Tuesday, March 10, 2026
ಸುದ್ದಿ

ಮೂರು ಮಂದಿಯ ತಂಡದಿಂದ ಯುವಕನಿಗೆ ಚೂರಿ ಇರಿತ – ಕಹಳೆ ನ್ಯೂಸ್

ಮಂಗಳೂರು: ಕುಡಿದ ಮತ್ತಿನಲ್ಲಿ ಮೂರು ಮಂದಿ ಯುವಕರು ಹಾವೇರಿ ಮೂಲದ ರಮೇಶ್ ಎಂಬಾತನ ಮೇಲೆ ಚೂರಿ ಇರಿತ ಮಾಡಿದ ಘಟನೆ ಉಳ್ಳಾಲ ಅಸೈಗೋಳಿಯ ಜಂಕ್ಷನ್‌ನ ಬಾರ್‌ನ ಬಳಿ ನಡೆದಿದೆ.

ಬಾರ್‌ನಿಂದ ಕುಡಿದು ಪಾನಮತ್ತರಾಗಿ ಹೊರಬಂದ ಶಮೀರ್, ಶವಾಝ್, ಇಲ್ಯಾಸ್, ರಮೇಶ್ ಎಂಬಾತನಲ್ಲಿ ಹಣೆಯಲ್ಲಿ ನಾಮಧಾರಣೆ ಮಾಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ರಮೇಶ್ ನಾನು ಹಿಂದು ಅದಕ್ಕೆ ನಾಮ ಹಾಕಿದ್ದದೇನಿನ ಎಂದಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕ್ಷುಲ್ಲಕ ವಿಷಯವನ್ನೆ ಗಟ್ಟಿಯಾಗಿ ಹಿಡಿದ ಕುಡುಕರು ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಬ್ಲೇಡಿನಿಂದ ಇರಿದು ಮೂರು ಯುವಕರು ಎಸ್ಕೇಪ್ ಆಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಶವಾಝ್‌ನನ್ನು ಎಂಬಾತನನ್ನು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು