Wednesday, March 18, 2026
ಸುದ್ದಿ

ವಿಶ್ವ ಹಿಂದೂ ಪರಿಷತ್ ಬಜರಂಗದಳ ಶ್ರೀ ರಘುವೀರ್ ಘಟಕ, ದೇರೆಬೈಲು, ಕೊಂಚಾಡಿಯಲ್ಲಿ ತುಡರ ಪರ್ಬ-2022 : ದೀಪಾವಳಿ ಹಬ್ಬದ ಪ್ರಯುಕ್ತ ಸಾರ್ವಜನಿಕ ಗೋಪೂಜೆ ಗೂಡುದೀಪ ಸ್ಪರ್ಧೆ – ಕಹಳೆ ನ್ಯೂಸ್

ದೇರೆಬೈಲು : ದೀಪಾವಳಿ ಹಬ್ಬದ ಪ್ರಯುಕ್ತ ವಿಶ್ವ ಹಿಂದೂ ಪರಿಷತ್ ಬಜರಂಗದಳ ಶ್ರೀ ರಘುವೀರ್ ಘಟಕ, ದೇರೆಬೈಲು, ಕೊಂಚಾಡಿ ಇವರ ಆಶ್ರಯದಲ್ಲಿ ಅ.24ರಂದು ಕೊಂಚಾಡಿ ಶ್ರೀ ದುರ್ಗಾಪರಮೇಶ್ವರೀ ನಾಗಕನ್ನಿಕಾ ದೇವಸ್ಥಾನದ ಆವರಣದಲ್ಲಿ ತುಡರ ಪರ್ಬ-2022 ಇದರ ಅಂಗವಾಗಿ ಸಾರ್ವಜನಿಕ ಗೋಪೂಜೆ ಹಾಗೂ ಗೂಡುದೀಪ ಸ್ಪರ್ಧೆ ನಡೆಯಲಿದೆ.

ಕೊಂಚಾಡಿ ಶ್ರೀ ದುರ್ಗಾಪರಮೇಶ್ವರೀ ನಾಗಕನ್ನಿಕಾ ದೇವಸ್ಥಾನದ ಮೊಕ್ತೇಸರರಾದ ಜೆ. ಬಾಲಕೃಷ್ಣ ಕೊಟ್ಟಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ವೈ ಭರತ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇನ್ನು ಗಣ್ಯ ಉಪಸ್ಥಿತಿಯಲ್ಲಿ ಮಂಗಳೂರು ಭಜರಂಗದಳದ ವಿಭಾಗ ಸಂಚಾಲಕರಾದ ಭುಜಂಗ ಕುಲಾಲ್, ವಿಶ್ವ ಹಿಂದು ಪರಿಷತ್ ನ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್, ವಿಶ್ವ ಹಿಂದು ಪರಿಷತ್ ಕಾವೂರು ಪ್ರಖಂಡದ ಕಾರ್ಯದರ್ಶಿ ಭವಾನಿ ಶಂಕರ್, ಕೊಂಚಾಡಿ ಶ್ರೀ ದುರ್ಗಾಪರಮೇಶ್ವರೀ ನಾಗಕನ್ನಿಕಾ ದೇವಸ್ಥಾನದ ಮೊಕ್ತೇಸರರಾದ ರಮಾನಂದ ಭಂಡಾರಿ, ದೇರೆಬೈಲು ವಿಶ್ವ ಹಿಂದೂ ಪರಿಷತ್ ಬಜರಂಗದಳ ಶ್ರೀ ರಘುವೀರ್ ಘಟಕದ ಅಧ್ಯಕ್ಷರಾದ ಗುರುಪ್ರಸಾದ್ ಕಡಂಬಾರ್ ಹಾಗೂ ಇನ್ನಿತರರು ಭಾಗವಹಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಗೂಡುದೀಪ ಸ್ಪರ್ಧೆಯಲ್ಲಿ ಭಾಗವಹಿಸುವವರು 4.00 ಗಂಟೆಗೆ ಮುಂಚಿತವಾಗಿ ಗೂಡುದೀಪ ತರತಕ್ಕದ್ದು. ಗೂಡುದೀಪ ಸ್ಪರ್ಧೆಯಲ್ಲಿ ಹೆಸರು ನೊಂದಾವಣೆಗಾಗಿ ಸಂಪರ್ಕಿಸಿ 8073429580/ 9480486552

ಜಾಹೀರಾತು
ಜಾಹೀರಾತು

ವಿ.ಸೂ. : ಎಲ್ಲರಿಗೂ ಗೋಪೂಜೆ ಮಾಡುವ ಅವಕಾಶವಿದೆ. ಎಲ್ಲ ಹಿಂದೂ ಬಾಂಧವರು ಕಾರ್ಯಕ್ರಮಕ್ಕೆ ಬಂದು ಭಾಗವಹಿಸಿ, ಗೋಮಾತೆಯ ಮತ್ತು ಶ್ರೀ ದುರ್ಗಾಪರಮೇಶ್ವರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ವಿನಂತಿಸಿಕೊಂಡಿದ್ದಾರೆ.