ವಾಗ್ಜ್ಯೋತಿ ಶ್ರವಣದೋಷವುಳ್ಳ ಮಕ್ಕಳ ವಸತಿ ಶಾಲೆಗೆ ಉದ್ಯಮಿ ರಮೇಶ್ ದೇವಾಡಿಗ ವಂಡ್ಸೆ, ರವಿ ತಲ್ಲೂರು ಭೇಟಿ – ಕಹಳೆ ನ್ಯೂಸ್

ವಾಗ್ಜ್ಯೋತಿ ಶ್ರವಣದೋಷವುಳ್ಳ (ಮಾತು ಬಾರದ ಕಿವಿ ಕೇಳಿಸದ)ಮಕ್ಕಳ ವಸತಿ ಶಾಲೆಗೆ ಅಂಪಾರು- ಮೂಡುಬಗೆ ಉದ್ಯಮಿ ರಮೇಶ್ ದೇವಾಡಿಗ ವಂಡ್ಸೆ ,ತಲ್ಲೂರು ಸಪ್ತಸ್ವರ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ರವಿ ತಲ್ಲೂರು ಇವರು ಭೇಟಿ ನೀಡಿ ವಿಶೇಷ ಮಕ್ಕಳೊಂದಿಗೆ ಚರ್ಚಿಸಿದರು. ಮಕ್ಕಳು ತಮ್ಮದೇ ಆದ ಭಾಷೆಯಲ್ಲಿ ಪರಿಚಯ ಮಾಡಿಕೊಂಡರು.. ಮಕ್ಕಳಿಗೆ ಅಗತ್ಯ ಇರುವ ಪಠ್ಯಪುಸ್ತಕವನ್ನು ಹಾಗೂ ಅಡುಗೆ ಮನೆಗೆ ಗ್ರೈಂಡರ್ ಕೊಡುವೆಯಾಗಿ ನೀಡಿದರು. ವಿಶೇಷ ಮಕ್ಕಳೊಂದಿಗೆ ಸಹಭೋಜನ ಮಾಡಿ ಮುಂದೆಯು ವಸತಿ ನಿಲಯದ ಅನುಕೂಲಕ್ಕಾಗಿ ಶಿಕ್ಷಣದ ಉತ್ತೇಜನಕ್ಕಾಗಿ ಹಾಗೂ ಕ್ರೀಡೆಯಲ್ಲಿ ಪ್ರೋತ್ಸಾಹ ತನ್ನದೇ ಆದ ಕೊಡುಗೆ ನೀಡುವುದಾಗಿ ತಿಳಿಸಿದರು.
ವಿಶೇಷ ಮಕ್ಕಳ ಸೇವೆಯಲ್ಲಿ ಜೀವನದ ಸಾರ್ಥಕತೆ ಇದೆ ಎಂದು ರಮೇಶ್ ದೇವಾಡಿಗ ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ರವೀಂದ್ರ ದೇವಾಡಿಗ, ಗಿರೀಶ್ ಮೊಗವೀರ ಉಪ್ಪಿನಕುದ್ರು, ಶಿಕ್ಷಕ ವೃಂದ ಉಪಸ್ಥಿತರಿದ್ದರು


















