Monday, May 20, 2024
ಸುದ್ದಿ

ಉಡುಪಿಯಲ್ಲಿ ಕುಡುಕರಿಗೊಂದು ಸ್ಪೆಷಲ್ ಆಫರ್- ಬಾರ್ ಗೆ ಬಂದವ್ರಿಗೆ ಉಚಿತ ವಾಹನದ ವ್ಯವಸ್ಥೆ – ಕಹಳೆ ನ್ಯೂಸ್

ಉಡುಪಿ: ಹೆದ್ದಾರಿ ಪಕ್ಕದ ಬಾರ್ ಗಳನ್ನು ಶಿಫ್ಟ್ ಮಾಡಿ ರಸ್ತೆಯಿಂದ ದೂರ ಬಾರ್ ಕಟ್ಟಿರುವ ಮಾಲೀಕರಿಗೆ ಈಗ ಗಿರಾಕಿಗಳದ್ದೇ ಸಮಸ್ಯೆಯಾಗಿದೆ. ಈ ಸಮಸ್ಯೆಗೆ ಉಡುಪಿಯ ಅಜೆಕಾರಿನ ರಚನಾ ಬಾರ್ ಹೊಸ ಉಪಾಯವೊಂದನ್ನು ಹುಡುಕಿದ್ದು, ಇದೀಗ ಫಜೀತಿಗೆ ಒಳಗಾಗಿದೆ.

ಜಾಹೀರಾತು
ಜಾಹೀರಾತು

ರಚನಾ ಬಾರ್ ನ ಮಾಲೀಕ ನವೀನ್ ಅವರು, ಗ್ರಾಹಕರ ಸೇವೆಗೆ ಉಚಿತ ಆಟೋ ವ್ಯವಸ್ಥೆಯ ಬೋರ್ಡೊಂದನ್ನು ರೆಡಿ ಮಾಡಿದ್ದರು. ಈ ಬೋರ್ಡನ್ನು ಬಾರ್ ಪಕ್ಕ ಕಟ್ಟಿದ್ದರು. ಆದ್ರೆ ಬಾರ್ ಮಾಲೀಕ ಇಲ್ಲದ ಸಂದರ್ಭದಲ್ಲಿ ಕೆಲ ಹುಡುಗರು ಆ ಬ್ಯಾನರನ್ನು ತೆಗೆದು ಆಟೋ ರಿಕ್ಷಾಗೆ ಕಟ್ಟಿದ್ದಾರೆ ಅಂತ ಮಾಲೀಕ ಹೇಳುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಆಟೋ ರಿಕ್ಷಾಗೆ ಕಟ್ಟಿದ ಬ್ಯಾನರ್ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಬಕಾರಿ ಇಲಾಖೆವರೆಗೂ ಇದು ವ್ಯಾಪಿಸಿದ್ದು, ಅಬಕಾರಿ ಅಧಿಕಾರಿಗಳು ಗರಂ ಆಗಿದ್ದಾರಂತೆ. ಸುಪ್ರೀಂ ಕೋರ್ಟ್ ಆದೇಶದಿಂದ ಲಾಸ್ ಆಗಿದೆ. ಗ್ರಾಹಕರನ್ನು ಸೆಳೆಯಲು ಈ ತರ ಐಡಿಯಾ ಮಾಡಿದ್ದೇ ತಪ್ಪಾಯ್ತಾ..? ಅಂತ ಬಾರ್ ಓನರ್ ನವೀನ್ ಬೇಸರ ವ್ಯಕ್ತಪಡಿಸಿದ್ದಾರೆ.

ಜಾಹೀರಾತು