ದೀಪಾವಳಿಗೆ ಪ್ರಧಾನಿ ನರೇಂದ್ರ ಮೋದಿಯಿಂದ ಸಿಕ್ತು ಬಂಪರ್ ಆಫರ್ – 75,000 ಯುವಕರಿಗೆ ಉದ್ಯೋಗ – ಕಹಳೆ ನ್ಯೂಸ್
ನವದೆಹಲಿ: ಈ ವರ್ಷದ ದೀಪಾವಳಿಗೆ (Diwali) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬಂಪರ್ ಆಫರ್ ನೀಡಿದ್ದು, ದೇಶಾದ್ಯಂತ 75,000 ಯುವಕರಿಗೆ ಉದ್ಯೋಗವನ್ನು (Job) ಉಡುಗೊರೆಯಾಗಿ (Gift) ನೀಡಲಿದ್ದಾರೆ ಎಂದು ವರದಿ ತಿಳಿಸಿದೆ. ದೀಪಾವಳಿಗೆ ಎರಡು ದಿನ ಮೊದಲು ಅಂದರೆ ಶನಿವಾರ ವೀಡಿಯೋ ಕಾನ್ಫರೆನ್ಸ್ ಮೂಲಕ ಯುವಕರೊಂದಿಗೆ ಮೋದಿ ಸಂವಾದ ನಡೆಸಲಿದ್ದಾರೆ. ಈ ವೇಳೆ ಉದ್ಯೋಗದ ಪತ್ರವನ್ನು ವಿತರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ನಗರಗಳಿಂದ ಕೇಂದ್ರ ಸಚಿವರು...







