
ಕೊಪ್ಪಳ : ಮೊಬೈಲ್ ಮೂಲಕವೇ ಪರಿಚಯವಾದ ಅಪ್ರಾಪ್ತೆಯ ಜೊತೆ ಸ್ನೇಹಿತನ ನೆಪದಲ್ಲಿ ಬೀಚ್‍ಗೆ ಕರೆದುಕೊಂಡು ಹೋಗಿ ಬಲತ್ಕಾರವಾಗಿ ದೈಹಿಕ ಸಂಪರ್ಕ ಮಾಡಿ, ಆಕೆ ಗರ್ಭವತಿಯಾಗಲು ಕಾರಣನಾಗಿದ್ದಾನೆ.
ಆರೋಪಿಯನ್ನು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶರಣ ರಾಮಪ್ಪ ಪೂಜಾರ (26) ಎಂದು ಗುರುತಿಸಲಾಗಿದ್ದು, ಯುವಕನನ್ನು ಅಂಕೋಲಾ ಪೊಲೀಸರು ಬಂಧಿಸಿದ್ದಾರೆ.
ಇನ್ನು ಡಿಪ್ಲೊಮಾ ವಿದ್ಯಾರ್ಥಿಯಾಗಿರುವ ಶರಣ ರಾಮಪ್ಪ ಪೂಜಾರ ಅಂಕೋಲಾ ತಾಲೂಕಿನ 16 ವರ್ಷದ ಬಾಲಕಿಯನ್ನು ಮೊಬೈಲ್‍ನಲ್ಲಿ ಮೂರು ವರ್ಷಗಳ ಹಿಂದೆ ಪರಿಚಯ ಮಾಡಿಕೊಂಡಿದ್ದ. ಕಳೆದ ಜನವರಿ ತಿಂಗಳಲ್ಲಿ ಅಂಕೋಲಾಕ್ಕೆ ಬಂದು ಬಾಲಕಿಗೆ ಬೊಬ್ರವಾಡದ ನದಿಭಾಗ ಬೀಚಿಗೆ ಕರೆದುಕೊಂಡು ಹೋಗಿ ಬಲತ್ಕಾರವಾಗಿ ದೈಹಿಕ ಸಂಪರ್ಕ ಮಾಡಿದ್ದಾನೆ. ನಂತರದ ದಿನಗಳಲ್ಲಿ ಸಹ ಇದೇ ರೀತಿಯ ವರ್ತನೆ ಮುಂದುವರೆಸಿ ಬಾಲಕಿ ಗರ್ಭಿಣಿಯಾಗಲು ಕಾರಣವಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಕ್ಸೊ ಪ್ರಕರಣದಡಿ ಆರೋಪಿತನನ್ನು ಬಂಧಿಸಿದ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.














