
ಉಡುಪಿ : ಕುಂದಾಪುರದ ಕಮಲಶಿಲೆ ದೇವಸ್ಥಾನಕ್ಕೆ ಪೂಜೆಗೆಂದು ಹೊರಟ ವ್ಯಕ್ತಿಯೋರ್ವರು ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಜು.5ರಂದು ನಡೆದಿದೆ.

ಶೇಷಾದ್ರಿ ಐತಾಳ್ ಕಮಲ ಶಿಲೆ ದೇವಳಕ್ಕೆ ಪೂಜೆಗೆಂದು ಆಗಮಿಸಿದ್ದರು. ಈ ವೇಳೆ ಕಮಲಶಿಲೆ ದೇವಾಲಯದ ಪಕ್ಕದಲ್ಲಿ ಹರಿಯುವ ಕುಬ್ಜಾ ನದಿಗೆ ಇಳಿದ ಸಂದರ್ಭ ಕಾಲು ಜಾರಿ ಬಿದ್ದಿದ್ದಾರೆ ಎನ್ನಲಾಗಿದೆ.
ನದಿಗೆ ಬಿದ್ದ ಜಾಗದ ಸುಮಾರು ನೂರು ಮೀಟರ್ ದೂರಲ್ಲಿ ಶವ ಪತ್ತೆಯಾಗಿದ್ದು, ಮುಳುಗು ತಜ್ಞ ಮಂಜುನಾಥ್ ನಾಯಕ್ ತಂಡದಿAದ ಶವ ಪತ್ತೆ ಕಾರ್ಯ ನಡೆಸಿದೆ. ಈ ಪ್ರಕರಣ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.














