ಕಚ್ಚಾತೈಲ ಖರೀದಿಯಲ್ಲಿ ಭಾರತ ಸಂಪೂರ್ಣ ಸ್ವತಂತ್ರ : ರಷ್ಯಾ ಸ್ಪಷ್ಟನೆ – ಕಹಳೆ ನ್ಯೂಸ್
ಭಾರತವು ಯಾವುದೇ ದೇಶದಿಂದ ಕಚ್ಚಾತೈಲವನ್ನು ಖರೀದಿಸಲು ಸಂಪೂರ್ಣವಾಗಿ ಸ್ವತಂತ್ರವಾಗಿದೆ ಎಂದು ರಷ್ಯಾ ಸ್ಪಷ್ಟಪಡಿಸಿದೆ. ರಷ್ಯಾ ಎಂದಿಗೂ ಭಾರತದ ಏಕೈಕ ಇಂಧನ ಪಾಲುದಾರನಾಗಿರಲಿಲ್ಲ ಮತ್ತು ತೈಲ ಖರೀದಿಯ ಮೂಲಗಳಲ್ಲಿ ಬದಲಾವಣೆ ಆಗುವುದು ಅಸಾಮಾನ್ಯವಲ್ಲ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ. ಈ ಕುರಿತು ಮಾತನಾಡಿದ ಪೆಸ್ಕೋವ್, “ಇತರ ಎಲ್ಲಾ ಅಂತಾರಾಷ್ಟ್ರೀಯ ಇಂಧನ ತಜ್ಞರಂತೆ ನಮಗೂ ತಿಳಿದಿದೆ- ಭಾರತಕ್ಕೆ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಪೂರೈಸುವ ಏಕೈಕ ದೇಶ ರಷ್ಯಾ ಅಲ್ಲ....







