Tuesday, March 17, 2026
ಸುದ್ದಿ

ಸಪ್ತಪದಿ ತುಳಿದ 24ದಿನಕ್ಕೆ ನವಜೋಡಿ ಜೀವಾಂತ್ಯ – ಕಹಳೆ ನ್ಯೂಸ್

ಮದುವೆಯಾಗಿ ಸುಂದರ ಸಂಸಾರದ ಕನಸು ಕಂಡಿದ್ದ ನವಜೋಡಿಗಳು ಇದೀಗ ಒಂದೇ ದಿನ ಉಸಿರುಚೆಲ್ಲಿ ಬಾರದಲೋಕಕ್ಕೆ ತೆರಳಿದ್ದಾರೆ.
ವಿಜಯಪುರ ನಗರ ಹೊರವಲಯದ ಸೋಲಾಪುರ ಬೈಪಾಸ್ ಬಳಿ ತಡರಾತ್ರಿ ಬೈಕ್ ಮತ್ತು ಕ್ಯಾಂಟರ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ನವ ವಿವಾಹಿತರು ಸ್ಧಳದಲ್ಲೆ ಸಾವನ್ನಪ್ಪಿದ್ದಾರೆ. ಹೊನಮಲ್ಲ ತೇರದಾಳ(31), ಪತ್ನಿ ಗಾಯತ್ರಿ(24) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹೊನಮಲ್ಲ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ಮೇ22ರಂದು ಹೊನಮಲ್ಲ ಹಾಗೂ ಗಾಯತ್ರಿಗೆ ವಿವಾಹವಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ನಿನ್ನೆ ರಾತ್ರಿ ಸಂಬoಧಿಕರ ಮಕ್ಕಳ ಹುಟ್ಟುಹಬ್ಬಕ್ಕೆ ಹೋಗಿ ವಾಪಸ್ ಬರುವಾಗ ದುರ್ಘಟನೆ ಸಂಭವಿಸಿದೆ. ಮದುವೆಯಾಗಿ ಕೇವಲ 24 ದಿನಗಳಲ್ಲಿ ನವ ಜೋಡಿ ಬಾರದ ಲೋಕಕ್ಕೆ ಪಯಣಿಸಿದೆ. ನವಜೋಡಿಯನ್ನು ಕಳೆದುಕೊಂಡು ಕುಟುಂಬಸ್ಥರು ಕಣ್ಣೀರಲ್ಲಿ ಮುಳುಗಿದ್ದಾರೆ. ವಿಜಯಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ಸಂಭವಿಸಿದೆ.