Saturday, March 14, 2026
ದಕ್ಷಿಣ ಕನ್ನಡಬೆಂಗಳೂರುಸಿನಿಮಾಸುದ್ದಿ

ಬಿಗ್ ಬಾಸ್ ಮನೆಯಲ್ಲಿ ಕೊನೆಗೂ ರೂಪೇಶ್ ಶೆಟ್ಟಿಯ ಕನಸು ಈಡೇರಿತು.. ಈ ವಾರದ ಕ್ಯಾಪ್ಟನ್ ಅವರೇ..! – ಕಹಳೆ ನ್ಯೂಸ್

ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಬೇಕೆಂಬುದು ಎಲ್ಲರ ಆಸೆಯಾಗಿರುತ್ತದೆ. ಕ್ಯಾಪ್ಟನ್ ಆದರೆ ಎರಡು ಅನುಕೂಲವಿರುತ್ತದೆ. ಒಂದು ಎರಡು ವಾರಗಳ ಕಾಲ ಬಚಾವ್ ಆಗುವುದು ಮತ್ತೊಂದು ವಿಶೇಷ ಸವಲತ್ತುಗಳನ್ನು ಪಡೆಯುವುದು. ಈ ವಾರ ಆ ವಿಶೇಷ ಸಾಲಿನಲ್ಲಿ ರೂಪೇಶ್ ಶೆಟ್ಟಿ ನಿಲ್ಲುತ್ತಾರೆ.

ಕಳೆದ ವಾರ ರೂಪೇಶ್ ರಾಜಣ್ಣ ಕ್ಯಾಪ್ಟನ್ ಆಗಿ ಒಂದಷ್ಟು ಗರಂ ಆದರೂ, ಕೆಲವೊಮ್ಮೆ ಸಾಫ್ಟ್ ಆಗಿ ನಡೆದುಕೊಂಡರು. ಆದರೆ ಇಂದಿಗೆ ಅವರ ಕ್ಯಾಪ್ಟೆನ್ಸಿ ಆಟ ಮುಗಿದಿದೆ, ಹಲವು ದಿನಗಳಿಂದ ಕಂಡ ರೂಪೇಶ್ ಶೆಟ್ಟಿ ಆಸೆ ಈಡೇರಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ವಾರ ಮಿಸ್ ಆಗಿದ್ದ ಕ್ಯಾಪ್ಟನ್ ಸ್ಥಾನ
ರೂಪೇಶ್ ಶೆಟ್ಟಿಗೆ ಕ್ಯಾಪ್ಟನ್ ಆಗಲೇಬೇಕೆಂಬುದು ದೊಡ್ಡ ಮಟ್ಟದ ಆಸೆ ಇತ್ತು. ಕಳೆದ ವಾರ ಕೈಗೆ ಬಂದ ತುತ್ತು ಬಾಯಿಗೆ ಬಾರದೆ ಇರುವಂತೆ ಆಗಿತ್ತು. ಕಳೆದ ವಾರ ಡಿಫ್ರೆಂಟ್ ಆಗಿ ಕ್ಯಾಪ್ಟನ್ ಆಯ್ಕೆ ನಡೆದಿತ್ತು. ಮನೆಯೊಳಗಿನ ಸದಸ್ಯರ ಕುಟುಂಬಸ್ಥರಿಂದಾನೇ ಕ್ಯಾಪ್ಟನ್ ಆಯ್ಕೆಯಾಗಿತ್ತು. ಅದರಲ್ಲಿ ರೂಪೇಶ್ ಶೆಟ್ಟಿ, ಆರ್ಯವರ್ಧನ್, ರೂಪೇಶ್ ರಾಜಣ್ಣನ ಹೆಸರು ಮುಂಚೂಣಿಯಲ್ಲಿತ್ತು. ಆದರೆ ಹೆಚ್ಚು ಅಂಕ ಪಡೆದಿದ್ದ ರಾಜಣ್ಣ ಕ್ಯಾಪ್ಟನ್ ಆದರೂ. ಅವತ್ತು ಕೂಡ ಕ್ಯಾಪ್ಟನ್ ಸ್ಥಾನ ಕೈ ತಪ್ಪಿತ್ತು.

ಜಾಹೀರಾತು
ಜಾಹೀರಾತು

ಮನದೊಳಗಿನ ಹಠಕ್ಕೆ ಗೆದ್ದರಾ ಶೆಟ್ರು..?

ರೂಪೇಶ್ ಶೆಟ್ಟಿಗೆ ಮನಸ್ಸಿನೊಳಗೆ ಕ್ಯಾಪ್ಟನ್ ಆಗಲೇಬೇಕೆಂದು ಹಠವಿತ್ತು. ಆದರೆ ಅದೃಷ್ಟ ಕೈಕೊಡುತ್ತಾ ಇತ್ತು. ಇವತ್ತು ಆ ಅದೃಷ್ಟ ಸರಿಯಾಗಿ ಕೈಹಿಡಿದಿದೆ. ಇವತ್ತು ಕ್ಯಾಪ್ಟನ್ ಅವಧಿ ಮುಕ್ತಾಯವಾಗಿತ್ತು. ಹೊಸ ಕ್ಯಾಪ್ಟನ್ ಆಗುವುದಕ್ಕೆ ಹೊಸ ಟಾಸ್ಕ್ ಅನ್ನು ಬಿಗ್ ಬಾಸ್ ನೀಡಿತ್ತು. ಆ ಟಾಸ್ಕ್‌ಗೆ ಅಮೂಲ್ಯ, ಅನುಪಮಾ, ಪ್ರಶಾಂತ್ ಸಂಬರ್ಗಿ, ರೂಪೇಶ್ ಶೆಟ್ಟಿಯ ಆಯ್ಕೆಯಾಗಿತ್ತು. ಕಡಿಮೆ ಸಮಯದಲ್ಲಿಯೇ ಮೂರು ಜನ ಔಟ್ ಆದರೂ ರೂಪೇಶ್ ಶೆಟ್ಟಿ ವಿನ್ ಆದರು.

ಕಾಯಿ ಹಿಡಿದು ಶಕ್ತಿ ತೋರಿಸಿದ ರೂಪೇಶ್

ಮನದೊಳಗೆ ಆಸೆಯಿದ್ದರೆ, ಹಠವಿದ್ದರೆ ಏನನ್ನು ಬೇಕಾದರೂ ಗೆಲ್ಲಬಹುದು ಎಂಬುದಕ್ಕೆ ರೂಪೇಶ್ ಶೆಟ್ಟಿಯ ಸಾಧನೆಯೇ ಕಾರಣ. ಕ್ಯಾಪ್ಟೆನ್ಸಿ ಟಾಸ್ಕ್‌ಗೆ ತೆಂಗಿನಕಾಯಿಯನ್ನು ಹಿಡಿಯುವ ಟಾಸ್ಕ್ ನೀಡಿದ್ದರು. ಅಮೂಲ್ಯ, ಅನುಪಮಾ, ಸಂಬರ್ಗಿ, ರೂಪೇಶ್‌ ಶೆಟ್ಟಿ ಹಗ್ಗ ಹಿಡಿದಿದ್ದರು. ಅದಕ್ಕೆ ದೂರದಲ್ಲಿ ಚೀಲಕ್ಕೆ ತೆಂಗಿನಕಾಯಿ ತುಂಬಿಸುತ್ತಾ ಇದ್ದರು. ಆರಂಭದಲ್ಲಿ ಅಮೂಲ್ಯ, ಅನುಪಮಾ ಕೈನಲ್ಲಿ ಹಿಡಿಯಲು ಸಾಧ್ಯವಾಗದೆ ಸೋಲು ಒಪ್ಪಿಕೊಂಡರು. ಆದರೆ ಸಂಬರ್ಗಿ ಸಾಕಷ್ಟು ಕಷ್ಟಪಟ್ಟು ಬ್ಯಾಲೆನ್ಸ್ ಮಾಡಲು ನೋಡಿದರು. ಅದು ಸಾಧ್ಯವಾಗಲೇ ಇಲ್ಲ. ಕಡೆಗೆ ಅವರು ಬಿಟ್ಟರು. ಕಡೆಯ ತನಕ ಹಿಡಿದಿದ್ದ ರೂಪೇಶ್ ಶೆಟ್ಟಿ ಅದನ್ನು ಗೆದ್ದರು. ವಾರದ ಕ್ಯಾಪ್ಟನ್ ಆದರು.

ತಂದೆಯ ಕನಸು ಇದೆ ಆಗಿತ್ತು

ತೆಂಗಿನ ಕಾಯಿ ಹಿಡಿಯುವುದು ಅಷ್ಟು ಸುಲಭದ ಟಾಸ್ಕ್ ಆಗಿರಲಿಲ್ಲ. ಯಾಕಂದ್ರೆ ಚೀಲದೊಳಗೆ ದಪ್ಪ ದಪ್ಪ ತೆಂಗಿನಕಾಯಿ ತುಂಬಿಸುತ್ತಾ ಇದ್ದರು. ಸುಮಾರು 25 ಕೆಜಿಯಷ್ಟು ತೆಂಗಿನಕಾಯಿಯಾಗಿತ್ತು. ನಾಲ್ಕು ಜನ ಕಷ್ಟ ಪಟ್ಟು ಹಿಡಿಯುತ್ತಾ ಇದ್ದರು. ಆದರೆ ಅದು ಸಾಧ್ಯವಾಗಲೇ ಇಲ್ಲ. ರೂಪೇಶ್ ಶೆಟ್ಟಿ ಕಷ್ಟಪಟ್ಟು, ದೃಢಸಂಕಲ್ಪ ಮಾಡಿ ಆ ಚೀಲವನ್ನು ಹಿಡಿದಿಟ್ಟಿದ್ದರು. ಅವರ ತಂದೆ ಕಳೆದ ಬಾರಿ ಮನೆಗೆ ಬಂದು ಹೋದಾಗಲೂ ಕ್ಯಾಪ್ಟನ್ ಆಗುವ ಬಗ್ಗೆ ಮಾತನಾಡಿದ್ದರು. ಅಷ್ಟೇ ಅಲ್ಲ ರೂಪೇಶ್ ಶೆಟ್ಟಿಗೆ ವೈಯಕ್ತಿಕವಾಗಿ ಕ್ಯಾಪ್ಟನ್ ಆಗುವ ಹಂಬಲವಿತ್ತು. ಇವತ್ತು ಆ ಆಸೆ ಈಡೇರಿದೆ.