ಹೃದಯಸ್ತಂಭನ ; ಗೋವಾ ಸಚಿವ, ಮಾಜಿ ಸಿಎಂ ರವಿ ನಾಯ್ಕ್ ನಿಧನ-ಕಹಳೆ ನ್ಯೂಸ್
ಪಣಜಿ: ಹೃದಯಸ್ತಂಭನದಿಂದ ಗೋವಾ ಮಾಜಿ ಸಿಎಂ, ಕೃಷಿ ಸಚಿವ ರವಿ ನಾಯ್ಕ್ ಮಂಗಳವಾರ ತಡರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಪಣಜಿಯಿಂದ 30 ಕಿ.ಮೀ ದೂರದಲ್ಲಿರುವ ನಿವಾಸದಲ್ಲಿ ರವಿ ನಾಯ್ಕ್ ಅವರು ಹೃದಯಸ್ತಂಭನಕ್ಕೊಳಗಾಗಿದ್ದರು. ಕೂಡಲೇ ಪೊಂಡಾ ಪಟ್ಟಣದ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಯಿತು. ಆದರೆ ತಡರಾತ್ರಿ 1 ಗಂಟೆಯ ಸುಮಾರಿಗೆ ರವಿ ನಾಯ್ಕ್ ನಿಧನರಾಗಿದ್ದಾರೆ. ಇಂದು ಸಂಜೆ 3 ಗಂಟೆಯ ಸುಮಾರಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. 79...





