

ಶ್ರೀ ದುರ್ಗಾ ಯುವಕ ವೃಂದ ರಿ. ಅರ್ಕ ಕುಡಿಪಾಡಿ ಇವರ ಆಯೋಜನೆಯಲ್ಲಿ ದ.ಕ ಜಿಲ್ಲಾ ಅಮೆಚೂರು ಹಾಗೂ ಪುತ್ತೂರು ತಾಲೂಕು ಅಮೆಚೂರು ಇದರ ಸಹಯೋಗದಲ್ಲಿ ಫೆ.4ರಂದು ಪುರುಷರ 65ಕೆಜಿ ವಿಭಾಗದ ಹೊನಲು ಬೆಳಕಿನ ದಿ. ಕಿಶೋರ್ ಕುಮಾರ್ ಟ್ರೋಫಿ ಪಂದ್ಯಾಟ ನಡೆಯಲಿದ್ದು, ಇದರ ಕರಪತ್ರ ಬಿಡುಗಡೆ ಕಾರ್ಯಕ್ರಮ ಅರ್ಕ ಶ್ರೀ ಮಹಾದೇವಿ ಭಜನಾ ಮಂದಿರಲ್ಲಿ ನಡೆಯಿತು. ಮಂದಿರದ ಅರ್ಚಕರು ಕರಪತ್ರ ಬಿಡುಗಡೆಗೊಳಿಸಿ ಕಾರ್ಯಕ್ರಮ ಸುಸೂತ್ರವಾಗಿ ನಡೆಯುವಂತೆ ಮಹಾದೇವಿಯಲ್ಲಿ ಪ್ರಾರ್ಥಿಸಿದ್ರು. ಈ ಸಂದರ್ಭದಲ್ಲಿ ಶ್ರೀ ಮಹಾದೇವಿ ಸೇವಾ ಸಮಿತಿ ಸದಸ್ಯರು, ಶ್ರೀ ದುರ್ಗಾ ಯುವಕ ವೃಂದದ ಸದಸ್ಯರು, ಕಿಶೋರ್ ಟ್ರೋಫಿಯ ಸಂಚಾಲಕರು, ಸದಸ್ಯರು ಉಪಸ್ಥಿತರಿದ್ದರು.














