Thursday, March 19, 2026

ರಾಷ್ಟ್ರೀಯ

ಜಿಲ್ಲೆದಕ್ಷಿಣ ಕನ್ನಡಬೆಂಗಳೂರುಸುದ್ದಿ

ಗ್ಯಾರಂಟಿ ಯೋಜನೆಗಳು ಇರುವುದೇ ಬಡವರಿಗಾಗಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ -ಕಹಳೆ ನ್ಯೂಸ್

ಬೆಂಗಳೂರು: ಗ್ಯಾರಂಟಿ ಯೋಜನೆಗಳು ಇರುವುದೇ ಬಡವರಿಗಾಗಿ, ಪಕ್ಷಾತೀತವಾಗಿ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಯಜಮಾನಿಯರ ಖಾತೆಗೆ ಹಾಕಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಚುನಾವಣೆ ನಡೆಯುವ ಕ್ಷೇತ್ರಗಳಿಗೆ ಮಾತ್ರ ಗೃಹಲಕ್ಷ್ಮೀ ಹಣ ಹಾಕಲಾಗುತ್ತದೆ ಎಂಬುದು ಶುದ್ಧ ಸುಳ್ಳು. ಇದು ಆಧಾರ‌ರಹಿತ ಆರೋಪ‌ ಎಂದರು. ಜಿಎಸ್ಟಿ, ಜಿಎಸ್ಟಿಯೇತರ, ಆದಾಯ ತೆರಿಗೆ... ಹೀಗೆ ಫಲಾನುಭವಿಗಳನ್ನು ವಿಂಗಡಿಸಲಾಗಿದೆ. ಈಗಾಗಲೇ ನವೆಂಬರ್, ಡಿಸೆಂಬರ್...
ಜಿಲ್ಲೆಬೆಂಗಳೂರುಸಿನಿಮಾಸುದ್ದಿ

ಎರಡನೇ ಮದುವೆ ಸಂಭ್ರಮದಲ್ಲಿ ಬಿಗ್ ಬಾಸ್ ಖ್ಯಾತಿಯ ಚೈತ್ರಾ ವಾಸುದೇವನ್-ಕಹಳೆ ನ್ಯೂಸ್

ಸ್ಯಾಂಡಲ್‌ವುಡ್‌ನ ಚೆಂದದ ನಿರೂಪಕಿ ಚೈತ್ರಾ ವಾಸುದೇವನ್ ಇದೀಗ ಎರಡನೇ ಮದುವೆ ಸಂಭ್ರಮದಲ್ಲಿದ್ದಾರೆ. ಕಳೆದ ತಿಂಗಳಷ್ಟೇ ಜಗದೀಪ್‌ ಎಂಬುವವರ ಜತೆಗೆ ಎರಡನೇ ಮದುವೆ ಆಗುವ ಬಗ್ಗೆ ಪೋಟೋ ಶೇರ್‌ ಮಾಡಿ, ಭಾವಿ ಪತಿಯನ್ನು ಪರಿಚಯಿಸಿದ್ದರು ಚೈತ್ರಾ. ಇದೀಗ ಸದ್ದಿಲ್ಲದೆ ಮದರಂಗಿ ಶಾಸ್ತ್ರ ಮುಗಿಸಿಕೊಂಡಿದ್ದಾರೆ. ತಮ್ಮ ನಿರೂಪಣೆಯಿಂದಲೇ ಕನ್ನಡಿಗರ ಮತ್ತು ಕಿರುತೆರೆ ವೀಕ್ಷಕರ ಗಮನ ಸೆಳೆದಿದ್ದ ಚೈತ್ರಾ ವಾಸುದೇವನ್‌, ಎರಡನೇ ಮದುವೆಯ ಸಂಭ್ರಮದಲ್ಲಿದ್ದಾರೆ. ಮೆಹಂದಿ ಶಾಸ್ತ್ರದ ಫೋಟೋಗಳನ್ನು ಶೇರ್‌ ಮಾಡಿದ್ದಾರೆ. 2023ರಲ್ಲಿ ಮೊದಲ...
ಜಿಲ್ಲೆಬೆಂಗಳೂರುಸುದ್ದಿ

ಟಿಪ್ಪರ್-ಕಾರಿನ ನಡುವೆ ಭೀಕರ ರಸ್ತೆ ಅಪಘಾತ; ಐದು ಮಂದಿ ಸ್ಥಳದಲ್ಲೇ ಸಾವು-ಕಹಳೆ ನ್ಯೂಸ್

ಚಾಮರಾಜನಗರ: ಕಾರು ಹಾಗೂ ಟಿಪ್ಪರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐದು ಮಂದಿ ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಚಿಕ್ಕಿಂದುವಾಡಿ ಗ್ರಾಮದ ಬಳಿ ನಡೆದಿದೆ. ಮೃತರ ಹೆಸರು ಹಾಗೂ ವಿಳಾಸ ಇನ್ನಷ್ಟೇ ತಿಳಿಯಬೇಕಿದ್ದು, ಪೊಲೀಸರು ಮೃತದೇಹಗಳನ್ನ ಹೊರತೆಗೆದಿದ್ದು, ಮರಣೋತ್ತರ ಪರೀಕ್ಷೆಗೆ ರವಾನಿಸಿದ್ಧಾರೆ. ಘಟನೆ ಕುರಿತು ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಮೃತ ಐವರು ಮಂಡ್ಯ ಮೂಲದವರು ಎಂದು ತಿಳಿದು ಬಂದಿದ್ದು, ಕೊಳ್ಳೇಗಾಲದಿಂದ ಮಹದೇಶ್ವರ ಬೆಟ್ಟದ ಕಡೆಗೆ...
ಉತ್ತರ ಪ್ರದೇಶರಾಷ್ಟ್ರೀಯಸುದ್ದಿ

ಮಹಾ ಶಿವರಾತ್ರಿ : ಮಹಾಕುಂಭ ಮೇಳಕ್ಕೆ ಇಂದು ತೆರೆ, ‘ಅಂತಿಮ ಸ್ನಾನ ಆರಂಭ, ಭಕ್ತರ ಮೇಲೆ ಪುಷ್ಪವೃಷ್ಟಿ, ಬಿಗಿ ಭದ್ರತೆ – ಕಹಳೆ ನ್ಯೂಸ್

ಪ್ರಯಾಗ್ ರಾಜ್: ದೇಶಾದ್ಯಂತ ಮಹಾಶಿವರಾತ್ರಿ ಸಂಭ್ರಮ ಮನೆ ಮಾಡಿರುವಂತೆಯೇ ಕಳೆದ 45 ದಿನಗಳಿಂದ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆದ ಜಗತ್ತಿನ ದೊಡ್ಡ ಧಾರ್ಮಿಕ ಕಾರ್ಯಕ್ರಮ 'ಮಹಾಕುಂಭ ಮೇಳಕ್ಕೆ ಇಂದು ತೆರೆ ಬೀಳಲಿದೆ. ಪೌಶ್ ಪೂರ್ಣಿಮೆಯ ದಿನವಾದ ಇಂದು ಅಂತಿಮ ಪವಿತ್ರ ಸ್ನಾನಕ್ಕಾಗಿ ಮುಂಜಾನೆಯಿಂದ ಲಕ್ಷಾಂತರ ಜನರು ಮಹಾಕುಂಭ ನಗರಕ್ಕೆ ಆಗಮಿಸುತ್ತಿದ್ದು, ತ್ರಿವೇಣಿ ಸಂಗಮದಲ್ಲಿ ಮಿಂದೆಳುತ್ತಿದ್ದಾರೆ. 'ಹರ ಹರ ಮಹಾದೇವ್' ಘೋಷಣೆಗಳ ನಡುವೆ,ಸಂಗಮ ಸ್ಥಳದಲ್ಲಿ ಅಥವಾ ಸಮೀಪವಿರುವ ವಿವಿಧ ಘಾಟ್‌ಗಳಲ್ಲಿ...
ಬೆಂಗಳೂರುರಾಜಕೀಯರಾಜ್ಯಸುದ್ದಿ

ಇತಿಹಾಸದಲ್ಲಿ ಮೊದಲ ಬಾರಿಗೆ ಫೆ.27ರಿಂದ ವಿಧಾನಸೌಧದ ಆವರಣದಲ್ಲಿ 4 ದಿನಗಳ ಪುಸ್ತಕ ಮೇಳ ಆಯೋಜಿಸಿದ ಸ್ಪೀಕರ್ ಯು.ಟಿ.ಖಾದರ್ – ಕಹಳೆ ನ್ಯೂಸ್

ಬೆಂಗಳೂರು : ಇತಿಹಾಸದಲ್ಲಿ ಮೊದಲ ಬಾರಿಗೆ ವಿಧಾನಸೌಧದ ಆವರಣದಲ್ಲಿ 4 ದಿನಗಳ ಪುಸ್ತಕ ಮೇಳ ನಡೆಯುತ್ತಿದೆ ಎಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದರು. ಪುಸ್ತಕಮೇಳದ ಕುರಿತು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದರು. ಫೆ.27, 28, ಮಾ.01 ಮತ್ತು 02 ರವರೆಗೆ ವಿಧಾನಸೌಧದಲ್ಲಿ ಪುಸ್ತಕಮೇಳ ನಡೆಯಲಿದೆ. ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿದೆ. ಮಾ.2 ರಂದು ಸಾಧುಕೋಕಿಲ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಕವಿಗೋಷ್ಠಿಗಳು ನಡೆಯಲಿದೆ ಎಂದರು. ಲೇಖಕರು ಪುಸ್ತಕ ಬಿಡುಗಡೆ ಮಾಡುತ್ತಾರೆ....
ಅಂತಾರಾಷ್ಟ್ರೀಯದೆಹಲಿರಾಷ್ಟ್ರೀಯಸುದ್ದಿ

ಸುಳ್ಳಾಯ್ತು ಐಐಟಿ ಬಾಬಾ ಭವಿಷ್ಯ ; ಪಾಕ್‌ ವಿರುದ್ಧ ಗೆದ್ದು ಬೀಗಿದ ಭಾರತ – ಕಹಳೆ ನ್ಯೂಸ್

ಪ್ರಯಾಗ್‌ರಾಜ್‌: ಮಹಾಕುಂಭ ಮೇಳದಲ್ಲಿ ಫೇಮಸ್ ಆಗಿದ್ದ ಐಐಟಿ ಬಾಬಾ (IIT Baba) ಹೇಳಿದ್ದ ಭಾರತ- ಪಾಕಿಸ್ತಾನ ಪಂದ್ಯದ ಫಲಿತಾಂಶ ಇದೀಗ ಉಲ್ಟಾ ಆಗಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಭಾರತವನ್ನು (Team India) ಸೋಲಿಸಲಿದೆ. ಇದೇ ನಿಜ ಎಂದು ಅವರು ಭವಿಷ್ಯ ನುಡಿದಿದ್ದರು. ಅವರ ಈ ಹೇಳಿಕೆ ವೈರಲ್ ಆಗಿತ್ತು. ಆದರೀಗ ಅವರ ಭವಿಷ್ಯವಾಣಿ ಸಂಪೂರ್ಣ ಸುಳ್ಳಾಗಿದೆ. ಹೀಗಾಗಿ ಅವರು ಮತ್ತೆ ಗೂಗಲ್ ನಲ್ಲಿ ಟ್ರೆಂಡ್ ಆಗುತ್ತಿದ್ದಾರೆ....
ಅಂತಾರಾಷ್ಟ್ರೀಯರಾಷ್ಟ್ರೀಯ

ಹಳಿ ದಾಟುತ್ತಿದ್ದ ಕಾಡಾನೆಗಳ ಹಿಂಡಿಗೆ ಪ್ಯಾಸೆಂಜರ್ ರೈಲೊಂದು ಡಿಕ್ಕಿ;ಆರು ಕಾಡಾನೆಗಳುಸ್ಥಳದಲ್ಲೇ ಸಾವು-ಕಹಳೆ ನ್ಯೂಸ್

ಶ್ರೀಲಂಕಾ : ವನ್ಯಜೀವಿ ಅಭಯಾರಣ್ಯದ ಬಳಿ ಹಳಿ ದಾಟುತ್ತಿದ್ದ ಕಾಡಾನೆಗಳ ಹಿಂಡಿಗೆ ಪ್ಯಾಸೆಂಜರ್ ರೈಲೊಂದು ಡಿಕ್ಕಿ ಹೊಡೆದ ಪರಿಣಾಮ ಆರು ಕಾಡಾನೆಗಳು ಸಾ*ವನ್ನಪ್ಪಿರುವ ಘಟನೆ ಶ್ರೀಲಂಕಾದಲ್ಲಿ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಾಜಧಾನಿ ಕೊಲಂಬೊದಿಂದ ಸುಮಾರು 200 ಕಿಲೋಮೀಟರ್ ದೂರದಲ್ಲಿರುವ ಮಿನ್ನೇರಿಯಾ ಬಳಿ ಇರುವ ವನ್ಯಜೀವಿ ಅಭಯಾರಣ್ಯದಿಂದ ಹೊರಬಂದ ಆನೆಗಳ ಹಿಂದಿಗೆ ರೈಲು ಡಿಕ್ಕಿ ಹೊಡೆದಿದೆ ಈ ದುರ್ಘಟನೆಯಲ್ಲಿ ನಾಲ್ಕು ಆನೆ ಮರಿಗಳು ಸೇರಿದಂತೆ ಒಟ್ಟು ಆರು ಆನೆಗಳು...
ದೆಹಲಿರಾಜ್ಯಸುದ್ದಿ

ನೂತನ ಮುಖ್ಯಮಂತ್ರಿ ರೇಖಾ ಗುಪ್ತಾ ಅಧಿಕಾರ ಸ್ವೀಕಾರ; ರಾಮ್​ಲೀಲಾ ಮೈದಾನದಲ್ಲಿ ಅದ್ಧೂರಿ ಪ್ರಮಾಣವಚನ ಕಾರ್ಯಕ್ರಮ-ಕಹಳೆ ನ್ಯೂಸ್

ನವದೆಹಲಿ: ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ಇಂದು ನೂತನ ಮುಖ್ಯಮಂತ್ರಿ ರೇಖಾ ಗುಪ್ತಾ ಅಧಿಕಾರ ಸ್ವೀಕಾರ ಮಾಡಲಿದ್ದು, ಮಧ್ಯಾಹ್ನ 12 ಗಂಟೆಗೆ ಪ್ರಮಾಣ ವಚನ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ. ಕಳೆದ 2 ದಿನಗಳಿಂದ ದೆಹಲಿ ಬಿಜೆಪಿ ಘಟಕ ಕಾರ್ಯ ಕ್ರಮದ ಸಿದ್ದತೆ ಮಾಡಿಕೊಂಡಿದ್ದು, ಮೂರು ವೇದಿಕೆಗಳನ್ನು ನಿರ್ಮಾಣ ಮಾಡಲಾಗಿದೆ. ಒಂದು ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಹಾಗೂ ಹೊಸ ಮುಖ್ಯಮಂತ್ರಿ ರೇಖಾ...
1 135 136 137 138 139 321
Page 137 of 321