ಗೋಹತ್ಯೆ ತಡೆಯುವ ನೆಪದಲ್ಲಿ ಮುಸ್ಲಿಮರ ಮನೆಗಳಿಗೆ ಕಾನೂನುಬಾಹಿರ ಪ್ರವೇಶ : ಪುನೀತ್ ಕೆರೆಹಳ್ಳಿ ವಿರುದ್ಧ ಗೃಹ ಸಚಿವರು, ಐಜಿಪಿಗೆ ದೂರು -ಕಹಳೆ ನ್ಯೂಸ್
ಬೆಂಗಳೂರು : ಗೋಹತ್ಯೆಯನ್ನು ತಡೆಯುವ ನೆಪದಲ್ಲಿ ನಗರದ ಮುಸ್ಲಿಮರ ಮನೆಗಳಿಗೆ ಕಾನೂನುಬಾಹಿರವಾಗಿ ಪ್ರವೇಶಿಸಿರುವ ಪುನೀತ್ ಕೆರೆಹಳ್ಳಿ ಮತ್ತು ಸಹಚರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ವಕೀಲರು, ಸಾಮಾಜಿಕ ಕಾರ್ಯಕರ್ತರ ನಿಯೋಗ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಅವರಿಗೆ ದೂರು ಸಲ್ಲಿಸಿದೆ. ಜೂ.7ರಂದು ಬಕ್ರೀದ್ ಹಬ್ಬಕ್ಕೂ ಮುಂಚಿತವಾಗಿ ಪುನೀತ್ ಕೆರೆಹಳ್ಳಿ ಮತ್ತು ಸಹಚರರು ನಗರದ ಟ್ಯಾನರಿ ರಸ್ತೆ, ಅಹ್ಮದ್‍ನಗರ ಮತ್ತು ಶಿವಾಜಿನಗರದಲ್ಲಿರುವ ಮುಸ್ಲಿಮರ...







