Wednesday, March 18, 2026
ಸುದ್ದಿ

ಬಸ್ ಪೂರ್ತಿ ಮಹಿಳೆಯರದ್ದೇ ಕಾರುಬಾರು : ಟಿಕೆಟ್ ಕೊಡೋದಿಕ್ಕೆ ಸೀಟ್ ಮೇಲೇರಿದ ಕಂಡಕ್ಟರ್ -ಕಹಳೆ ನ್ಯೂಸ್

ಶಕ್ತಿ ಯೋಜನೆ ಜಾರಿಯಾಗಿದ್ದೇ ಆಗಿದ್ದು ಮಹಿಳೆಯರು ತಂಡೋಪ ತಂಡವಾಗಿ ಬಸ್ ಹತ್ತುತ್ತಿದ್ದಾರೆ. ಪ್ರತಿನಿತ್ಯ ಖಾಸಗಿ ಬಸ್‌ನಲ್ಲಿ ಪ್ರಯಾಣಿಸ್ತಾ ಇದ್ದ ಮಹಿಳೆಯರು ಸರಕಾರಿ ಬಸ್ ಏರಿ ಹೊರಟಿದ್ದಾರೆ. ಕೆಲವೆಡೆ ಮಹಿಳೆಯರ ಪ್ರಯಾಣದಿಂದ ಬಸ್ ಚಾಲಕ ಮತ್ತು ಕಂಡಕ್ಟರ್ ಹೈರಾಣಾಗಿದ್ದು, ಅದಕ್ಕೆ ಸಾಕ್ಷಿ ಎಂಬoತೆ ಹಾವೇರಿ ಜಿಲ್ಲೆಯ ಬಸ್‌ವೊಂದರಲ್ಲಿ ಕಂಡಕ್ಟರ್ ಟಿಕೆಟ್ ಕೊಡಲು ಹರಸಾಹಸಪಡುತ್ತಿದ್ದು, ಕೊನೆಗೆ ಸೀಟ್ ಮೇಲೆ ಹತ್ತಿ ಕುಳಿತ ಘಟನೆ ಬೆಳಕಿಗೆ ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಅಫಜಲಫುರದಿoದ ದೇವರ ಹಿಪ್ಪರಗಿ, ಭೈರವಾಡಗಿ, ಹೂವಿನ ಹಿಪ್ಪರಗಿ, ಮುದ್ದೇಬಿಹಾಳ ಮಾರ್ಗವಾಗಿ ಹಾವೇರಿ ಜಿಲ್ಲೆಯ ಮೂಲಕ ಬ್ಯಾಡಗಿಗೆ ತೆರಳುವ ಬಸ್‌ನಲ್ಲಿ ಈ ದೃಶ್ಯ ಕಂಡುಬoದಿದೆ. ಬಸ್ ಹತ್ತಿದವರಿಗೆ ಟಿಕೆಟ್ ಕೊಡುವ ಸಲುವಾಗಿ ನಿರ್ವಾಹಕ ಸೀಟ್ ಮೇಲೆ ಹತ್ತಿ ಕುಳಿತಿದ್ದಾನೆ. ಸೀಟಿನ ಮೇಲೆ ಕಂಡಕ್ಟರ್ ಏರಿ ಕುಳಿತ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.