Wednesday, March 11, 2026

ಬೆಂಗಳೂರು

ಬೆಂಗಳೂರು

ಓಮನ್‍ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವ “ಇಂಗ್ಲಿಷ್”- ಎಂಕ್ಲೆಗ್ ಬರ್ಪುಜಿ ಬ್ರೋ’ ತುಳು ಸಿನಿಮಾ ದುಬೈಯಲ್ಲಿ ಹೌಸ್ ಫುಲ್-ಕಹಳೆ ನ್ಯೂಸ್

ಮಂಗಳೂರು : ಮಂಗಳೂರು-ಬೆಂಗಳೂರು-ಮೈಸೂರು ಸೇರಿದಂತೆ ಕರ್ನಾಟಕದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ “ಇಂಗ್ಲಿಷ್”- ಎಂಕ್ಲೆಗ್ ಬರ್ಪುಜಿ ಬ್ರೋ’ ಗಿಲ್ಬಿಸ್ಟಿಕ್ ಕಾಮಿಡಿ ಚಿತ್ರ ಇದೀಗ ದೂರದ ಓಮನ್ ಹಾಗೂ ಯುಎಇಗೆ ಭರ್ಜರಿ ಎಂಟ್ರಿ ನೀಡಿದ್ದು, ಅಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅಕ್ಮೆ(ACME ) ಮೂವೀಸ್ ಇಂಟರ್‍ನ್ಯಾಷನಲ್ ಲಾಂಛನದಲ್ಲಿ ನಿರ್ಮಾಣವಾಗಿರುವ ದುಬೈಯ ಖ್ಯಾತ ಉದ್ಯಮಿ, ಕನ್ನಡ ಸಿನಿಮಾ ನಿರ್ಮಾಪಕರಾದ ಹರೀಶ್ ಶೇರಿಗಾರ್ ಮತ್ತು ಶ್ರೀಮತಿ ಶರ್ಮಿಳಾ ಶೇರಿಗಾರ್ ನಿರ್ಮಿಸಿರುವ ಕೆ. ಸೂರಜ್ ಶೆಟ್ಟಿ ನಿರ್ದೇಶನದ...
ಬೆಂಗಳೂರು

ಪಬ್, ದೇವಸ್ಥಾನ, ಚರ್ಚ್, ಮಸೀದಿ, ಸೇರಿದಂತೆ ಧಾರ್ಮಿಕ ಕೇಂದ್ರ, ,ಶಾಲಾ-ಕಾಲೇಜು ಬಂದ್ ; ರಾಜ್ಯಾದ್ಯಂತ 144 ಸೆಕ್ಷನ್ ಜಾರಿಗೆ ತಜ್ಞರ ಶಿಫಾರಸ್ಸು-ಕಹಳೆ ನ್ಯೂಸ್

ಬೆಂಗಳೂರು : ಕೋವಿಡ್ ತಾಂತ್ರಿಕ ಸಲಹಾ ಸಮಿತಿ, ರಾಜ್ಯದಲ್ಲಿ ತೀವ್ರಗತಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಿರುವ ಕಾರಣ ರಾಜ್ಯಾದ್ಯಂತ 144 ಸೆಕ್ಷನ್ ಜಾರಿಗೆಯನ್ನು ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಈ ನಡುವೆ ಸಿಎಂ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ತುರ್ತು ಸಭೆ ಕರೆದಿದ್ದು, ಈ ಸಭೆಯಲ್ಲಿ ಸಚಿವರು, ಹಿರಿಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ. ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮ ಜಾರಿಗೊಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಇನ್ನು...
ಬೆಂಗಳೂರು

ಮಹಾರಾಷ್ಟ್ರದಲ್ಲಿ ವಿಧಿಸಲಾಗಿರುವ ಜನತಾ ಕಫ್ರ್ಯೂವನ್ನು ರಾಜ್ಯದಲ್ಲಿ ಜಾರಿ ಮಾಡುವ ಅವಶ್ಯಕತೆ ಇಲ್ಲ”; ಸಚಿವ ಸುಧಾಕರ್-ಕಹಳೆ ನ್ಯೂಸ್

ಬೆಂಗಳೂರು : ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು "ಮಹಾರಾಷ್ಟ್ರದಲ್ಲಿ ಇದ್ದಷ್ಟು ಸೋಂಕಿನ ಪ್ರಮಾಣ ನಮ್ಮಲ್ಲಿಲ್ಲ. ಈ ಕಾರಣದಿಂದ ಮಹಾರಾಷ್ಟ್ರದಲ್ಲಿ ವಿಧಿಸಲಾಗಿರುವ ಜನತಾ ಕಫ್ರ್ಯೂವನ್ನು ರಾಜ್ಯದಲ್ಲಿ ಜಾರಿ ಮಾಡುವ ಅವಶ್ಯಕತೆ ಇಲ್ಲ" ಎಂದು ತಿಳಿಸಿದ್ದಾರೆ. "ಕೊರೊನಾ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೇರೆ ರಾಜ್ಯಗಳಲ್ಲು ಕೈಗೊಂಡಿರುವ ಕಠಿಣ ಕ್ರಮಗಳ ಬಗ್ಗೆ ನಾವು ಪರಿಶೀಲನೆ ನಡೆಸಿದ್ದೇವೆ. ರಾಜ್ಯದಲ್ಲಿ ಕೊರೊನಾ ಹೆಚ್ಚಳದ ಅಂದಾಜು, ತೆಗೆದುಕೊಳ್ಳಬೇಕಾದ ನಿಯಂತ್ರಣಗಳ ಬಗ್ಗೆ ತಾಂತ್ರಿಕಾ ಸಲಹಾ ಸಮಿತಿಯ ವರದಿಯ ಬಗ್ಗೆ...
ಬೆಂಗಳೂರು

ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡ ರಾಕಿಂಗ್ ಸ್ಟಾರ್ ಯಶ್-ಕಹಳೆ ನ್ಯೂಸ್

ಬೆಂಗಳೂರು : ಕೆಜಿಎಫ್ -2 ಸೂಟಿಂಗ್ ಬಳಿಕ ರಾಕಿಂಗ್ ಸ್ಟಾರ್ ಯಶ್, ಇಡಿಗ ಕೃಷಿ ಚಟುವಟೀಕೆಯಲ್ಲಿ ತೊಡಗಿಕೊಂಡಿದ್ದಾರೆ. ಹಾಸನದ ತಿಮ್ಮಲಾಪುರದಲ್ಲಿ ಜಮೀನನ್ನು ಹದಗೊಳಿಸುವ ಕಾರ್ಯವನ್ನು ಯಶ್ ಅವರೇ ಶುರು ಮಾಡಿ, ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಇನ್ನು ಸದ್ಯ ಜಮೀನು ಮಟ್ಟ ಮಾಡುವ ಕಾರ್ಯದಲ್ಲಿ ಯಶ್ ತೊಡಗಿಕೊಂಡಿದ್ದು, ಮೈಸೂರಿನಲ್ಲಿ ದರ್ಶನ್ ಮಾಡಿರುವ ಫಾರ್ಮ್ ಹೌಸ್ ಮಾಡುವ ಉದ್ದೇಶ ಹೊಂದಲಾಗಿದೆ ಎಂದಿದ್ದಾರೆ. ಕೆಲವು ದಿನಗಳ ಹಿಂದೆ ಜಮೀನಿಗೆ ರಸ್ತೆ ಬಿಡುವ ವಿಚಾರವಾಗಿ ಗ್ರಾಮಸ್ಥರು ಹಾಗೂ...
ಬೆಂಗಳೂರು

ಬೆಂಗಳೂರಿನ ಜೆ.ಪಿ. ನಗರದ ಒಂದೇ ಹೋಟೆಲ್ ನ 19 ಸಿಬ್ಬಂದಿಗೆ ಕೊರೊನಾ ಸೋಂಕು ದೃಡ-ಕಹಳೆ ನ್ಯೂಸ್

ಬೆಂಗಳೂರು : ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿದೆ. ಇದೀಗ ಬೆಂಗಳೂರಿನ ಜೆ.ಪಿ. ನಗರದ ಒಂದೇ ಹೋಟೆಲ್ ನ 19 ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಇವರ ಸಂಪರ್ಕದಲ್ಲಿರುವವರಿಗೆ ಕೋವಿಡ್ ಟೆಸ್ಟ್ ಗೆ ಸಿದ್ಧತೆ ಮಾಡಲಾಗಿದೆ. ಹಾಗೂ ಆತಂಕಕ್ಕೆ ಮತ್ತಷ್ಟು ಕಾರಣವಾಗಿದೆ. ಸದ್ಯ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ನಿನ್ನೆ ಒಂದೇ ದಿನ ರಾಜ್ಯದಲ್ಲಿ 9579 ಹೊಸ ಪ್ರಕರಣಗಳು ದಾಖಲಾಗಿದ್ದು, ಈ ಮೂಲಕ...
ಬೆಂಗಳೂರು

ಗ್ರಾಮೀಣ ಪ್ರದೇಶದ 20 ಯುವತಿಯರಿಗೆ ಉಚಿತವಾಗಿ ಐಎಎಸ್ ಕೋಚಿಂಗ್ ನೀಡುವ ಯೋಜನೆಗೆ ಚಾಲನೆ-ಕಹಳೆ ನ್ಯೂಸ್

ಬೆಂಗಳೂರು : ರಾಜ್ಯದ ಗ್ರಾಮೀಣ ಪ್ರದೇಶದ 20 ಯುವತಿಯರಿಗೆ ಉಚಿತವಾಗಿ ಐಎಎಸ್ ಕೋಚಿಂಗ್ ನೀಡುವ ದ ಐಎಎಸ್ ಹಬ್ ನ ನೂತನ ಯೋಜನೆಗೆ ಇಂದು ಚಾಲನೆ ನೀಡಲಾಯಿತು. ದೇಶದಲ್ಲೇ ಸಿವಿಲ್ ಸರ್ವೀಸ್ ಪರೀಕ್ಷೆಗಳಿಗೆ ಅತ್ಯುತ್ತಮ ಗುಣಮಟ್ಟದ ತರಬೇತಿಯನ್ನು ನೀಡಲಾಗುವ ದ ಐಎಎಸ್ ಹಬ್ ನ ಬೆಂಗಳೂರು ಶಾಖೆಗೆ ಇಂದು ಪಶು ವೈದ್ಯಕೀಯ ಇಲಾಖೆಯ ಕಾರ್ಯದರ್ಶಿ ಪಿ. ಮಣಿವಣ್ಣನ್, ನಿವೃತ್ತ ಡಿಜಿಪಿ ಶಂಕರ್ ಬಿದರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ...
ಬೆಂಗಳೂರು

ರಾಜ್ಯದ ಎಂಟು ಪ್ರಮುಖ ನಗರದಲ್ಲಿ ರಾತ್ರಿ 10ರಿಂದ ಬೆಳಗ್ಗೆ 5ರ ವರೆಗೆ ನೈಟ್ ಕಫ್ರ್ಯೂ ; ರಾತ್ರಿ ಪಾಳಿಯ ನೌಕರರಿಗೆ ಕಂಪನಿಯ ಗುರುತಿನ ಚೀಟಿ ಕಡ್ಡಾಯ-ಕಹಳೆ ನ್ಯೂಸ್

ಬೆಂಗಳೂರು : ಶನಿವಾರದಿಂದ ರಾತ್ರಿ 10ರಿಂದ ಬೆಳಗ್ಗೆ 5ರ ವರೆಗೆ ರಾಜ್ಯದ ಎಂಟು ಪ್ರಮುಖ ನಗರದಲ್ಲಿ ಕಫ್ರ್ಯೂ ವಿಧಿಸಲಾಗಿದೆ. ಆದರೆ, ಇದು ರಾತ್ರಿ ಪಾಳಿಯ ನೌಕರರಿಗೆ ಗೊಂದಲವನ್ನುಂಟು ಮಾಡಿತ್ತು. ಆದರೆ ಈಗ ರಾತ್ರಿಪಾಳಿಯ ನೌಕರರಿಗೆ ಕೆಲವು ಷರತ್ತುಗಳ ಮೇಲೆ ಕೆಲಸಕ್ಕೆ ಹೋಗಿ ಬರಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿ ಕುಮಾರ್ ಅವರು ರಾತ್ರಿಪಾಳಿಯ ಕೆಲಸಗಾರರನ್ನು ಕರೆದೊಯ್ಯುವ ಸಂಸ್ಥೆಯ ವಾಹನಗಳಲ್ಲಿ ಆ ಸಂಬಂಧ ಆಯಾ ಕಂಪನಿಗಳಿಂದ...
ಬೆಂಗಳೂರು

2020 ನೇ ಸಾಲಿನಲ್ಲಿ ಬೆಂ.ವಿ.ವಿ ಯಿಂದ ರ‍್ಯಾಂಕ್‌ ಪಡೆದ ಸುರಾನಾ ಕಾಲೇಜಿನ ವಿದ್ಯಾರ್ಥಿಗಳಿಗೆ ಎಡಿಜಿಪಿ ಭಾಸ್ಕರ್ ರಾವ್ ಅವರಿಂದ ಸನ್ಮಾನ-ಕಹಳೆ ನ್ಯೂಸ್

ಬೆಂಗಳೂರು : ಪ್ರತಿನಿತ್ಯ ರಾಜ್ಯದ ರೈಲ್ವೇ ಹಳಿಗಳ ಮೇಲೆ 5 ರಿಂದ 6 ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅವರಲ್ಲಿ ಬಹುತೇಕರು 14 ರಿಂದ 30 ರ ವಯಸ್ಸಿನವರಾಗಿದ್ದು, ಏನನ್ನಾದರೂ ಸಾಧಿಸುವಂತಹ ವಯಸ್ಸಿನಲ್ಲಿ ಆತ್ಮಹತ್ಯೆಯಂತಹ ಕ್ರಮಕ್ಕೆ ಮುಂದಾಗುವುದು ವಿಷಾದದ ಸಂಗತಿಯಾಗಿದೆ. ಈ ಹಿನ್ನಲೆಯಲ್ಲಿ ಯುವಕರು ಮತ್ತು ವಿದ್ಯಾರ್ಥಿಗಳಲ್ಲಿ ಸವಾಲುಗಳನ್ನು ಸಮರ್ಥವಾಗಿ ಎದುರಿಸುವಂತಹ ಆತ್ಮಸ್ಥೈರ್ಯವನ್ನು ಬೆಳಸಿಕೊಳ್ಳುವುದು ಅತ್ಯವಶ್ಯಕ ಎಂದು ರೈಲ್ವೇ ಎಡಿಜಿಪಿ ಭಾಸ್ಕರ್ ರಾವ್ ಅಭಿಪ್ರಾಯಪಟ್ಟರು. ಬೆಂಗಳೂರು ವಿಶ್ವವಿದ್ಯಾಲಯದ ವತಿಯಿಂದ ನಡೆದ 2020...
1 185 186 187 188 189 212
Page 187 of 212