Friday, March 13, 2026
ಸುದ್ದಿ

ನಿಮ್ಮ ಮಕ್ಕಳಿಗಾಗಿ ‘‘ಪುತ್ತೂರ‍್ದ ಮುತ್ತು ಕೃಷ್ಣಾ’ ಶ್ರೀಕೃಷ್ಣ ವೇಷ ಫೋಟೋ ಸ್ಪರ್ಧೆ : ಸೌತ್ ಕೆನರಾ ಫೊಟೋಗ್ರಾಫರ್ಸ್ ಎಸೋಸಿಯೇಶನ್(ರಿ) ಪತ್ತೂರು ವಲಯ ವತಿಯಿಂದ ಆಯೋಜನೆ –ಕಹಳೆ ನ್ಯೂಸ್

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸೌತ್ ಕೆನರಾ ಫೊಟೋಗ್ರಾಫರ್ಸ್ ಎಸೋಸಿಯೇಶನ್(ರಿ) ಪತ್ತೂರು ವಲಯ ಇದರ ವತಿಯಿಂದ 2022ನೇ ವರ್ಷದ ‘ಪುತ್ತೂರ‍್ದ ಮುತ್ತು ಕೃಷ್ಣಾ ಎಂಬ ಶ್ರೀಕೃಷ್ಣ ವೇಷ ಫೋಟೋ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಸ್ಪರ್ಧೆಯ ನಿಯಮ
*5 ವರ್ಷದ ಒಳಗಿನ ಮಕ್ಕಳಿಗೆ ಮಾತ್ರ ಅವಕಾಶ.
*ಛಾಯಾಗ್ರಹಣವನ್ನು SKPA ಪುತ್ತೂರು ವಲಯದ ಸದಸ್ಯರೇ ತೆಗದಿರಬೇಕು ಮತ್ತು ಫೋಟೋ ಜೊತೆ 2022-23 ನವೀಕೃತ ID ಸಂಖ್ಯೆ ಲಗತ್ತಿಸಿರಬೇಕು.
*ಮೊಬೈಲ್ ಫೋಟೋಗಳಿಗೆ ಅವಕಾಶವಿಲ್ಲ.
*ಎಡಿಟ್ ಮಾಡಿರುವ ಫೋಟೋಗಳಿಗೆ ಅವಕಾಶವಿಲ್ಲ.
*ಹಳೆಯ ಫಟೋಗಳಿಗೆ ಅವಕಾಶವಿಲ್ಲ.
*ಫೋಟೋ ಸೈಜ್ 4mb ಮೀರಿರಬಾರದು.
ಇನ್ನು ಫೋಟೋ ಕಳುಹಿಸಲು 31-08-2022 ಕೊನೆಯ ದಿನವಾಗಿದ್ದು ಸ್ಪರ್ಧಿಗಳು ತಾವು ತೆಗೆದ ಫೋಟೋವನ್ನು skpaputtur2021@gmail.com ಗೆ ಕಳುಹಿಸಬೇಕು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ವಿಜೇತ ಸ್ಪರ್ಥಿಗಳಿಗೆ ಬಹುಮಾನ
ಪ್ರಥಮ ವಿಜೇತರಿಗೆ 3000 ನಗದು ಜೊತೆಗೆ ಫೋಟೋಫ್ರೇಮ್ & ಪ್ರಶಸ್ತಿ ಪತ್ರವನ್ನು ನೀಡಲಾಗುವುದು.
ದ್ವಿತೀಯ ವಿಜೇತರಿಗೆ 2000 ನಗದು ಜೊತೆಗೆ ಫೋಟೋಫ್ರೇಮ್ & ಪ್ರಶಸ್ತಿ ಪತ್ರವನ್ನು ನೀಡಲಾಗುವುದು.
ತೃತೀಯ ವಿಜೇತರಿಗೆ 1000 ನಗದು ಜೊತೆಗೆ ಫೋಟೋಫ್ರೇಮ್ & ಪ್ರಶಸ್ತಿ ಪತ್ರವನ್ನು ನೀಡಲಾಗುವುದು.
ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಇನ್ಸ್ಟಾಬಾಸ್ಕೆಟ್‍ನ ಕೂಪನ್ ನೀಡಲಾಗುವುದು. ಇನ್ನು ಈ ಸ್ಪರ್ಥೆಯಲ್ಲಿ ಝೂಮ್ ಇನ್ ಟಿವಿ ಹಾಗೂ ಕಹಳೆ ವಾಹಿನಿ ಮೀಡಿಯ ಪಾಟ್‍ನಾರ್ಸ್‍ಗಳಾಗಿದ್ದು, ನಗದು ಬಹುಮಾನದ ಪ್ರಯೋಜಕತ್ವವನ್ನ ಇನ್ಟ್ಸಾ ಬಾಸ್ಕೇಟ್ ಹಾಗೂ ಫೋಟೋಫ್ರೇಮ್ ಪ್ರಯೋಜಕತ್ವವನ್ನ ಭೂಮಿ ಫೋಟೋ ವಲ್ಡ್, & ರೋಲ್‍ಮಾರ್ಕ್ ಕ್ರಿಯೇಟಿವ್ ಸ್ಟುಡಿಯೋ ಪುತ್ತೂರು ಇವರು ವಹಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು

ಹೆಚ್ಚಿನ ಮಾಹಿತಿಗಾಗಿ – 9535618382 ಸಂಖ್ಯೆಯನ್ನ ಸಂಪರ್ಕಿಕಿಸಿಬಹುದಾಗಿದೆ.