ಬೆಂಗಳೂರಿನ ಏರ್ಪೋರ್ಟ್ ರಸ್ತೆಯಲ್ಲಿ ಸರಣಿ ಅಪಘಾತ; 5 ಕಾರುಗಳಲ್ಲಿದ್ದ 9 ಮಂದಿಗೆ ಗಾಯ – ಕಹಳೆ ನ್ಯೂಸ್
ಬೆಳ್ಳಂಬೆಳಗ್ಗೆ ಬೆಂಗಳೂರಿನ ಏರ್ಪೋರ್ಟ್ ರಸ್ತೆಯಲ್ಲಿ ಸರಣಿ ಅಪಘಾತ ಸಂಭವಿಸಿದೆ. ಐದು ಕಾರುಗಳ ನಡುವೆ ಈ ಅಪಘಾತ ಸಂಭವಿಸಿದ್ದು, ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಏರ್ಪೋರ್ಟ್ ರಸ್ತೆಯಲ್ಲಿ ಬಂದ ಸ್ವಿಫ್ಟ್ ಕಾರು ಡಿವೈಡರ್ ಹಾರಿ ಏರ್ಪೋರ್ಟ್ ಕಡೆ ಹೊರಟಿದ್ದ ನಿಸಾನ್ ಕಾರಿಗೆ ಡಿಕ್ಕಿ ಹೊಡೆದಿದೆ. ಜೊತೆಗೆ ಇಂಡಿಕಾ ಅಲ್ಟೋ ಸೇರಿ ಮೂರು ಕಾರುಗಳಿಗೆ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದಿದೆ. ಸ್ವಿಫ್ಟ್ ಕಾರಿನಲ್ಲಿದ್ದ ನಾಲ್ವರಿಗೆ ಗಾಯಗಳಾಗಿವೆ. ಜೊತೆಗೆ ಇಂಡಿಕಾ ಕಾರು ಚಾಲಕನೂ ಸಹ...







