Wednesday, March 11, 2026

ಬೆಂಗಳೂರು

ಬೆಂಗಳೂರು

ಕೊರೋನಾ ಮಹಾಮಾರಿ ಸ್ಫೋಟಗೊಂಡಿರುವ ಹಿನ್ನಲೆ ಮಹಾರಾಷ್ಟ್ರ ಹಾಗೂ ಕರ್ನಾಟಕ ಬಸ್ ಸಂಚಾರ ಸ್ಥಗಿತ-ಕಹಳೆ ನ್ಯೂಸ್

ಬೆಂಗಳೂರು : ಮಹಾರಾಷ್ಟ್ರ ಹಾಗೂ ಕರ್ನಾಟಕ ಮಧ್ಯೆ ಕೊರೋನಾ ಮಹಾಮಾರಿ ಸ್ಫೋಟಗೊಂಡಿರುವ ಹಿನ್ನಲೆ ನೇರ ಬಸ್ ಸಂಚಾರ ಸ್ಥಗಿತಗೊಂಡಿದೆ. ರಾಜ್ಯದ ಬಸ್ ಗಳು ನಿಪ್ಪಾಣಿ ಗಡಿ ತನಕ ಸಂಚರಿಸಿತ್ತಿದೆ. ಮಹಾರಾಷ್ಟ್ರ ದ ಬಸ್ ಗಳು ಕೂಡ ರಾಜ್ಯಕ್ಕೆ ತಾಗಿಕೊಂಡಿರುವ ಮಹಾರಾಷ್ಟ್ರ ದ ಗಡಿ ತನಕ ಬರುತ್ತಿವೆ. ಉಭಯ ರಾಜ್ಯಗಳ ಮಧ್ಯೆ ನೇರ ಬಸ್ ಸಂಚಾರ ಸ್ಥಗಿತಗೊಂಡಿರುವ ಹಿನ್ನಲೆ ಪ್ರಯಾಣಿಕರು ಪರದಾಡುತ್ತಿದ್ದಾರೆ ಇದೇ ವೇಳೆ ಗಡಿಯಲ್ಲಿ ಕಟ್ಟು ನಿಟ್ಟಿನ ಕೊರೋನಾ ಪರೀಕ್ಷೆಗೆ...
ಬೆಂಗಳೂರು

ಕೊರೋನಾ ಪ್ರಕರಣ ಹೆಚ್ಚಳ; ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಮಹತ್ವದ ಸಭೆ-ಕಹಳೆ ನ್ಯೂಸ್

ಬೆಂಗಳೂರು : ಮುಖ್ಯಮಂತ್ರಿ ಯಡಿಯೂರಪ್ಪ ಅವರು, ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಕೊರೋನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಇಂದು ಮಹತ್ವದ ಸಭೆ ಕರೆದಿದ್ದಾರೆ. ಈ ಸಭೆಯನ್ನು ಸಂಜೆ ಐದು ಗಂಟೆಗೆ ವಿಧಾನಸೌಧದಲ್ಲಿ ಆಯೋಜಿಸಲಾಗಿದ್ದು, ಮುಖ್ಯ ಕಾರ್ಯದರ್ಶಿ ಸೇರಿದಂತೆ ಹಿರಿಯ ಅಧಿಕಾರಿಗಳು ಈ ಸಭೆಯನ್ನು ಭಾಗವಹಿಸಲಿದ್ದಾರೆ. ಸಿಎಂ ಯಡಿಯೂರಪ್ಪ ಆರೋಗ್ಯ ಇಲಾಖೆಯ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಲಿದ್ದಾರೆ. ಕೊರೋನಾ ಪರೀಕ್ಷೆ ಸಂಖ್ಯೆ ಹೆಚ್ಚಳ, ಗಡಿಯಲ್ಲಿ ಕಣ್ಗಾವಲು, ಬೆಂಗಳೂರಿನಲ್ಲಿ ಇನ್ನಷ್ಟು...
ಬೆಂಗಳೂರು

ಬೆಂಗಳೂರಿನಲ್ಲಿ ತಾನೇ ಹಲ್ಲೆ ಮಾಡಿ ಫುಡ್ ಡೆಲಿವರಿ ಬಾಯ್ ಗೆ ದೂರು ಹಾಕಿದ ಯುವತಿ-ಕಹಳೆ ನ್ಯೂಸ್

ಬೆಂಗಳೂರು : ಬೆಂಗಳೂರಿನಲ್ಲಿ ಫುಡ್ ಡೆಲಿವರಿ ಬಾಯ್ ತನಗೆ ಹಲ್ಲೆ ನಡೆಸಿದ್ದಾನೆ ಎಂದು ಇನ್ಟಾ ಗ್ರಾಮ್ ನಲ್ಲಿ ಯುವತಿಯೋರ್ವಳು ಪೋಸ್ಟ್ ಹಾಕಿದ್ದಳು. ಇದಲ್ಲದೇ ಪೊಲೀಸರಿಗೂ ಆಕೆ ದೂರು ನೀಡಿದ್ದಳು. ಆದರೆ ಇದೀಗ ಫುಡ್ ಡೆಲಿವರಿ ಬಾಯ್ ಈ ಘಟನೆಯ ಬಗ್ಗೆ ವಿವರಿಸಿದ್ದಾರೆ. ಹಿತೇಶಾ ಚಂದ್ರಾಣಿ ಎಂಬವರು ಫುಡ್ ಡೆಲಿವರಿ ಬಾಯ್ ವಿರುದ್ಧ ಹಲ್ಲೆ ಆರೋಪ ಮಾಡಿದ್ದು, ಊಟ ತಂದುಕೊಡುವುದಕ್ಕೆ ತಡ ಮಾಡಿದ್ದಲ್ಲದೇ ಸ್ಪಷ್ಟನೆ ಕೇಳಿದ್ದಕ್ಕೆ ನನಗೆ ಬೈದು, ಮುಖಕ್ಕೆ ಪಂಚ್...
ಬೆಂಗಳೂರು

ಮಾರ್ಚ್ 13ಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ; ಹವಾಮಾನ ಇಲಾಖೆ ಮುನ್ಸೂಚನೆ -ಕಹಳೆ ನ್ಯೂಸ್

ಬೆಂಗಳೂರು : ಹವಾಮಾನ ಇಲಾಖೆ ಅರಬ್ಬಿ ಸಮುದ್ರ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಹೆಚ್ಚಾಗಿರುವ ಹಿನ್ನೆಲೆ ಮಾರ್ಚ್ 13ಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಮಾರ್ಚ್ 11ರ ಗುರುವಾರ 8.30ಕ್ಕೆ ಅಂತ್ಯಗೊಂಡ ಹವಾಮಾನ ಇಲಾಖೆಯ ವರದಿಯ ಪ್ರಕಾರ, ಕಲಬುರ್ಗಿಯಲ್ಲಿ 38.5ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ದಾಖಲಾದ ಅತೀ ಗರಿಷ್ಠ ತಾಪಮಾನ ಇದಾಗಿದೆ. ದಾವಣಗೆರೆಯಲ್ಲಿ 15.3 ಡಿಗ್ರಿ ಸೆಲ್ಸಿಯಸ್ ತಾಪಮಾನ...
ಬೆಂಗಳೂರು

ಮೂಗು ಮುರಿಯುವಂತೆ ಗ್ರಾಹಕಿಯ ಮುಖಕ್ಕೆ ಪಂಚ್ ಮಾಡಿದ ಜೊಮ್ಯಾಟೊ ಡೆಲಿವರಿ ಬಾಯ್ –ಕಹಳೆ ನ್ಯೂಸ್

ಬೆಂಗಳೂರು : ಜೊಮ್ಯಾಟೊ ಮೊಬೈಲ್ ಆ್ಯಪ್ ಮೂಲಕ ಡೆಲಿವರಿಗೆ ಬುಕ್ ಮಾಡಿ ಆಹಾರ ಪೂರೈಕೆ ಮಾಡುವಾಗ ತಡವಾದ ಕಾರಣ ಡೆಲಿವರಿ ಬಾಯ್ ಮತ್ತು ಗ್ರಾಹಕಿ ಜೊತೆಗೆ ವಾಗ್ವಾದ ಉಂಟಾಗಿದ್ದು , ತೀವ್ರ ಆಕ್ರೋಶಕ್ಕೆ ಒಳಗಾದ ಡೆಲಿವರಿ ಬಾಯ್ ಗ್ರಾಹಕಿಯ ಮುಖಕ್ಕೆ ಪಂಚ್ ಹೊಡೆದಿದ್ದಾನೆ. ಇದೇ ಕಾರಣಕ್ಕೆ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಪ್ರಸಾದನ ಕಲಾವಿದೆ ಆಗಿರುವ ಇಂದ್ರಾಣಿ, ಎಂಬವರು ಜೊಮ್ಯಾಟೊ ಆ್ಯಪ್ ಮೂಲಕ ಮಧ್ಯಾಹ್ನ 3.30ಕ್ಕೆ ಊಟ ಆರ್ಡರ್ ಮಾಡಿದ್ದು ಆರ್ಡರ್...
ಬೆಂಗಳೂರು

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹಿಂದಿನ ಸಂಪ್ರದಾಯದಂತೆಯೇ ಮಹಾಶಿವರಾತ್ರಿ ಹಬ್ಬ ಆಚರಣೆಯಾಗಲಿ ; ಹೈಕೋರ್ಟ್-ಕಹಳೆ ನ್ಯೂಸ್

ಬೆಂಗಳೂರು : ಹೈಕೋರ್ಟ್ ದೇವಾಲಯದ ಆಡಳಿತ ಮಂಡಳಿಗೆ , ದ.ಕ ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹಿಂದಿನ ಸಂಪ್ರದಾಯದಂತೆಯೇ ಮಹಾಶಿವರಾತ್ರಿ ಹಬ್ಬ ಆಚರಣೆ ಮಾಡಿ ಎಂದು ನಿರ್ದೇಶನ ನೀಡಿದೆ. ಆದರೆ ಮಹಾಶಿವರಾತ್ರಿ ಹಬ್ಬವನ್ನು ಶೈವ ಪದ್ದತಿಯ ಅನುಸಾರ ಆಚರಿಸಲು ಅವಕಾಶ ನೀಡುವಂತೆ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಆಯುಕ್ತರು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿದ ದೇವಸ್ಥಾನದ ಭಕ್ತರಾದ ಬಿ.ಆರ್.ಮುರಳೀಧರನ್, ವಿಜಯಸಿಂಹ ಮತ್ತು ಇತರರು ಹೈಕೋರ್ಟ್‍ಗೆ ತಕರಾರು ಅರ್ಜಿ ಸಲ್ಲಿಸಿದ್ದರು....
ದಕ್ಷಿಣ ಕನ್ನಡಪುತ್ತೂರುಬೆಂಗಳೂರುರಾಜ್ಯಸುದ್ದಿ

ಪುತ್ತೂರು ನಗರಸಭೆ ವ್ಯಾಪ್ತಿಯ ಸಮಗ್ರ ಅಭಿವೃದ್ಧಿಗೆ ರೂ. 9 ಕೋಟಿ ಪ್ರಸ್ತಾವನೆ ; ಶಾಸಕರು, ನಗರಸಭೆ, ಪೂಡಾ ಅಧ್ಯಕ್ಷರಿಂದ ಮುಖ್ಯಮಂತ್ರಿಗಳಿಗೆ ಮನವಿ – ಕಹಳೆ ನ್ಯೂಸ್

ಪುತ್ತೂರು: ಪುತ್ತೂರು ನಗರಸಭೆ ವ್ಯಾಪ್ತಿಯ ಸಂಪರ್ಕ ರಸ್ತೆ ಸೇರಿದಂತೆ ಸಮಗ್ರ ಅಭಿವೃದ್ಧಿಗಾಗಿ ರೂ.೯ ಕೋಟಿಯ ಪ್ರಸ್ತಾವನೆಯನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಮತ್ತು ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ಅವರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.   ಪುತ್ತೂರು ನಗರಸಭೆ ಪಟ್ಟಣ ಪ್ರದೇಶದಲ್ಲಿ ವಾಹನ ಸಂಚಾರ ನಿಯಂತ್ರಣಕ್ಕೆ ಸಂಪರ್ಕ ರಸ್ತೆ ಅಭಿವೃದ್ಧಿ, ವಿಟ್ಲ, ಪುತ್ತೂರು,...
ದಕ್ಷಿಣ ಕನ್ನಡಬೆಂಗಳೂರುಸುದ್ದಿಸುಬ್ರಹ್ಮಣ್ಯ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶಿವರಾತ್ರಿ ಆಚರಣೆ ಯಥಾಸ್ಥಿತಿಗೆ ಹೈಕೋರ್ಟ್ ಆದೇಶ ; ಮಾಧ್ವ ಪದ್ದತಿಯಂತೆ ಶಿವರಾತ್ರಿ – ಕಹಳೆ ನ್ಯೂಸ್

ಬೆಂಗಳೂರು : ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶಿವರಾತ್ರಿಯ ಕುರಿತಾಗಿ ಗೊಂದಲ ಏರ್ಪಟ್ಟಿತು. ಶಿವರಾತ್ರಿ ಆಚರಣೆ ಶೈವ ಮಾಧ್ವ ಪದ್ದತಿಯಂತೆ ನಡೆಯಬೇಕೆಂಬ ಜಟಾಪಟಿಯು ನಡೆದಿತ್ತು ಇದೀಗ ಉಮಾಮಹೇಶ್ವರಿ ಗುಡಿಯಲ್ಲಿ ಈ ಹಿಂದಿನಂತೆ ಪೂಜೆ ಅಭಿಷೇಕ ನಡೆಸುವುದಕ್ಕೆ ಮುಜರಾಯಿ ಇಲಾಖೆಗೆ ಹೈಕೊರ್ಟ್ ನಿರ್ದೇಶನ ನೀಡಿದೆ. ಕಳೆದ ಹಲವು ವರ್ಷಗಳಿಂದ ಕುಕ್ಕೆಸುಬ್ರಮಣ್ಯದಲ್ಲಿ ಆಚರಣೆಗಳು ನಡೆಯುತ್ತಿದ್ದವು ಈ ವಿಚಾರಕ್ಕೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ದ ನಾಗರೀಕ ಹಿತರಕ್ಷಣಾ ಸಮತಿಯವರು ಈ ಬಾರಿಯ ಶಿವರಾತ್ರಿಯ ಅಚರಣೆಯಲ್ಲಿ ಬದಲಾವಣೆ ಮಾಡಬೇಕು ಶೈವ...
1 189 190 191 192 193 212
Page 191 of 212