Tuesday, March 10, 2026
ಸುದ್ದಿ

ಜೋಡು ರಸ್ತೆ, ಕುಕ್ಕುಂದೂರು, ಜಾರ್ಕಳ ಭಾಗದ ಗೇರು ಬೀಜದ ಕಾರ್ಖಾನೆಗಳ ಕಾರ್ಮಿಕರಲ್ಲಿ ಸುನಿಲ್ ಕುಮಾರ್ ಮತಯಾಚನೆ –ಕಹಳೆ ನ್ಯೂಸ್

ಕಾರ್ಕಳ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ರವರು ಜೋಡು ರಸ್ತೆ ,ಜಾರ್ಕಳ ,ಕುಕ್ಕುಂದೂರು ಭಾಗದ ಗೇರು ಬೀಜದ ಕಾರ್ಖಾನೆಗಳಿಗೆ ಭೇಟಿ ನೀಡಿ, ಮತಯಾಚನೆ ನಡೆಸಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಕಾರ್ಕಳ ಕ್ಷೇತ್ರವು ರಾಜ್ಯಕ್ಕೆ ಮಾದರಿಯಾಗಿ, ಕಾರ್ಕಳ ಜನತೆ ಹೆಮ್ಮೆಪಡುವಂತಹ ಸಾಧನೆಯ ಬಗ್ಗೆ ಸಹಿಸಲಾಗದೆ ಪ್ರತಿಪಕ್ಷದವರು ಮಾಡುತ್ತಿರುವ ಅಪಪ್ರಚಾರಕ್ಕೆ ಕಿವಿ ಕೊಡದೆ, ಅಭಿವೃದ್ಧಿಪರ ಮತ ಚಲಾಯಿಸುವಂತೆ ವಿನಂತಿಸಿದ್ದಾರೆ.
ಕಳೆದ ಐದು ವರ್ಷದ ಅವಧಿಯಲ್ಲಿ ಶಾಸಕರಾಗಿ ಹಾಗೂ ಎರಡು ವರ್ಷ ಸಚಿವರಾಗಿ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ನಡೆಸಿರುವ ಸರ್ವಾಂಗೀಣ ಅಭಿವೃದ್ಧಿ ಕಾರ್ಯಗಳ ಬಗ್ಗೆ ಕಾರ್ಮಿಕರಿಗೆ ಮನದಟ್ಟುಗೊಳಿಸಿದರು.

ಈ ಚುನಾವಣಾ ಪ್ರಚಾರ ಕಾರ್ಯದಲ್ಲಿ ಕಾರ್ಖಾನೆಯ ಮಾಲೀಕರು, ಆಡಳಿತ ವರ್ಗ ಮತ್ತು ಸ್ಥಳೀಯ ಬಿಜೆಪಿ ಮುಖಂಡರು, ಕಾರ್ಯಕರ್ತರು ಭಾಗಿಯಾಗಿದ್ರು