
ಉಡುಪಿ : ಕಳೆದ 2-3 ದಿನಗಳಿಂದ ವಿಪರೀತ ಮಳೆಯಿಂದಾಗಿ ಕೃಷ್ಣಮಠ ಪಾರ್ಕಿಂಗ್ ಆಸುಪಾಸಿನ ಪ್ರದೇಶಗಳಾದ ಬೈಲಕರೆ ಹಾಗೂ ಕಲ್ಸಂಕಾದ ಹತ್ತಿರದ ಮನೆಗಳು ನೀರಿನಲ್ಲಿ ಸಂಪೂರ್ಣ ಮುಳುಗಡೆಯಾಗಿದೆ. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಸಂತ್ ಕುಮಾರ್, ಸಹಾಯಕ ಅಗ್ನಿಶಾಮಕ ದಳ ಅಧಿಕಾರಿ ಮೀರ್ ಮೊಹ್ಮದ್ ಗೌಸ್ ಹಾಗೂ ಸಿಬ್ಬಂದಿಗಳು ಉಡುಪಿ ಅಗ್ನಿಶಾಮಕ ಠಾಣೆ ಇವರ ನೇತೃತ್ವದಲ್ಲಿ ಅಲ್ಲಿನ ನಿವಾಸಿಗಳನ್ನು ಸ್ಥಳಾಂತರ ಮಾಡುವ ಕಾರ್ಯ ನಡೆಸಲಾಯಿತು.
















