ಧರ್ಮಸ್ಥಳ ಕೇಸ್ ನೇತ್ರಾವತಿ ದಡದಲ್ಲಿ SIT ಯಿಂದ ಬಿಗಿ ಭದ್ರತೆಯಲ್ಲಿ ಸ್ಥಳ ಮಹಜರು -ಕಹಳೆ ನ್ಯೂಸ್
ಧರ್ಮಸ್ಥಳ : ಧರ್ಮಸ್ಥಳದ ನೇತ್ರಾವತಿ ನದಿ ದಡದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಶುಕ್ರವಾರ ಸ್ಥಳ ಮಹಜರು ಆರಂಭಿಸಿದೆ. ಪ್ರಕರಣದ ಪ್ರಮುಖ ಕೊಂಡಿಯಾಗಿರುವ ಅನಾಮಿಕ ವ್ಯಕ್ತಿಯನ್ನು ಸ್ಥಳಕ್ಕೆ ಕರೆತಂದ ತಂಡ, ಆತ ಬೊಟ್ಟು ಮಾಡಿ ತೋರಿಸಿದ ಜಾಗದಲ್ಲಿ ಪರಿಶೀಲನೆ ನಡೆಸಿತು. ಮುಖಕ್ಕೆ ಮಾಸ್ಕ್ ಧರಿಸಿದ್ದ ಅನಾಮಿಕ ವ್ಯಕ್ತಿಯನ್ನು ಬಿಗಿ ಭದ್ರತೆಯಲ್ಲಿ ನೇತ್ರಾವತಿ ದಡಕ್ಕೆ ಕರೆತರಲಾಯಿತು. ತಾನು ಈ ಹಿಂದೆಯೇ ತಲೆಬುರುಡೆಯೊಂದನ್ನು ಇಲ್ಲಿಂದ...







