Monday, March 9, 2026

ದೆಹಲಿ

ದೆಹಲಿರಾಜ್ಯಸುದ್ದಿ

ಭಯೋತ್ಪಾದಕ ಸಂಪರ್ಕ ಪತ್ತೆಗೆ ಭಾರತದಿಂದ ಮೊದಲ ‘ಸಂಘಟಿತ ಅಪರಾಧ ಜಾಲ ಡೇಟಾಬೇಸ್’ ಅನಾವರಣ – ಕಹಳೆ ನ್ಯೂಸ್

ನವದೆಹಲಿ : ದೇಶದ ಭಯೋತ್ಪಾದನಾ ನಿಗ್ರಹ ಘಟಕವಾದ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಆಯೋಜಿಸುತ್ತಿರುವ ಎರಡು ದಿನಗಳ ವಾರ್ಷಿಕ ಕಾರ್ಯಕ್ರಮವಾದ 'ಭಯೋತ್ಪಾದನಾ ನಿಗ್ರಹ ಸಮ್ಮೇಳನ-2025'ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಡೇಟಾಬೇಸ್ ಉದ್ಘಾಟಿಸಿದರು. ಈ ಡೇಟಾಬೇಸ್ AI-ಚಾಲಿತವಾಗಿದ್ದು, ಬುದ್ಧಿವಂತ ವಿಶ್ಲೇಷಣಾತ್ಮಕ ಸಾಧನವಾಗಿ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ, ತನಿಖಾ ಅಧಿಕಾರಿಗಳು ಸಂಘಟಿತ ಅಪರಾಧಿಗಳ ಬಗ್ಗೆ ಸಮಗ್ರ ಮಾಹಿತಿಯನ್ನ ತಕ್ಷಣವೇ ಹಿಂಪಡೆಯಲು ಅನುವು ಮಾಡಿಕೊಡುತ್ತದೆ. ಈ ಡೇಟಾಬೇಸ್ ಎಲ್ಲಾ ರಾಜ್ಯಗಳಾದ್ಯಂತದ ಸಂಘಟಿತ...
ದೆಹಲಿರಾಜ್ಯಸುದ್ದಿ

18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಆಯ್ಕೆಯಾದ ಮಕ್ಕಳಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪ್ರಶಸ್ತಿ – ಕಹಳೆ ನ್ಯೂಸ್

ನವದೆಹಲಿ : ವೀರ್ ಬಲ್ ದಿವಸ್ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು 20 ಮಕ್ಕಳನ್ನು ಸನ್ಮಾನಿಸಿದರು. 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಆಯ್ಕೆಯಾದ ಮಕ್ಕಳಿಗೆ ರಾಷ್ಟ್ರಪತಿಗಳು ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪ್ರಶಸ್ತಿಯನ್ನ ಪ್ರದಾನ ಮಾಡಿದರು. ಆಯ್ಕೆಯಾದವರಲ್ಲಿ ಬಿಹಾರದ 14 ವರ್ಷದ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಕೂಡ ಒಬ್ಬರು. ಹತ್ತನೇ ಸಿಖ್ ಗುರು ಗುರು ಗೋವಿಂದ ಸಿಂಗ್ ಅವರ ಪುತ್ರರ ಹುತಾತ್ಮತೆಯನ್ನ ಗೌರವಿಸುವ ಸಲುವಾಗಿ ಈ ಪ್ರಶಸ್ತಿಯನ್ನ ನೀಡಲಾಗುತ್ತದೆ....
ದೆಹಲಿರಾಜ್ಯಸುದ್ದಿ

ವಾಜಪೇಯಿ 101ನೇ ಜಯಂತಿ – 100 ಹೊಸ `ಅಟಲ್ ಕ್ಯಾಂಟೀನ್’ಗಳ ಉದ್ಘಾಟನೆ -ಕಹಳೆ ನ್ಯೂಸ್

ನವದೆಹಲಿ: ಕರ್ನಾಟಕದ ಇಂದಿರಾ ಕ್ಯಾಂಟಿನ್ ಮಾದರಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜಯಂತಿ ಹಿನ್ನೆಲೆ ದೆಹಲಿ ಸರ್ಕಾರ ಇಂದು (ಡಿ.25) ರಾಜಧಾನಿಯಲ್ಲಿ 100 ಹೊಸ `ಅಟಲ್ ಕ್ಯಾಂಟೀನ್’ಗಳನ್ನು ಆರಂಭಿಸಿದೆ. ಈ ಕ್ಯಾಂಟೀನ್‌ಗಳಲ್ಲಿ ಕೇವಲ 5 ರೂ.ಗೆ ಊಟ ಸಿಗಲಿದೆ. ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಲಾಜಪತ್ ನಗರದ ನೆಹರೂ ನಗರದಲ್ಲಿ ಮೊದಲ ಕ್ಯಾಂಟೀನ್‌ನ ಉದ್ಘಾಟನೆ ನೆರವೇರಿಸಿದರು. ನಗರಾಭಿವೃದ್ಧಿ ಸಚಿವ ಆಶಿಷ್ ಸೂದ್ ಅವರು ಮಾತನಾಡಿ,...
ದೆಹಲಿಬೆಂಗಳೂರುರಾಜ್ಯರಾಷ್ಟ್ರೀಯಸುದ್ದಿ

ಚಿತ್ರದುರ್ಗ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತ :ಮೃತರ ಕುಟುಂಬಕ್ಕೆ 2 ಲಕ್ಷ: ಮೋದಿ ಸಂತಾಪ – ಕಹಳೆ ನ್ಯೂಸ್

ನವದೆಹಲಿ/ಬೆಂಗಳೂರು: ಚಿತ್ರದುರ್ಗ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತರ ಕುಟುಂಬದವರಿಗೆ ಪ್ರಧಾನ ಮಂತ್ರಿಯವರ ರಾಷ್ಟ್ರೀಯ ಪರಿಹಾರ ನಿಧಿಯಿಂದ (PNRF) 2 ಲಕ್ಷ ರೂ. ತಾತ್ಕಾಲಿಕ ಪರಿಹಾರ ನೀಡಲಾಗುವುದು. ಗಾಯಾಳುಗಳಿಗೆ 50,000 ರೂ. ನೀಡಲಾಗುವುದು ಪ್ರಧಾನಿ ಮೋದಿ ಹೇಳಿದ್ದಾರೆ. ಈಸಂಬಂಧ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಅವರು ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಜೀವಹಾನಿಯಾಗಿದೆ ಎಂದು ತಿಳಿದು ತೀವ್ರ ದುಃಖವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತೇನೆ. ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ...
ದೆಹಲಿರಾಜ್ಯರಾಷ್ಟ್ರೀಯಶುಭಾಶಯಸುದ್ದಿ

ದೆಹಲಿಯ ಚರ್ಚ್‌ಗೆ ಭೇಟಿ ನೀಡಿ ಪ್ರಾರ್ಥಿಸಿದ ಮೋದಿ – ಕಹಳೆ ನ್ಯೂಸ್

ನವದೆಹಲಿ: ಕ್ರಿಸ್ಮಸ್‌ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಮುಂಜಾನೆ ದೆಹಲಿಯ ಕ್ಯಾಥೆಡ್ರಲ್ ಚರ್ಚ್ ಆಫ್ ದಿ ರಿಡೆಂಪ್ಶನ್‌ ಭೇಟಿ ನೀಡಿ ಪ್ರಾರ್ಥನೆ ಮಾಡಿದರು. ದೆಹಲಿಯ ಬಿಷಪ್ ರೆವರೆಂಡ್ ಡಾ. ಪಾಲ್ ಸ್ವರೂಪ್ ಅವರು ಈ ಸಂದರ್ಭದಲ್ಲಿ ವಿಶೇಷ ಪ್ರಾರ್ಥನೆ ಮಾಡಿದರು. ಮೋದಿ ಭೇಟಿಯ ಸಂದರ್ಭದಲ್ಲಿ ದೆಹಲಿ ಮತ್ತು ಉತ್ತರ ಭಾರತದ ಹಲವು ಕ್ರಿಶ್ಚಿಯನ್‌ ಬಾಂಧವರು ಭಾಗಿಯಾಗಿದ್ದರು. ಭೇಟಿಯ ನಂತರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಮೋದಿ, ದೆಹಲಿಯ ಕ್ಯಾಥೆಡ್ರಲ್...
ದೆಹಲಿರಾಜ್ಯಸುದ್ದಿ

ಬೆಂಗಳೂರು & ಕರಾವಳಿ ಜಿಲ್ಲೆಗಳ ನಡುವೆ ವಂದೇ ಭಾರತ್‌ ರೈಲು ಆರಂಭಕ್ಕೆ ಹೆಚ್‌.ಡಿ.ಕುಮಾರಸ್ವಾಮಿ ಮನವಿ – ಕಹಳೆ ನ್ಯೂಸ್

ನವದೆಹಲಿ : ರಾಜಧಾನಿ ಬೆಂಗಳೂರು ಹಾಗೂ ರಾಜ್ಯದ ಕರಾವಳಿ ಪ್ರದೇಶಗಳ ನಡುವೆ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ವಂದೇ ಭಾರತ್‌ ಎಕ್ಸ್ ಪ್ರೆಸ್‌‍ ರೈಲು ಸೇವೆ ಆರಂಭಿಸುವಂತೆ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರಿಗೆ ಮನವಿ ಮಾಡಿದ್ದಾರೆ. ಈ ಸಂಬಂಧ ರೈಲ್ವೆ ಸಚಿವರಿಗೆ ಪತ್ರ ಬರೆದಿರುವ ಕುಮಾರಸ್ವಾಮಿ ಅವರು; ಬೆಂಗಳೂರು ನಗರದಿಂದ ಹಾಸನ- ಮಂಗಳೂರು...
ದೆಹಲಿರಾಜ್ಯರಾಷ್ಟ್ರೀಯಸುದ್ದಿ

 ದೆಹಲಿಯಲ್ಲಿ ಹಿಂದೂಪರ ಸಂಘಟನೆಗಳಿಂದ ತೀವ್ರಗೊಂಡ ಪ್ರತಿಭಟನೆ: ಬಾಂಗ್ಲಾ ರಾಯಭಾರ ಕಚೇರಿಗೆ ನುಗ್ಗಲು ಯತ್ನ-ಕಹಳೆ ನ್ಯೂಸ್

ನವದೆಹಲಿ: ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ ತೀವ್ರಗೊಂಡಿದೆ. ನವದೆಹಲಿಯಲ್ಲಿರುವ ಬಾಂಗ್ಲಾ ರಾಯಭಾರ ಕಚೇರಿ ಎದುರು ಹಿಂದೂಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಬಾಂಗ್ಲಾದಲ್ಲಿ ಹಿಂದೂ ಯುವಕ ದೀಪು ಚಂದ್ರದಾಸ್ ಹತ್ಯೆ ಖಂಡಿಸಿ ಪ್ರತಿಭಟನೆ ತೀವ್ರಗೊಂಡಿಇದೆ. ದೆಹಲಿಯಲ್ಲಿರುವ ಬಾಂಗ್ಲಾ ರಾಯಭಾರ ಕಚೇರಿಗೆ ನುಗ್ಗಲು ಪ್ರತಿಭಟನಾಕಾರರು ಯತ್ನಿಸಿದ್ದಾರೆ. ಬ್ಯಾರಿಕೇಡ್ ಗಳನ್ನು ತಳ್ಳಿ ಕಚೇರಿಯತ್ತ ಮುನ್ನುಗ್ಗಿದ ಪ್ರತಿಭಟನಾಕಾರರನ್ನು ಪೊಲೀಸರು ತಡೆದಿದ್ದು, ಈ ವೇಳೆ...
ದೆಹಲಿಸುದ್ದಿ

ದೆಹಲಿಯಲ್ಲಿ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ : ತಪ್ಪಿದ ಮತ್ತೊಂದು ಭಾರಿ ಅನಾಹುತ!-ಕಹಳೆ ನ್ಯೂಸ್

 ನವದೆಹಲಿ : ದೆಹಲಿಯಲ್ಲಿ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ ಆಗಿದ್ದು, ದೆಹಲಿಯಿಂದ ಮುಂಬೈಗೆ ತೆರಳುತ್ತಿದ್ದ ಏರ್ ಇಂಡಿಯ ವಿಮಾನ ದೆಹಲಿಯಲ್ಲಿ ತುರ್ತು ಭೂಸ್ಪರ್ಶ ಆಗಿದೆ. ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ AI887 ವಿಮಾನ ತುರ್ತು ಭೂಸ್ಪರ್ಶ ಆಗಿದೆ ವಿಮಾನದಲ್ಲಿ ಇದ್ದಂತಹ ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿಗಳು ಸುರಕ್ಷಿತರಾಗಿದ್ದಾರೆ ಯಾವುದೇ ಅಪಾಯ ಆಗಿಲ್ಲ ಎಂದು ಬಲ್ಲಮೂಲಗಳಿಂದ ತಿಳಿದುಬಂದಿದೆ. ಸ್ವಲ್ಪದರಲ್ಲಿಯೇ ಮತ್ತೊಂದು ಅತಿ ದೊಡ್ಡ ಅನಾಹುತ ತಪ್ಪಿದೆ....
1 4 5 6 7 8 49
Page 6 of 49