ಬೆಂಗಳೂರಲ್ಲಿ ಗ್ಯಾಸ್ ಲೀಕ್ ಆಗಿ ಹೊತ್ತಿ ಉರಿದ ಮನೆ : ಇಬ್ಬರು ಸಾವು, ಮೂವರಿಗೆ ಗಾಯ-ಕಹಳೆ ನ್ಯೂಸ್
ಬೆಂಗಳೂರು : ಮನೆಯಲ್ಲಿ ಅಡುಗೆ ಅನೀಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದ್ದು, ಈ ವೇಳೆ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಸಾವನ್ನಪ್ಪಿದ್ದರೆ, ಮೂವರಿಗೆ ಗಂಭೀರವಾದ ಗಾಯಗಳಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದಿದೆ. ನೆಲಮಂಗಲ ಬಳಿಯ ಅಡಕಮಾರನಹಳ್ಳಿ ಓವರ್ ಟ್ಯಾಂಕ್ ಬಳಿ ಈ ಘಟನೆ ಸಂಭವಿಸಿದೆ. ನಾಗರಾಜ್ (50), ಶ್ರೀನಿವಾಸ್ (50) ಮೃತ ದುರ್ದೈವಿಗಳಾಗಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಂಗಯ್ಯ ಎಂಬವರಿಗೆ ಸೇರಿದ ಎರಡು ಬಾಡಿಗೆ ಮನೆಗಳಲ್ಲಿ ನಾಗರಾಜ್ ಅವರು ಒಂದು...







