ಬೆಂಗಳೂರಲ್ಲಿ ಇನ್ನು ಸಿಂಗಲ್ ಆಗಿ ಕಾರಿನಲ್ಲಿ ಓಡಾಡಿದ್ರೂ ಟ್ಯಾಕ್ಸ್: ಇದೊಂದು ಬಾಕಿ ಇತ್ತು ಎಂದ ಪಬ್ಲಿಕ್ – ಕಹಳೆ ನ್ಯೂಸ್
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿರುವ ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಹಾಕಲು ಸರ್ಕಾರ ಪೀಕ್ ಅವರ್ ನಲ್ಲಿ ಒಬ್ಬೊಬ್ಬರೇ ಕಾರಿನಲ್ಲಿ ಓಡಾಡಿದರೂ ಟ್ಯಾಕ್ಸ್ ಹಾಕಲು ಚಿಂತನೆ ನಡೆಸಿದೆ. ಇದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದ್ದು ಇದೊಂದು ಬಾಕಿ ಇತ್ತು ಎನ್ನುತ್ತಿದ್ದಾರೆ. ಇದೀಗ ಕರ್ನಾಟಕದಲ್ಲಿ ಎಲ್ಲದಕ್ಕೂ ಟ್ಯಾಕ್ಸ್, ದುಬಾರಿ ದುನಿಯಾ ಎಂಬ ಸ್ಥಿತಿಯಾಗಿದೆ. ಬೆಂಗಳೂರಿಗರಿಗಂತೂ ಬಸ್, ಹಾಲು, ಮೆಟ್ರೋ ಎಲ್ಲವೂ ದುಬಾರಿ. ಕೊನೆಗೆ ಸಾರ್ವಜನಿಕರು ಬಳಸುವ ಪಬ್ಲಿಕ್ ಟಾಯ್ಲೆಟ್ ಶುಲ್ಕವೂ ಹೆಚ್ಚಾಗಿದೆ. ಇಂತಹ...







