಕುಮಾರ್ ಅವರು ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಬೇಸಗೆ ರಜೆ ಇರುವುದಿಲ್ಲ. ಬದಲಾಗಿ...
ಬೆಂಗಳೂರು

ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಟಾಕ್ಸಿ ಚಾಲಕ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ-ಕಹಳೆ ನ್ಯೂಸ್

ಬೆಂಗಳೂರು : ಟಾಕ್ಸಿ ಚಾಲಕನೋರ್ವ ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಟಾಕ್ಸಿ ಚಾಲಕ ಮೃತಪಟ್ಟಿದ್ದಾನೆ. ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಚಾಲಕರು ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯ ಹಾಗೂ ಚನ್ನಪಟ್ಟಣ ಮೂಲದ 32 ವರ್ಷದ ಯುವಕ ಪ್ರತಾಪ್ ಕುಮಾರ್ ಎಂದು ತಿಳಿದುಬಂದಿದೆ. ಲಾಕ್ ಡೌನ್ ಬಳಿಕ ಬಾಡಿಗೆ ದರ ಕಡಿಮೆಯಾಗಿದ್ದು, ಬಾಡಿಗೆ ಕೂಡ...
1 284 285 286 287 288 319
Page 286 of 319