Wednesday, March 18, 2026
ಸುದ್ದಿ

ರಿಶಬ್ ಶೆಟ್ಟಿ ಹುಟ್ಟುಹಬ್ಬ ಆಚರಿಸಲು ಬಂದ ಅಭಿಮಾನಿಗಳಿಗೆ ಭರ್ಜರಿ ಊಟ – ಕಹಳೆ ನ್ಯೂಸ್

ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಆಗಮಿಸಿದ ಅಭಿಮಾನಿಗಳಿಗೆ ಭರ್ಜರಿ ಊಟದ ವ್ಯವಸ್ಥೆ ಮಾಡಿದ ರಿಷಬ್ ಶೆಟ್ಟಿ, ವಾರದ ಮೊದಲೇ ಈ ಬಗ್ಗೆ ವಿಡಿಯೋ ಮಾಡಿ ಅಭಿಮಾನಿಗಳಿಗೆ ಆಹ್ವಾನ ನೀಡಿದ್ದ ರಿಷಬ್,ಅದರಂತೆ ನಿನ್ನೆ ಬೆಂಗಳೂರಿನ ನಂದಿ ಲಿಂಕ್ ಮೈದಾನದಲ್ಲಿ ರಿಷಬ್ ಶೆಟ್ಟಿ ಆಪ್ತ ಹಾಗೂ ನಟ ಪ್ರಮೋದ್ ಶೆಟ್ಟಿ ಮುಂದಾಳತ್ವದಲ್ಲಿ ಅದ್ದೂರಿಯಾಗಿ ಹುಟ್ಟುಹಬ್ಬ ಆಯೋಜನೆಗೊಂಡಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಹುಟ್ಟುಹಬ್ಬಕ್ಕೆ ಬರುವ ಅಭಿಮಾನಿಗಳು ಹಸಿದುಕೊಂಡು ಹೋಗಬಾರದು ಎಂಬ ಉದ್ದೇಶದಿಂದ ರಿಷಬ್ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಿದ್ದರು. ಒಟ್ಟು 8 ಸಾವಿರ ಜನರಿಗೆ ಊಟ ರೆಡಿಯಾಗಿತ್ತು. ಈ ಭರ್ಜರಿ ಊಟದ ಮೆನುವಿನಲ್ಲಿ ಪಲಾವ್, ಮೊಸರು ಬಜ್ಜಿ, ಮೊಸರನ್ನ, ಉಪ್ಪಿನಕಾಯಿ, ಅನ್ನ, ರಸಂ, ಮದ್ದೂರು ವಡೆ, ಬರ್ಫಿ ಮತ್ತು ಹಪ್ಪಳ ಮಾಡಿಸಲಾಗಿತ್ತು. ರಿಷಬ್‌ರ ಪಕ್ಕದ ಊರಾದ ಉಪ್ಪಿನ ಕುದುರುವಿನ ಅಡುಗೆ ಕಾಂಟ್ರ‍್ಯಾಕ್ಟರ್ ಗೋಪಾಲ್ ಮೆಲಾಡಿ ಅವರನ್ನು ಕರೆಯಿಸಿ ಅಡುಗೆ ಮಾಡುವ ಜವಾಬ್ದಾರಿಯನ್ನು ವಹಿಸಲಾಗಿತ್ತು.

ರಿಷಬ್ ಶೆಟ್ಟಿಯವರ ಹುಟ್ಟುಹಬ್ಬ ಆಚರಿಸಲು ಅಭಿಮಾನಿಗಳು ಮಧ್ಯಾಹ್ನದಿಂದಲೇ ನಂದಿ ಲಿಂಕ್ ಮೈದಾನದಲ್ಲಿ ಬಂದು ಕಾಯುತ್ತಿದ್ದರು. ಆದರೆ ಜೋರಾದ ಮಳೆ ಬಂದ ಕಾರಣ ಆಚರಣೆ ನಡೆಯುವುದೇ ಅನುಮಾನ ಎಂಬAತಾಗಿತ್ತು. ಮಳೆಯ ನಡುವೆಯೂ ಅಭಿಮಾನಿಗಳು ಕಾಯುತ್ತಿದ್ದರು. ನಂತರ ಸಂಜೆಯ ಹೊತ್ತಿಗೆ ಪತ್ನಿ ಪ್ರಗತಿ ಶೆಟ್ಟಿಯೊಂದಿಗೆ ವೇದಿಕೆಗೆ ಆಗಮಿಸಿದ ರಿಷಬ್ ಅಭಿಮಾನಿಗಳಿಗೆ ಧನ್ಯವಾದ ಹೇಳಿದರು.

ಈ ರೀತಿ ದೊಡ್ಡ ಸಂಖ್ಯೆಯ ಅಭಿಮಾನಿಗಳೊಟ್ಟಿಗೆ ರಿಷಬ್ ಶೆಟ್ಟಿ ತಮ್ಮ ಹುಟ್ಟುಹಬ್ಬ ಆಚರಸಿಕೊಳ್ಳುತ್ತಿರುವುದು ಇದೇ ಮೊದಲು. ಈ ವೇಳೆ ತುಸು ಭಾವುಕರಾದ ರಿಷಬ್, ‘ಕಾಂತಾರಕ್ಕೂ ಮುಂಚೆ ಇದನ್ನೆಲ್ಲ ಹೇಗೆ ನಿಭಾಯಿಸಬೇಕು ಎಂದು ನನಗೆ ತಿಳಿದಿರಲಿಲ್ಲ. ಅದರೆ ನಿಮ್ಮನ್ನು ಭೇಟಿಯಾಗುವ ಆಸೆಯಿತ್ತು. ಪತ್ನಿ, ಪ್ರಮೋದ್ ಹಾಗೂ ನನ್ನ ಇತರ ಆತ್ಮೀಯ ಇಂತಹದ್ದೊoದು ಕಾರ್ಯಕ್ರಮ ಮಾಡಿ ಅಭಿಮಾನಿಗಳಿಗೆ ಧನ್ಯವಾದ ಹೇಳಲೇ ಬೇಕು ಎಂದು ಒತ್ತಾಯಿಸಿದರು.