
ಸುಳ್ಯದ ಮೆಸ್ಕಾಂ ಅಧಿಕಾರಿಯೊಬ್ಬ ವ್ಯಕ್ತಿಯೋರ್ವನ ಮನೆಯ ಕೊಟ್ಟಿಗೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಇನ್ಸೆಕ್ಷನ್‌ಗೆ ಬಂದು ನಿರೀಕ್ಷಿಸದ ಹಣ ಸಿಗದ ಕಾರಣ ಕೆಟ್ಟ ಮಾತಿನಲ್ಲಿ ನಿಂದಿಸಿ ಅದಕ್ಕೆ ಸಂಬ0ಧಿಸಿದ ದಾಖಲೆಗಳನ್ನು ಮನೆ ಮುಂದೆ ಹರಿದೆಸೆದು ಥೂ ಅಂತ ಉಗಿದು “ಯಾರು ನಿಮಗೆ ಕರೆಂಟ್ ಕೊಡಿಸ್ತಾರೋ ನೋಡ್ತೇನೆ” ಎಂದು ಗದರಿಸಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿದ್ದು, ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.. ಜೊತೆಗೆ ಮೆಸ್ಕಾಂ ಅಧಿಕಾರಿಯ ಫೋಟೋವನ್ನು ಕೂಡ ತನ್ನ ಫೆಸ್‌ಬುಕ್‌ನಲ್ಲಿ ಶೇರ್ ಮಾಡಿದ್ದಾನೆ. ಬಹುಷಃ ಆ ವ್ಯಕ್ತಿ ಪಾನಮತ್ತನಿರಬೇಕು ಜೊತೆಗೆ ಸುಳ್ಯದ ಲಂಚಾವತರಾದ ಒಂದು ನೋಟ. ಅಷ್ಟೇ ಅಲ್ಲ ಮೆಸ್ಕಾಂ ಅಧಿಕಾರಿ ಸುಪ್ರೀತ್ ತನ್ನ ತಮ್ಮನ ಮಗಳಿಗೆ ಹೋಗೇ ಬಾರೆ ಎಂದು ಮರ್ಯಾದಿ ರಹಿತವಾಗಿ ಹೀಗಳೆದಿದ್ದಾನೆ ಎಂದು ಬರೆದು ಶೇರ್ ಮಾಡಿದ್ದಾನೆ. ಇದೀಗ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಾ ಇದ್ದು ಪೋಸ್ಟ್ ಕೂಡ ತನ್ನ ಫೇಸ್ಬುಕ್ ಖಾತೆಯಿಂದ ಡಿಲೀಟ್ ಮಾಡಲಾಗಿದೆ .














