
ಪುತ್ತೂರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯುತ್ತ) ಕಾಲೇಜಿನಲ್ಲಿ ,ರೆಡ್ ಕ್ರಾಸ್,ಎನ್.ಸಿ.ಸಿ, ಎನ್.ಎಸ್.ಎಸ್, ರೋವರ್‌ರೇಂಜರ್, ವಿದ್ಯಾರ್ಥಿ ಸಂಘ, ರೋಟರಿ- ಕ್ಯಾಂಪ್ಕೋರಕ್ತ ನಿಧಿ ಕೇಂದ್ರ ಪುತ್ತೂರು, ರೋಟರಿರಕ್ತ ನಿಧಿ ಕೇಂದ್ರ, ವೆನ್‌ಲಾಕ್ ಸರ್ಕಾರಿಆಸ್ಪತ್ರೆ ಮಂಗಳೂರು, ಪ್ರಾದೇಶಿಕ ರಕ್ತ ನಿಧಿ ಕೇಂದ್ರಇದರ ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರ ನಡೆಯಿತು. ಈ ಸಂದರ್ಭದಲ್ಲಿ ರೋಟರಿಕ್ಲಬ್ ನ ಅಧ್ಯಕ್ಷ ಪ್ರಶಾಂತ್ ಶೆಣೈ, ವೈದ್ಯಾಧಿಕಾರಿ ಡಾ.ಶರತ್‌ಕುಮಾರ್‌ರಾವ್, ಕಾಲೇಜಿನ ಐಕ್ಯೂಎಸಿ ಸಂಯೋಜಕ ಪ್ರೊ. ಶಿವಪ್ರಸಾದ್, ಪುತ್ತೂರು ರೋಟರಿಕ್ಲಬ್ ನ ಸದಸ್ಯ ವಿಕ್ಟರ್ ಮಾರ್ಟಿಸ್, ಕಾಲೇಜಿನ ಭೌತಶಾಸ್ತ ವಿಭಾಗದ ಮುಖ್ಯಸ್ಥ ಪ್ರೊ. ನರಸಿಂಹ ಭಟ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ವೈದ್ಯಾಧಿಕಾರಿ ಡಾ. ರಾಮಚಂದ್ರ ಭಟ್ ಭಾಗವಹಿಸಿದರು. ಸುಮಾರು ೧೮೬ ಯುನಿಟ್ ರಕ್ತವನ್ನು ವಿದ್ಯಾರ್ಥಿಗಳಿಂದ ಸಂಗ್ರಹಿಸಲಾಯಿತು















