ಪರಿಸ್ಥಿತಿ ಕೈಮೀರಿದೆ, ಲಾಕ್ ಡೌನ್ ಮಾಡುವಂತೆ ಮೋದಿಗೆ ರಾಹುಲ್ ಗಾಂಧಿ ಬಹಿರಂಗ ಪತ್ರ – ಕಹಳೆ ನ್ಯೂಸ್
ದೆಹಲಿ(ಮೇ.07): ಪ್ರಧಾನಿ ನರೇಂದ್ರ ಮೋದಿಯವರ ವೈಫಲ್ಯ ಮತ್ತು ಕೇಂದ್ರದ ಶೂನ್ಯ ಕಾರ್ಯತಂತ್ರವು ದೇಶವನ್ನು ಸಂಪೂರ್ಣ ಲಾಕ್‌ಡೌನ್‌ನತ್ತ ತಳ್ಳುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನಾನು ಸಂಪೂರ್ಣ ಲಾಕ್ ಡೌನ್ ವಿರೋಧಿಸುತ್ತೇನೆ ಎಂದ ಅವರು ಬಡವರಿಗೆ ಆರ್ಥಿಕ ಪ್ಯಾಕೇಜ್ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕಳೆದ ವರ್ಷದ ಸಡನ್ ಲಾಕ್‌ಡೌನ್ ಜನರ ಮೇಲೆ ಭಾರೀ ಪರಿಣಾಮ ಬೀರಿತ್ತು. ಅದಕ್ಕಾಗಿಯೇ ನಾನು ಸಂಪೂರ್ಣ ಲಾಕ್‌ಡೌನ್ ವಿರೋಧಿಸುತ್ತೇನೆ ಎಂದಿದ್ದಾರೆ. ಆದರೆ ಪ್ರಧಾನ ಮಂತ್ರಿಯ...







