Saturday, March 14, 2026
ಸುದ್ದಿ

ಸಂತ ಫಿಲೋಮಿನಾ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ – ಕಹಳೆ ನ್ಯೂಸ್

ಪುತ್ತೂರು : ಸಂತ ಫಿಲೋಮಿನಾ ಕಾಲೇಜಿನ 2022-23 ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿಸಂಘದ ಉದ್ಘಾಟನೆಯನ್ನು ಕಾಲೇಜಿನ ಬೆಳ್ಳಿಹಬ್ಬ ಸಭಾಭವನದಲ್ಲಿ ಇಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪೆÇ್ರ| ಸುಬ್ಬಪ್ಪ ಕೈಕಂಬರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಅವರು “ಒಂದು ಹಣತೆಯಿಂದ ಸಾವಿರಾದು ಹಣತೆಗಳನ್ನು ಹಚ್ಚಬಹುದಾಗಿದೆ. ಹಾಗೆಯೇ ನಮ್ಮ ಜ್ಞಾನವನ್ನು ಇತರರೊಂದಿಗೆ ಹಂಚಿದಲ್ಲಿ ಮಾತ್ರ ಅದು ವೃದ್ಧಿಯಾಗುತ್ತದೆ, ಜ್ಞಾನವನ್ನು ತಲೆಯಲ್ಲಿಟ್ಟು ಮೆರೆಯದೆ ಹೃದಯದಲ್ಲಿಟ್ಟು ವಿನಮ್ರವಾಗಿ ನಡೆದುಕೊಂಡರೆ ಜೀವನ ಸಾರ್ಥಕವಾಗುವುದು, ನಾಯಕರು ಅನುಯಾಯಿಗಳನ್ನು ಸೃಷ್ಠಿಸುವ ಬದಲು ನಾಯಕರನ್ನು ಸೃಷ್ಠಿಸಬೇಕು. ವ್ಯಕ್ತಿಗಳನ್ನು ಹಾಗೂ ವ್ಯಕ್ತಿತ್ವಗಳನ್ನು ಉಳಿಸಿ ಬೆಳೆಸುವಲ್ಲಿ ವಿದ್ಯಾಸಂಸ್ಥೆಗಳು ಮಹತ್ತರ ಪಾತ್ರ ವಹಿಸುತ್ತವೆ. ಯುವಕರು ಒಂದು ಹೆಜ್ಜೆ ಮುಂದೆ ಇಡುವ ಮುನ್ನ ಇಟ್ಟ ಹೆಜ್ಜೆ ಸರಿಯಾಗಿದೆಯೇ ಎಂದು ಪರಾಮರ್ಶಿಸಬೇಕು. ಬದುಕಿನ ಜಂಜಾಟಗಳ ನಡುವೆ ನಮಗೆ ಬರಬಹುದಾದ ಅದ್ಭುತ ಅವಕಾಶಗಳನ್ನು ಕಳೆದುಕೊಳ್ಳಬಾರದು. “ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆಂಟನಿ ಪ್ರಕಾಶ್ ಮೊಂತೆರೋ ರವರು ವಿದ್ಯಾರ್ಥಿಸಂಘದ ಎಲ್ಲಾ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಗೌರವಾನ್ವಿತ ಅತಿಥಿಯಾದ ಮಾಯ್ ದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಮೌರಿಸ್ ಮಸ್ಕರೇಞಸ್ ರವರು ವಿದ್ಯಾರ್ಥಿಸಂಘದ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಕೃಷ್ಣಪ್ರಸಾದ್ ಆಳ್ವ ಹಾಗೂ ಹಿರಿಯ ವಿದ್ಯಾರ್ಥಿಸಂಘದ ಅಧ್ಯಕ್ಷರಾದ ಎ ಜಗಜೀವನ್ ದಾಸ್ ರೈ ಇವರು ವಿದ್ಯಾರ್ಥಿ ಸಂಘದ ಚಟುವಟಿಕೆಗಳಿಗೆ ಶುಭ ಹಾರೈಸಿದರು.

ಜಾಹೀರಾತು
ಜಾಹೀರಾತು


ಕಾಲೇಜಿನ ಸಂಚಾಲಕರಾದ ಅತಿ ವಂ| ಜೆರೋಮ್ ಲಾರೆನ್ಸ್ ಮಸ್ಕರೇಞಸರ ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ “ ವಿದ್ಯಾರ್ಥಿ ಸಮೂಹಕ್ಕೆ ಒಳಿತನ್ನು ಮಾಡಲು ನಾಯಕರನ್ನು ಚುನಾಯಿಸಲಾಗಿದೆ. ನೀವು ಯಾರಾದರೊಬ್ಬ ವ್ಯಕ್ತಿಯನ್ನು ಪ್ರೀತಿಸಿದಲ್ಲಿ ಅವರ ಒಳಿತು ಹಾಗೂ ಸಂತೋಷಕ್ಕಾಗಿ ಸದಾ ಶ್ರಮಿಸುತ್ತೀರಿ. ನಿಮ್ಮ ಹೆತ್ತವರನ್ನು ಪ್ರೀತಿಸಿದಂತೆಯೇ ಕಲಿತ ವಿದ್ಯಾ ಸಂಸ್ಥೆಯನ್ನೂ ಪ್ರೀತಿಸಿರಿ. ನಾಯಕರು ತಮ್ಮ ಜವಾಬ್ದಾರಿಗಳನ್ನು ಪ್ರೀತಿಯಿಂದಲೇ ನಿರ್ವಹಿಸಿದಲ್ಲಿ ಸಂಸ್ಥೆಯನ್ನು ಸುಲಭವಾಗಿ ಮುನ್ನಡೆಸಬಹುದಾಗಿದೆ“ ಎಂದು ಹೇಳಿದರು.
ಕಾಲೇಜಿನ ಲಲಿತ ಕಲಾಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಿದ್ಯಾರ್ಥಿ ಸಂಘದ ನಾಯಕ ಮಹಮ್ಮದ್ ಆಶಿಕ್ ಸ್ವಾಗತಿಸಿದರು. ಕಾರ್ಯದರ್ಶಿ ಅನುಶ್ರೀ ಹಾಗೂ ಅತಿಥಿಗಳನ್ನು ಪರಿಚಯಿಸಿದರು, ತೃತೀಯ ಬಿಸಿಯ ವಿದ್ಯಾರ್ಥಿ ಜೋನ್ ವಿಸ್ಟನ್ ಟೈಟಸ್ ಡಯಾಸ್
ಅತಿಥಿಗಳನ್ನು ಹೋಗುಚ್ಛ ನೀಡಿ ಸ್ವಾಗತಿಸಿದರು, ಜತೆ ಕಾರ್ಯದರ್ಶಿ ಶಿವಾನಿ ವಂದಿಸಿದರು. ಹಾಗೂ ತೃತೀಯ ಬಿಎಸ್ಸಿ ವಿದ್ಯಾರ್ಥಿನಿ ರಕ್ಷಾ ಅಂಚನ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಡಾ| ಚಂದ್ರಶೇಖರ್ ಕೆ ಹಾಗೂ ಶ್ರೀಮತಿ ಭಾರತಿ ಎಸ್. ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ವಂ| ಅಶೋಕ್ ರಾಯನ್ ಕ್ರಾಸ್ತಾ, ಸಂತ ಫಿಲೋಮಿನಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಕಾರ್ಮಿನ್ ಪಾಯಸ್, ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ವಿ ಜೆ ಫೆನಾರ್ಂಡಿಸ್ ಹಾಗೂ ಕ್ಸೇವಿಯರ್ ಡಿಸೋಜ ಕಾರ್ಯಕ್ರಮದಲ್ಲಿ ಭಾಗವಹಿಸಿದರು.