Friday, March 13, 2026
ಸುದ್ದಿ

ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿನಲ್ಲಿ ಯೋಗ ತರಬೇತಿ ಶಿಬಿರ – ಕಹಳೆ ನ್ಯೂಸ್

ಶ್ರೀ ಮಹಾವೀರ ಪದವಿಪೂರ್ವಕಾಲೇಜಿನ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿರುವ ಹದಿನೈದು ದಿನಗಳ ಯೋಗತರಬೇತಿ ಶಿಬಿರವನ್ನು ಮೂಡುಬಿದಿರೆ ಪತಂಜಲಿ ಯೋಗ ಸಮಿತಿಯ ಸಂಚಾಲಕರಾದ ಪ್ರಕಾಶ್ ಉದ್ಘಾಟಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ವಿದ್ಯಾರ್ಥಿಗಳು ಯೋಗ ತರಬೇತಿಯನ್ನು ಪಡೆಯುವುದರಿಂದ ಬಹಳಷ್ಟು ಪ್ರಯೋಜನಗಳಿವೆ. ದಿನಂಪ್ರತಿ ಯೋಗಾಭ್ಯಾಸ ಮಾಡುವುದರಿಂದ ವಿದ್ಯಾಭ್ಯಾಸವನ್ನು ಮಾಡಲು ಬೇಕಾದ ಉತ್ತಮ ಆರೋಗ್ಯ ಹಾಗೂ ಏಕಾಗ್ರತೆ ದೊರೆತು ನಿಮ್ಮ ಮುಂದಿನ ಜೀವನವು ಫಲಪ್ರದವಾಗುವುದು. ಮನ:ಪೂರ್ವಕವಾಗಿ ಯೋಗ ತರಬೇತಿಯಲ್ಲಿ ಪಾಲ್ಗೊಂಡು ಇದರ ಪ್ರಯೋಜನವನ್ನು ಪಡೆದುಕೊಳ್ಳಿರಿ ಎಂದು ಮಹಾವೀರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ರಮೇಶ್ ಭಟ್ ತಿಳಿಸಿದರು.

ಅಧ್ಯಕ್ಷತೆ ವಹಿಸಿದ ಮಹಾವೀರ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ರಾಧಾಕೃಷ್ಣ ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಯ ಮಾನಸಿಕ ಹಾಗೂ ದೈಹಿಕ ದೃಢತೆಯನ್ನು ಕಾಪಾಡುವುದಕ್ಕೆ ಯೋಗವು ಅತ್ಯಗತ್ಯ. ಸೋಮಾರಿತನವನ್ನು ದೂರಗೊಳಿಸಿ, ಮನಸ್ಸನ್ನು ಕೇಂದ್ರೀಕರಿಸುವುದರೊಂದಿಗೆ ಉತ್ತಮ ಓದುವಿಕೆಗೆಯೋಗವು ಸಹಕಾರಿ. ಶ್ರದ್ಧೆ ಮತ್ತು ಆಸಕ್ತಿಯಿಂದ ಯೋಗದಲ್ಲಿ ಪಾಲ್ಗೊಳ್ಳಿ’ ಎಂದು ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.