ಬೆಂಗಳೂರಲ್ಲಿ 9 ತಿಂಗಳ ಮಗು ಸೇರಿ 3 ಮಕ್ಕಳಿಗೆ ಕೊರೊನಾ ಪಾಸಿಟಿವ್ : ರಾಜ್ಯದಲ್ಲಿ ನಾಳೆಯಿಂದಲೇ ಕೋವಿಡ್ ಟೆಸ್ಟ್ ಆರಂಭ
ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೋವಿಡ್ (Covid-19) ತೀವ್ರತೆ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ 9 ತಿಂಗಳ ಮಗು ಸೇರಿ ಮೂರು ಮಕ್ಕಳಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಎಲ್ಲಾ ಮಕ್ಕಳು ಆರೋಗ್ಯವಾಗಿದ್ದಾರೆ. ಯಾವುದೇ ಆರೋಗ್ಯ ಸಮಸ್ಯೆ ಇಲ್ಲ. ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ನಾಳೆಯಿಂದಲೇ ಕೋವಿಡ್ ಪರೀಕ್ಷೆ ಆರಂಭಿಸುವ ಸಾಧ್ಯತೆ ಇದೆ. ರಾಜ್ಯದಲ್ಲಿ ಒಟ್ಟು 35 ಕೊರೊನಾ (Corona Virus) ಪ್ರಕರಣಗಳು. ಆ ಪೈಕಿ ಬೆಂಗಳೂರಿನಲ್ಲೇ 33 ಕೇಸ್‌ಗಳು ವರದಿಯಾಗಿವೆ. ಗರ್ಭಿಣಿಯರು, ಮಕ್ಕಳು, ಹಿರಿಯರು...







