ಜಗ ತಿರುಗಿ ನೋಡುವಂತೆ ಮೂಡುಬಿದರೆಯಲ್ಲಿ ನಡೆಯಲಿಕ್ಕಿದೆ ಇಂದಿನಿಂದ ಜಾಂಬೂರಿ..! ; ಜೈನಕಾಶಿಯಲ್ಲಿ 25ನೇ ವಿಶ್ವ ಸಾಂಸ್ಕೃತಿಕ ಜಾಂಬೂರಿ – ಕಹಳೆ ನ್ಯೂಸ್
ಮೂಡುಬಿದಿರೆ: ಮೊದಲ ಬಾರಿಗೆ ದೇಶದಲ್ಲಿ ಯೋಜಿಸಿರುವ 25ನೇ ವಿಶ್ವ ಸಾಂಸ್ಕೃತಿಕ ಜಾಂಬೂರಿಗೆ ಮೂಡುಬಿದಿರೆ ಸರ್ವಸಜ್ಜಾಗಿದೆ. ಸುಮಾರು 20 ಸಾವಿರಕ್ಕೂ ಅಧಿಕ ಮಂದಿ ಸ್ಕೌಟ್, ಗೈಡ್, ರೋವರ್ ಮತ್ತು ರೇಂಜರ್ಸ್ ಶಿಬಿರಾರ್ಥಿಗಳು ಈಗಾಗಲೇ ಆಗಮಿಸಿದ್ದು, ಬುಧವಾರ ಮಧ್ಯಾಹ್ನದ ವೇಳೆಗೆ 60 ಸಾವಿರ ಮಂದಿ ಆಗ ಮಿಸುವರು. ಬೆಳಗ್ಗೆಯಿಂದಲೇ ವಿವಿಧ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಗಳು ನಡೆಯಲಿದ್ದು, ಡಿ. 27ರ ವರೆಗೂ ಮುಂದು ವರಿಯಲಿದೆ. ಸಾರ್ವಜನಿಕರ ಪಾಲ್ಗೊಳ್ಳುವಿಕೆಗೂ ಅವಕಾಶವಿರುವುದರಿಂದ ಈ ಜಾಂಬೂರಿ ವಿಶೇಷವೆನಿಸಿದೆ. ಶಿಬಿರಾರ್ಥಿಗಳಿಗೆ ದೈನಂದಿನ ಚಟುವಟಿಕೆಗಳಿಗೆ...







