Tuesday, March 17, 2026
ಸುದ್ದಿ

ತಮಿಳುನಾಡು ಧರ್ಮಪುರಂ ಅಧೀನಂ ಮಠದಿಂದ ಚಿನ್ನದ ಪದಕ, ಸ್ಯಾಕ್ಸೋಪೋನ್ ಕಲಾನಿಧಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಡಾ.ಪಿ.ಕೆ ಗಣೇಶ್ –ಕಹಳೆ ನ್ಯೂಸ್

ಸ್ಯಾಕ್ಸೋಪೋನ್ ವಾದಕ ಡಾ.ಪಿ.ಕೆ ಗಣೇಶ್‌ರವರಿಗೆ ಪುತ್ತೂರು : ತಮಿಳುನಾಡಿನ ಮೈಲಾಡುತುರೈಯಲ್ಲಿರುವ ಧರ್ಮಪುರಂ ಅಧೀನಂ 27ನೇ ಗುರು ಮಹಾಸನ್ನಿಧಾನಂ ತಿರುಪ್ಪಾನಂದಲ್ ಕುಂಬಾಭಿಷೇಕದಲ್ಲಿ ನಡೆದ ಸಂಗೀತ ಕಚೇರಿಯಲ್ಲಿ ಪುತ್ತೂರಿನ ಸ್ಯಾಕ್ಸೋಪೋನ್ ವಾದಕ ಡಾ.ಪಿ.ಕೆ ಗಣೇಶ್ ರವರು ಕಲಾನಿಧಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಜು.07 ರಂದು ನಡೆದ ಸಂಗೀತ ಕಚೇರಿಯಲ್ಲಿ ಪುತ್ತೂರಿನ ಇತಿಹಾಸ ಪ್ರಸಿದ್ದ ಶ್ರೀಮಹಾಲಿಂಗೇಶ್ವರ ದೇವಳದ ಪ್ರಧಾನ ಸ್ಯಾಕ್ಸೋಪೋನ್ ವಾದಕ ಡಾ.ಪಿ.ಕೆ ಗಣೇಶ್ ಅವರಿಗೆ ಚಿನ್ನದ ಪದಕ ಮತ್ತು ಸ್ಯಾಕ್ಸೋಪೋನ್ ಕಲಾನಿಧಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಇನ್ನೂ ಡಾ. ಪಿ.ಕೆ ಗಣೇಶ್ ಅವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡವರದ್ದಾರೆ. ಇತಿಹಾಸದಲ್ಲೇ ಮೊದಲ ಬಾರಿಗೆ ತಮಿಳುನಾಡಿನ ಧರ್ಮಪುರಂ ಅಧೀನಂ (ಮಠ) ಸ್ಯಾಕ್ಸೋಪೋನ್ ಕ್ಷೇತ್ರಕ್ಕೆ ನೀಡಿದ ಪ್ರಶಸ್ತಿ ಹಾಗೂ ಚಿನ್ನದ ಪದಕ ಇದಾಗಿದೆ.