Friday, March 6, 2026

ಜಮ್ಮು ಮತ್ತು ಕಾಶ್ಮೀರ

ಜಮ್ಮು ಮತ್ತು ಕಾಶ್ಮೀರದೆಹಲಿಸುದ್ದಿ

ದೆಹಲಿ ಸೇರಿ NCR ಪ್ರದೇಶದಾದ್ಯಂತ ಮಳೆ; ಕಾಶ್ಮೀರದಲ್ಲಿ ಹಿಮಪಾತ – ಕಹಳೆ ನ್ಯೂಸ್

ನವದೆಹಲಿ: ದೆಹಲಿ ಸೇರಿ ಎನ್‌ಸಿಆರ್‌ ಪ್ರದೇಶದಾದ್ಯಂತ ಇಂದು ಬೆಳಗ್ಗೆ ಗುಡುಗು, ಮಿಂಚು ಸಹಿತ ಮಳೆಯಾಗಿದೆ. ಬಲವಾದ ಗಾಳಿ ಬೀಸಿ ಗುಡುಗು, ಮಿಂಚು ಸಹಿತ ಮಳೆ ಸುರಿದಿದೆ. ಹಿಮಾಲಯ ಪ್ರದೇಶದಲ್ಲಿ ಭಾರೀ ಹಿಮಪಾತ ಹಿನ್ನೆಲೆಯಲ್ಲಿ ಮಳೆಯಾಗಿದೆ. ದಿನವಿಡೀ ಮೋಡ ಕವಿದ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಕಚೇರಿ ತಿಳಿಸಿದೆ. ಮಳೆಯಿಂದಾಗಿ ವಾಯುಮಾಲಿನ್ಯ ಪ್ರಮಾಣದಲ್ಲಿ ಕೊಂಚ ಇಳಿಕೆಯಾಗಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು ಬೆಳಗ್ಗೆ 4:50 ಕ್ಕೆ ಆರೆಂಜ್‌ ಅಲರ್ಟ್‌ ನೀಡಿದೆ....
ಜಮ್ಮು ಮತ್ತು ಕಾಶ್ಮೀರಜಿಲ್ಲೆರಾಜ್ಯಸುದ್ದಿ

ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆ, ಭಯೋತ್ಪಾದಕರ ನಡುವೆ ತೀವ್ರ ಗುಂಡಿನ ಚಕಮಕಿ – ಕಹಳೆ ನ್ಯೂಸ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ತೀವ್ರ ಗುಂಡಿನ ಚಕಮಕಿ ನಡೆದಿದೆ. ಪಾಕಿಸ್ತಾನದ ಮೂಲದ ಜೈಶ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದ ಕೆಲ ಭಯೋತ್ಪಾದಕರು ಇಲ್ಲಿ ಅಡಗಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರದಂದು ಚತ್ರೂ ಬೆಲ್ಟ್‌ನ ಸೊನ್ನಾರ್ ಹಳ್ಳಿಯ ಬಳಿ ಮಂಡ್ರಲ್-ಸಿಂಗ್‌ಪೊರಾ ಪ್ರದೇಶದಲ್ಲಿ ‘ಆಪರೇಷನ್ ತ್ರಾಶಿ-ಐ’ ಆರಂಭವಾಯಿತು. ಈ ವೇಳೆ ಭದ್ರತಾ ಪಡೆಗಳು ಭಯೋತ್ಪಾದಕರನ್ನು ಪತ್ತೆಹಚ್ಚಿದ ನಂತರ ಭಯೋತ್ಪಾದಕರು ಗ್ರೆನೇಡ್ ದಾಳಿ...
ಜಮ್ಮು ಮತ್ತು ಕಾಶ್ಮೀರರಾಜ್ಯರಾಷ್ಟ್ರೀಯಸುದ್ದಿ

ಡ್ರೋನ್’ ಮೂಲಕ ಭಾರತಕ್ಕೆ ಶಸ್ತ್ರಾಸ್ತ್ರಗಳ ಕಳ್ಳಸಾಗಣೆ : ಪಾಕ್ ಪಿತೂರಿಯನ್ನು ವಿಫಲಗೊಳಿಸಿದ BSF ಪಡೆ – ಕಹಳೆ ನ್ಯೂಸ್

ಜಮ್ಮು-ಕಾಶ್ಮೀರ : ಜಮ್ಮು ಮತ್ತು ಕಾಶ್ಮೀರದ ಸಾಂಬಾ ಸೆಕ್ಟರ್ನಲ್ಲಿ ಪಾಕಿಸ್ತಾನದ ಸಂಚನ್ನು ಬಿಎಸ್‌ಎಫ್ (BSF) ಪಡೆಗಳು ವಿಫಲಗೊಳಿಸಿದೆ ಎಂದು ವರದಿಗಳು ತಿಳಿಸಿದೆ. ಹೌದು. ಡ್ರೋನ್ಗಳ ಮೂಲಕ ಭಾರತಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ ಶಸ್ತ್ರಾಸ್ತ್ರಗಳನ್ನು ಬಿಎಸ್‌ಎಫ್ ಪಡೆಗಳು ವಶಪಡಿಸಿಕೊಂಡರು. ಶುಕ್ರವಾರ ರಾತ್ರಿ ಸಾಂಬಾ ಸೆಕ್ಟರ್ನಲ್ಲಿ ಗಡಿಯುದ್ದಕ್ಕೂ ಡ್ರೋನ್ ಚಲನೆಯನ್ನು ಬಿಎಸ್‌ಎಫ್ ಪಡೆಗಳು ಪತ್ತೆಹಚ್ಚಿದವು. ಈ ಸಂದರ್ಭದಲ್ಲಿ, ಫ್ಲೋರಾ ಗ್ರಾಮದಲ್ಲಿ ಡ್ರೋನ್ ಬಂದಿಳಿದಿರುವುದನ್ನು ಅವರು ಗಮನಿಸಿದರು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಶೋಧ ನಡೆಸಿದರು. ಗ್ರೆನೇಡ್,...
ಜಮ್ಮು ಮತ್ತು ಕಾಶ್ಮೀರರಾಜ್ಯಸುದ್ದಿ

ಮನೆ ಬಾಗಿಲು ಬಡಿದು ಊಟ ಕೇಳಿ ಪರಾರಿಯಾದ ಉಗ್ರರಿಗಾಗಿ ಶೋಧ -ಕಹಳೆ ನ್ಯೂಸ್

ಶ್ರೀನಗರ - ಮನೆ ಬಾಗಿಲು ಬಡಿದು ಆಹಾರ ಕೇಳಿ ಪರಾರಿಯಾಗಿರುವ ಶಂಕಿತ ಉಗ್ರರಿಗಾಗಿ ಜಮು-ಕಾಶೀರದಲ್ಲಿ ವ್ಯಾಪಕ ಶೋಧ ನಡೆಸಲಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ, ಬಸಂತ್‌ಗಢದ ಮೇಲ್ಭಾಗದಲ್ಲಿ ಮೂವರು ಶಂಕಿತ ;ಭಯೋತ್ಪಾದಕರು ತಡರಾತ್ರಿ ಬಕರ್‌ವಾಲ್‌‍ ಕುಟುಂಬದ ಬಾಗಿಲು ಬಡಿದು ಆಹಾರ ಕೇಳಿದ ನಂತರ ಬೃಹತ್‌ ಬಹು-ಏಜೆನ್ಸಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ.ಬಸಂತ್‌ಗಢದ ಎತ್ತರದ ಪ್ರದೇಶಗಳಲ್ಲಿರುವ ದೂರದ ವಸಾಹತು ಪ್ರದೇಶವಾದ ಚಿಂಗ್ಲಾ-ಬಲೋಥಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮನೆ ಮಾಲೀಕರು ಭಯಭೀತರಾಗಿ...
ಜಮ್ಮು ಮತ್ತು ಕಾಶ್ಮೀರರಾಜ್ಯರಾಷ್ಟ್ರೀಯಸುದ್ದಿ

ಹರಿಯಾಣದ ಮನೆಯೊಂದರ ಮೇಲೆ ಪೊಲೀಸರ ದಾಳಿ ; 2563 ಕೆಜಿ ಶಂಕಿತ ಸ್ಫೋಟಕ ವಶ – ಕಹಳೆ ನ್ಯೂಸ್

ಫರಿದಾಬಾದ್ : ಹರಿಯಾಣದ ಫರಿದಾಬಾದ್‌'ನ ಧೌಜ್ ಪ್ರದೇಶದಿಂದ ಸುಮಾರು 4 ಕಿಲೋಮೀಟರ್ ದೂರದಲ್ಲಿರುವ ಫತೇಪುರ್ ಟಾಗಾ ಗ್ರಾಮದಲ್ಲಿ ಪೊಲೀಸರು ಪ್ರಮುಖ ಯಶಸ್ಸನ್ನು ಸಾಧಿಸಿದ್ದಾರೆ. ಅಲ್ಲಿನ ಮನೆಯಿಂದ 2,563 ಕಿಲೋಗ್ರಾಂಗಳಷ್ಟು ಶಂಕಿತ ಸ್ಫೋಟಕ ವಸ್ತುಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಫರಿದಾಬಾದ್ ಪೊಲೀಸರು ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬೆಳಿಗ್ಗೆಯಿಂದ ಈ ಮನೆಯಲ್ಲಿ ಜಂಟಿ ದಾಳಿ ನಡೆಸುತ್ತಿದ್ದಾರೆ. ಡಾ. ಮುಜಾಮಿಲ್ ಈ ಮನೆಯನ್ನು ಬಾಡಿಗೆಗೆ ಪಡೆದಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಮನೆ...
ಜಮ್ಮು ಮತ್ತು ಕಾಶ್ಮೀರದೆಹಲಿರಾಜ್ಯರಾಷ್ಟ್ರೀಯಸುದ್ದಿ

ಉಗ್ರರ ಸಿಮ್ ದುರ್ಬಳಕೆ ಬೆನ್ನತ್ತಿದ್ದ ಕಾಶ್ಮೀರ ಪೊಲೀಸರು – ಕಹಳೆ ನ್ಯೂಸ್

ಶ್ರೀನಗರ : (ಪಿಟಿಐ) ಉಗ್ರರು ಬಳಸುವ ಸಿಮ್ ಕಾರ್ಡ್ ದುರ್ಬಳಕೆ ಪ್ರಕರಣದ ಬೆನ್ನತ್ತಿದ್ದಾರೆ ಕಾಶ್ಮೀರ ಪೊಲೀಸರು. ಭಯೋತ್ಪಾದಕರು ಸಿಮ್ ಕಾರ್ಡ್ಗಳನ್ನು ದುರುಪಯೋಗಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಶ್ಮೀರದ ಮೂರು ಜಿಲ್ಲೆಗಳ ವಿವಿಧ ಸ್ಥಳಗಳಲ್ಲಿ ಇಂದು ಗುಪ್ತಚರ ವಿಭಾಗ (ಸಿಐಕೆ) ಶೋಧ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಶ ವಿರೋಧಿ ಶಕ್ತಿಗಳು ಸಿಮ್ ಕಾರ್ಡ್ಗಳನ್ನು ದುರುಪಯೋಗಪಡಿಸಿಕೊಂಡ ಪ್ರಕರಣದ ತನಿಖೆಯ ಭಾಗವಾಗಿ ಸಿಐಕೆ ಕುಲ್ಗಾಮ್, ಕುಂಜರ್ (ಬಾರಾಮುಲ್ಲಾ) ಮತ್ತು ಶೋಪಿಯಾನ್ನಲ್ಲಿ ಶೋಧ ನಡೆಸುತ್ತಿದೆ ಎಂದು...
ಜಮ್ಮು ಮತ್ತು ಕಾಶ್ಮೀರಸುದ್ದಿ

ಜಮ್ಮು-ಕಾಶ್ಮೀರ ಭಾರತ ಅವಿಭಾಜ್ಯ ಅಂಗ, ಮಾನವ ಹಕ್ಕು ಉಲ್ಲಂಘನೆ ಕೊನೆಗೊಳಿಸಿ: ವಿಶ್ವಸಂಸ್ಥೆಯಲ್ಲಿ ಪಾಕ್ ವಿರುದ್ಧ ಗುಡುಗಿದ ಭಾರತ

ನ್ಯೂಯಾರ್ಕ್: ಪಾಕಿಸ್ತಾನವು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ರದೇಶಗಳಲ್ಲಿ, ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಸುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಕೊನೆಗೊಳಿಸಬೇಕು ಎಂದು ಭಾರತ ಆಗ್ರಹಿಸಿದೆ. 80ನೇ ವಿಶ್ವಸಂಸ್ಥೆಯ ದಿನದಂದು ಆಯೋಜಿಸಲಾದ ಮುಕ್ತ ಚರ್ಚೆಯ ಸಂದರ್ಭದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಉದ್ದೇಶಿಸಿ ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಪರ್ವತನೇನಿ ಹರೀಶ್ ಅವರು ಮಾತನಾಡಿದರು. ಈ ವೇಳೆ ಪಾಕಿಸ್ತಾನದ ವಿರುದ್ಧ ಗುಡುಗಿದರು. ಪಾಕಿಸ್ತಾನವು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ರದೇಶಗಳಲ್ಲಿ ಪಾಕಿಸ್ತಾನ ಸೇನೆ ದಬ್ಬಾಳಿಕೆ, ಕ್ರೌರ್ಯ ಮತ್ತು...
ಜಮ್ಮು ಮತ್ತು ಕಾಶ್ಮೀರರಾಜ್ಯಸುದ್ದಿ

ಜಮ್ಮು-ಕಾಶ್ಮೀರದ ಸಾಂಬಾ ಗಡಿಯಲ್ಲಿ ಕಾಣಿಸಿಕೊಂಡ ಪಾಕ್ ಡ್ರೋನ್; ಶೋಧ ಚುರುಕು – ಕಹಳೆ ನ್ಯೂಸ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಇರುವ ಹಳ್ಳಿಗಳ ಮೇಲೆ ಎರಡು ಪಾಕಿಸ್ತಾನಿ ಡ್ರೋನ್‌ಗಳು ಸುಳಿದಾಡುತ್ತಿರುವುದು ಕಂಡುಬಂದಿದ್ದು, ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಶುಕ್ರವಾರ ತಡರಾತ್ರಿ ಘಗ್ವಾಲ್ ಪ್ರದೇಶದ ಚಲ್ಲಿಯಾರಿ ಗ್ರಾಮ ಮತ್ತು ರಾಮಗಢದ ಚಮ್ಲಿಯಾಲ್ ಗ್ರಾಮದ ಮೇಲೆ ಡ್ರೋನ್‌ಗಳು ಕಾಣಿಸಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರೊಂದಿಗೆ ಸೇರಿ ಗಡಿ ಭದ್ರತಾ ಪಡೆ(ಬಿಎಸ್‌ಎಫ್)ಎರಡೂ ಪ್ರದೇಶಗಳನ್ನು ಸುತ್ತುವರೆದಿದ್ದು, ಶೋಧ ಕಾರ್ಯಾಚರಣೆಯನ್ನು...
1 2 3 5
Page 1 of 5