Wednesday, March 18, 2026
ಸುದ್ದಿ

ಅಮಿತ್ ಶಾ ಆಗಮನ ಹಿನ್ನಲೆ ಪುತ್ತೂರಿನ ಈ ರಸ್ತೆಗಳಲ್ಲಿ ಓಡಾಡುವಂತಿಲ್ಲ..: ವಾಹನ ಸವಾರರೇ ಈ ಮಾರ್ಗಸೂಚಿ ಅನುಸರಿಸಿ – ಕಹಳೆ ನ್ಯೂಸ್

ಪುತ್ತೂರು : ಇಂದು ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವದ ಅಂಗವಾಗಿ ಅಮಿತ್ ಶಾ ಆಗಮನದ ಹಿನ್ನಲೆಯಲ್ಲಿ ಪುತ್ತೂರು ನಗರದಲ್ಲಿ ವಾಹನ ಸಂಚಾರದಲ್ಲಿ ಬದಲಿ ಮಾರ್ಗಸೂಚಿ ನಿಗದಿಪಡಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ 273 ರ ಮಾಣಿ- ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ಮಧ್ಯಾಹ್ನ 2.30 ರಿಂದ ಸಂಜೆ 5.30ರವರೆಗೆ ನಿಷೇಧ ಮಾಡಲಾಗಿದೆ.

ಮಂಜಲ್ಪಡ್ಪು ಬೈಪಾಸ್ ಜಂಕ್ಷನ್‌ನಿAದ ಮುಕ್ರಂಪಾಡಿವರೆಗಿನ ರಸ್ತೆಯಲ್ಲಿ 2.30 ರಿಂದ ಸಂಜೆ 5.30ರವರೆಗೆ ವಾಹನ ಸಂಚಾರಕ್ಕೆ ನಿಷೇಧ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರಿನಿAದ ಮಡಿಕೇರಿಗೆ ಹೋಗುವ ವಾಹನಗಳು ಮಂಜಲ್ಪಡ್ಪು – ಬೊಳುವಾರು ವೃತ್ತ – ದರ್ಬೆ – ಪುರುಷರಕಟ್ಟೆ – ಪಂಜಳ ಮಾರ್ಗವಾಗಿ ಪರ್ಪುಂಜ ತಲುಪುವುದು.

ಜಾಹೀರಾತು
ಜಾಹೀರಾತು

ಮಡಿಕೇರಿ ಕಡೆಯಿಂದ ಬರುವ ವಾಹನಗಳು ಪರ್ಪುಂಜ ಮೂಲಕ ಪಂಜಳ – ಪುರುಷರಕಟ್ಟೆ –ದರ್ಬೆ – ಬೊಳುವಾರು ಜಂಕ್ಷನ್ ಮೂಲಕ ಮಂಜಲ್ಪಡ್ಪು ಮಾರ್ಗವಾಗಿ ಮುಂದುವರಿಯುವAತೆ ಪುತ್ತೂರು ಸಹಾಯಕ ಆಯುಕ್ತರಾದ ಗಿರೀಶ್ ನಂದನ್ ಎಮ್ ತಿಳಿಸಿದ್ದಾರೆ.