
ಒಂದೆಡೆ ಬಡತನ ಮತ್ತೊಂದೆಡೆ ಮುರಿದು ಬೀಳುವ ಮನೆ ಕಷ್ಟದ ಬದುಕನ್ನೇ ಕಳೆಯುತಿದ್ದ ಕಮಲ ಅವರ ಕಣ್ಣೀರ ಬದುಕಿಗೆ ಒಂದಷ್ಟು ಸಮಾಧಾನ ನೀಡಿದವರು ವಗ್ಗ ಕುಲಾಲ್ ಸಂಘ ಸ್ಥಾಪನ ಸಮಿತಿ ಸದಸ್ಯರಾದ ಸದಾಶಿವ ಕುಲಾಲ್ ವಗ್ಗ ನಾರಾಯಣ ಇಜ್ಜದೋಡಿ ವಿವಿಧ ಸಂಘಟನೆಗಳ ನೆರವು ಪಡೆದು ಸುಸಜ್ಜಿತ ಕುಟೀರವನ್ನು ಕಮಲ ಅವರಿಗೆ ನಿರ್ಮಿಸಿ ಕೊಟ್ಟಿದ್ದು. ಜುಲಾಯಿ 9ರಂದು ನೂತನ ಗ್ರಹ ಪ್ರವೇಶಕ್ಕೆ ಸಜ್ಜಾಗಿದೆ.

ಬಂಟ್ವಾಳ ತಾಲೂಕು ಕಾವಳ ಮೂಡೂರು ಗ್ರಾಮದ ಕಲ್ಮ0ಜ ಬಳಿಯ ಕಮಲ ಅವರಿಗೆ ಇಬ್ಬರು ಮಕ್ಕಳು ಬಾಲ್ಯವಸ್ಥೆಯಲ್ಲಿಯೇ ಗಂಡನನ್ನು ಕಳೆದುಕೊಂಡ ಕಮಲ ಅವರು ಬೀಡಿ ಕಟ್ಟಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿದರು ಕಿರಿಯ ಪುತ್ರ ಐಟಿಐ ಶಿಕ್ಷಣ ಪಡೆದು ದುಡಿದು ತಾಯಿಗೆ ಅದಾರ ಆಗಲು ಸಿದ್ದವಾದಗ ಮಾರಕ ರೋಗವೊಂದು ಬಂದು ಶಾಶ್ವತ ಅಂಗವೈಕಲ್ಯ ಕಾಯಿಲೆಗೆ ತುತ್ತಾದರು
ಹಿರಿಯ ಪುತ್ರ ಪುಟ್ಟ ಉದ್ಯೋಗ ಮಾಡುತ್ತಾ ಕುಟುಂಬಕ್ಕೆ ಅದಾರ ಆಗುತ್ತಿದ್ದರು ವಿಧಿಯ ಕ್ರೂರ ಲೀಲೆ ಎಲ್ಲಿಂದ ಬಂತೋ ಗೊತ್ತಿಲ್ಲ ಕೆಲಸದಿಂದ ಬರುವಾಗ ಅಕ್ಷಿಡೆಂಟ್ ಆಗಿ ತನ್ನ ಕಾಲನ್ನು ಕಳೆದುಕೊಂಡರು ಇಂತಹ ಪರಿಸ್ಥಿತಿಯನ್ನು ಮನಗಂಡ ಸದಾಶಿವ ಕುಲಾಲ್ ವಗ್ಗ ನಾರಾಯಣ ಇಜ್ಜದೋಡಿ ವಿಶ್ವಹಿಂದುಪರಿಷದ್ ಕುಂಟಾಲಫಲ್ಕೆ ಘಟಕದ ಅಧ್ಯಕ್ಷರಾದ ಸತೀಶ್ ಕುಲಾಲ್ ಮದ್ವ ಇವರ ಮುಂಚೂಣಿಯಲ್ಲಿ ಹಾಗೂ ಉತ್ಸಾಹಿ ತರುಣ ವೃಂದ ವಗ್ಗ ಓಂಕಾರ ಪ್ರೆಂಡ್ಸ್ ಮಧ್ವ ಜೇಸಿಐ ಬಂಟ್ವಾಳ ವಿಶ್ವಹಿಂದೂಪರಿಷದ್ ಭಜರಂಗದಳ ಸಿಂತಾನಿಕಟ್ಟೆ ಶಾಖೆ ಪೂಪಾಡಿಕಟ್ಟೆ ಘಟಕ ಕುಂಟಾಲಫಲ್ಕೆ ಘಟಕ ವಗ್ಗ ಕುಲಾಲ ಸಂಘ ಬಂಟ್ವಾಳ ಕುಲಾಲ ಸುಧಾರಕ ಸಂಘ ಕುಲಾಲ ಯುವವೇದಿಕೆ ಸಿದ್ದಕಟ್ಟೆ ಕುಲಾಲ ಸಂಘ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ ನಂದಾದೀಪ ಮಂಗಳೂರು ಸಿದ್ದಕಟ್ಟೆ ಕುಲಾಲ್ ಯುವವೇದಿಕೆ ಶರಭೆಶ್ವರ ಅಶೋಸಿಯೇಟ್ಸ್ ಕಾವೂರು ಮಂಗಳೂರು ಇವರ ಸಹಕಾರದೊಂದಿಗೆ ಕಮಲ ಅವರಿಗೆ ಸುಸಜ್ಜಿತ ಮನೆ ನಿರ್ಮಾಣ ಮಾಡುವಲ್ಲಿ ಸಹಕಾರಿಯಾಯಿತು ಇಂತಹ ಸಮಾಜ ಮುಖಿ ಕೆಲಸಗಳು ಇನ್ನಷ್ಟು ಬಡ ಕುಟುಂಬಗಳಿಗೆ ನೆರವು ಆಗಲಿ ಎಂಬುದೇ ನಮ್ಮೆಲ್ಲರ ಆಶಯ














