ಚಿನ್ನ.. ಮರೆಯದೆ ತೊರೆಯದೆ ಎದೆಗೊತ್ತಿ ಪ್ರೀತಿಸುವೆ : ವಿವಾಹ ವಾರ್ಷಿಕೋತ್ಸವಕ್ಕೆ ವಿಜಯ ರಾಘವೇಂದ್ರ ಭಾವುಕ ಪೋಸ್ಟ್ – ಕಹಳೆ ನ್ಯೂಸ್

ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಸಾವನ್ನಪ್ಪಿ ಇಂದಿಗೆ 19 ದಿನಗಳು ಕಳೆದಿದೆ. ಇಂದು ಸ್ಪಂದನಾ, ವಿಜಯ ರಾಘವೇಂದ್ರ ಅವರ ವಿವಾಹ ವಾರ್ಷಿಕೋತ್ಸವ. 2007 ಆಗಸ್ಟ್ 26ರಂದು ಮದುವೆಯಾಗಿದ್ದ ಈ ಮುದ್ದಾದ ಜೋಡಿ ಇಂದು ತಮ್ಮ 16ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕಿತ್ತು. ಆದರೆ ವಿಜಯ ರಾಘವೇಂದ್ರ ಅವರಿಂದ ಸ್ಪಂದನಾ ದೂರವಾಗಿರೋದು ಬಹಳ ನೋವಿನ ಸಂಗತಿ.

ತಮ್ಮ ವಿವಾಹ ವಾರ್ಷಿಕೋತ್ಸವದ ಹಿನ್ನೆಲೆ ನಟ ವಿಜಯ ರಾಘವೇಂದ್ರ ಅವರು ಒಂದು ಪೋಸ್ಟ್ ಮಾಡಿದ್ದಾರೆ. ಸ್ಪಂದನಾ ಅವರನ್ನು ನೆನೆಯುತ್ತಾ ಭಾವುಕವಾದ ಸಾಲುಗಳನ್ನ ಬರೆದಿದ್ದಾರೆ.
ಚಿನ್ನ.. ಇಣುಕು ನೋಟ ಬೀರಿ ಹೋದೆ ಬದುಕಿನ ಅಂಗಳದಲಿ,
ಎಲ್ಲೆ ಮೀರಿ ಒಲವ ನೀಡಿದೆ ಎದೆಯ ಅಂತರಾಳದಲಿ
ಬದುಕನ್ನ ಕಟ್ಟಿ ಸರ್ವಸ್ವವಾದೆ…
ಉಸಿರಲ್ಲಿ ಬೆರೆತು ಜೀವಂತವಾದೆ..
ಮುದ್ದಾದ ನಗುವಿನಲ್ಲಿದ್ದ ಶಕ್ತಿ ಪರ್ವತದಷ್ಟು
ಮರೆಯದೆ ತೊರೆಯದೆ ಎದೆಗೊತ್ತಿ ಪ್ರೀತಿಸುವೆ
ಶೌರ್ಯನಲ್ಲಿ ನಾ ನಿನ್ನ ಬಿಗಿದಪ್ಪುವಷ್ಟು
ವಿಜಯ ರಾಘವೇಂದ್ರ ಫೋಸ್ಟ್ ಮಾಡಿರುವ ಈ ಭಾವುಕ ಸಾಲುಗಳು ಓದುಗರ ಮನ ಮಿಡಿಯುವಂತೆ ಮಾಡಿದೆ.















