Friday, March 20, 2026
ಸುದ್ದಿ

ಆರ್. ಪ್ರಗ್ನಾನಂದ ಭೇಟಿಯಾದ ಪ್ರಧಾನಿ ; ‘ಚೆಸ್ ಚಾಂಪಿಯನ್’ಗೆ ಮೋದಿ ವಿಶೇಷ ಸಂದೇಶ – ಕಹಳೆ ನ್ಯೂಸ್

ಚೆಸ್ ಗ್ರ‍್ಯಾಂಡ್ ಮಾಸ್ಟರ್ ಆರ್ ಪ್ರಗ್ನಾನಂದ ಅವ್ರು ಚೆಸ್ ವಿಶ್ವಕಪ್’ನಲ್ಲಿ ಬೆಳ್ಳಿ ಪದಕ ಗೆದ್ದ ನಂತರ ಸುದ್ದಿಯಲ್ಲಿದ್ದಾರೆ. ಸ್ಪರ್ಧೆಯ ಫೈನಲ್’ನಲ್ಲಿ ಅವರು ಹಾಲಿ ವಿಶ್ವದ ನಂ.1 ಮ್ಯಾಗ್ನಸ್ ಕಾರ್ಲ್ಸನ್ ಅವರಿಂದ ಸೋತರೂ, ಸ್ಪರ್ಧೆಯಲ್ಲಿ ಅವರ ಪ್ರಭಾವಶಾಲಿ ಪ್ರಯಾಣವು ಸಾಕಷ್ಟು ಮೆಚ್ಚುಗೆ ಗಳಿಸಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು


ಇನ್ನು ಪ್ರಧಾನಿ ನರೇಂದ್ರ ಮೋದಿ ಯುವ ಚೆಸ್ ಗ್ರ‍್ಯಾಂಡ್ ಮಾಸ್ಟರ್ ಅವರನ್ನ ಪಂದ್ಯಾವಳಿಯ ಸಮಯದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಬಾರಿ ಶ್ಲಾಘಿಸಿದ್ದಾರೆ. ಸಧ್ಯ ಅವರು ಗುರುವಾರ ಪ್ರಗ್ನಾನಂದ ಮತ್ತು ಅವರ ಪೋಷಕರನ್ನ ಭೇಟಿಯಾಗಿದ್ದಾರೆ.
“ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವ್ರನ್ನ ಅವರ ನಿವಾಸದಲ್ಲಿ ಭೇಟಿಯಾಗುವುದು ದೊಡ್ಡ ಗೌರವವಾಗಿದೆ! ನನಗೆ ಮತ್ತು ನನ್ನ ಹೆತ್ತವರಿಗೆ ಪ್ರೋತ್ಸಾಹದ ಎಲ್ಲಾ ಮಾತುಗಳಿಗೆ ಧನ್ಯವಾದಗಳು ಸರ್” ಎಂದು ಪ್ರಜ್ಞಾನಂದ ಎಕ್ಸ್ (ಹಿಂದೆ ಟ್ವಿಟರ್ ಎಂದು ಕರೆಯಲಾಗುತ್ತಿತ್ತು)ನಲ್ಲಿ ಪೋಸ್ಟ್ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು