ಕೆ.ಗೋಪಾಲಕೃಷ್ಣ ಭಟ್ ಕಟ್ಟೆತ್ತಿಲ ಅವರ ” ಶ್ರೀಗುರು ಪಾದಪದ್ಮ ” ಕವನ – ೨
" ಕಾರ್ಮುಗಿಲು " ಓ ಮುಗಿಲ ಸಾಲುಗಳೆ ಎತ್ತ ಸಾಗುವಿರಿ l ಸೂರ್ಯ ಚಂದ್ರರ ನೋಡೆ ll ಧ್ರುವ ತಾರೆಗಳ ಕಾಡೆ l ಬೇಗ ಓಡುವಿರಿ ಜಾರುವಿರಿ ಸಾಗದಿರಿ ll೧ll ನಾ ಬರಲೆ ಹತ್ತಿರಕೆ l ಆ ಬಾನಿನೆತ್ತರಕೆ l ಮರೆಮರೆತು ಈ ಜಗದ ನೆನಪನೆಲ್ಲ l ರವಿಶಶಿಯ ಹತ್ತಿರಕೆ l ಸಿಡಿಲು ಗುಡುಗಿನ ಎತ್ತರಕೆ l ಹೊಸಹೊಸ ಕಲ್ಪನಾ ಸೊಬಗಿದೆಲ್ಲ ll೨ll ಆ ಬಾಲರವಿ ನೆನಪಿನಂಗಳದಲ್ಲಿ l...

