Monday, March 16, 2026
ದಕ್ಷಿಣ ಕನ್ನಡಪುತ್ತೂರುಸುದ್ದಿ

ಸಹೋದ್ಯೋಗಿಯ ಸ್ಯಾಲರಿ ಸ್ಲಿಪ್ ಬಳಸಿ ಚಿಟ್ ಫಂಡ್ ನಿಂದ ಸಾಲ ಪಡೆದು ವಂಚನೆ ಘಟನೆ ; ಬನ್ನೂರಿನ ಮೆಸ್ಕಾಂ ಅಟೆಂಡರ್ ನವೀನ್ ವಿರುದ್ಧ ದೂರಿನ ಬಗ್ಗೆ ನವೀನ್ ಸ್ಪಷ್ಟೀಕರಣ – ಪುತ್ತೂರು ಪೋಲೀಸ್ ಠಾಣೆಯಲ್ಲಿ ಮಾತುಕತೆಯಲ್ಲಿ ಪ್ರಕರಣ ಇತ್ಯಾರ್ಥ – ಕಹಳೆ ನ್ಯೂಸ್

ಪುತ್ತೂರು : ನಗರದ ಬನ್ನೂರಿನ ಮೆಸ್ಕಾಂ ಅಟೆಂಡರ್ ನವೀನ್ ಸಹೋದ್ಯೋಗಿಯ ಸ್ಯಾಲರಿ ಸ್ಲಿಪ್ ಬಳಸಿ ಚಿಟ್ ಫಂಡ್ ನಿಂದ ಸಾಲ ಪಡೆದು ವಂಚನೆ ಮಾಡಿದ್ದಾರೆ ಎಂದು ದೂರಿ ಮೆಸ್ಕಾಂ ಅಧಿಕಾರಿ ಹಾಗೂ ನಗರ ಪೊಲೀಸ್ ರಿಗೆ ನೊಂದ ಸಹಯೋಗಿ ದೂರು ನೀಡಿದ ಘಟನೆ ವರದಿಯಾಗಿತ್ತು.

ವರದಿ ಬಿತ್ತರಗೊಂಡ ನಂತರ ಈ ಕುರಿತು ಬನ್ನೂರಿನ ಮೆಸ್ಕಾಂ ಅಟೆಂಡರ್ ನವೀನ್ ತನ್ನ ವಿರುದ್ಧ ದೂರಿನ ಬಗ್ಗೆ ಪುತ್ತೂರು ಪೋಲೀಸ್ ಠಾಣೆಯಲ್ಲಿ ಮಾತುಕತೆಯಲ್ಲಿ ಪ್ರಕರಣ ಇತ್ಯಾರ್ಥವಾಗಿದೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಮತ್ತು ಘಟನೆಯ ಕುರಿತು ಯಾವುದೇ ಅಧಿಕೃತ ಪ್ರಕರಣ ದಾಖಲಾಗಿರುವುದಿಲ್ಲ ಮತ್ತು ಕಿಡಿಗೇಡಿಗಳು ನನ್ನ ಮೇಲೆ ದ್ವೇಶದಿಂದ ವಿಷಯ ವೈರಲ್ ಮಾಡಿದ್ದಾರೆ ಎಂದು ವಾಹಿನಿಗೆ ನೀಡಿದ ಲಿಕಿತ ಸ್ಪಷ್ಟೀಕರಣದಲ್ಲಿ ಆರೋಪ ಹೊತ್ತಿರುವ ನವೀನ್ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು