ನಿವೃತ್ತಿಯಾಗಲು ಯುವರಾಜ್‍ಸಿಂಗ್ ಯೋಚನೆ!? – ಕಹಳೆ ನ್ಯೂಸ್
ಭಾರತದ ಖ್ಯಾತ ಕ್ರಿಕೆಟಿಗ ಯುವರಾಜ್ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸುವ ಯೋಜನೆಯಲ್ಲಿದ್ದಾರೆ ಎಂಬ ಸುದ್ದಿ ಈಗ ಹರಿದಾಡಲು ಆರಂಭವಾಗಿದೆ. ಆದರೆ ಈ ಬಗೆಗಿನ ಪ್ರಶ್ನೆಗೆ ಉತ್ತರಿಸಲು ಯುವರಾಜ್‍ಸಿಂಗ್ ಲಭ್ಯರಾಗಿಲ್ಲ. ಪ್ರಾಂಚೈಸಿಗಳು ಹೊಂದಿರುವ ಲೀಗ್‍ಗಳಲ್ಲಿ ಮುಂದುವರೆಯುವುದು ಅವರ ಯೋಜನೆ ಎನ್ನಲಾಗಿದೆ. ಯುವರಾಜ್ ಕೆಲವರಲ್ಲಿ ತಮ್ಮ ನಿವೃತ್ತಿ ಕುರಿತು ಅನೌಪಚಾರಿಕವಾಗಿ ಹೇಳಿಕೊಂಡಿದ್ದಾರೆ ಇದನ್ನು ಅವರು ಅಧಿಕೃತವಾಗಿ ಪ್ರಕಟಿಸಲೂಬಹುದು ಎಂದು ಬಿಸಿಸಿಐ ಅಧಿಕಾರಿಯೋಬ್ಬರು ಹೇಳಿದ್ದಾರೆ. 2011ರ ವಿಶ್ವಕಪ್ ವಿಜೇತ ಭಾರತ ತಂಡದ ಹೀರೋ...







