Recent Posts

Tuesday, March 10, 2026
ಕಡಬಕ್ರೈಮ್ದಕ್ಷಿಣ ಕನ್ನಡಸುದ್ದಿ

ಕೊಯಿಲದಲ್ಲಿ ಮುಸ್ಲಿಂ ಯುವಕರ ಮಧ್ಯೆ ಗಲಾಟೆ..!? ಸಮೋಸ ನವಾಜ್’ಗೆ ಚೂರಿಯಿಂದ ಇರಿದ SDPI ಯ ನೌಫಾಲ್..!? – ಕಹಳೆ ನ್ಯೂಸ್

ಕಡಬ : ಹಳೆ ವೈಷಮ್ಯದ ಹಿನ್ನಲೆ ಜಗಳ ನಡೆದು ವ್ಯಕ್ತಿಯೊಬ್ಬರಿಗೆ ಚೂರಿ ಇರಿದ ಘಟನೆ ಕಡಬ ತಾಲೂಕಿನ ಕೊಯಿಲದಲ್ಲಿ ವರದಿಯಾಗಿದೆ.ಕೊಯಿಲದ ನೌಫಾಲ್ ಹಾಗು ನವಾಜ್ ಮಧ್ಯೆ ಈ ಜಗಳ ನಡೆದಿದ್ದು, ಗಲಾಟೆಗೆ 2021ರ ಡಿಸೆಂಬರ್ ತಿಂಗಳಲ್ಲಿ ಉಪ್ಪಿನಂಗಡಿಯಲ್ಲಿ ಅಶೋಕ್ ಶೆಟ್ಟಿ ಮೇಲೆ ನಡೆದ ಮಾರಕಾಸ್ತ್ರ ದಾಳಿಯೇ ಪ್ರಮುಖ ಕಾರಣ ಎಂದು ಮೂಲಗಳಿಂದ ತಿಳಿದು ಬಂದಿದೆ.

ಉಪ್ಪಿನಂಗಡಿಯಲ್ಲಿ ನಡೆದ ಮೀನು ಅಂಗಡಿ ಧ್ವಂಸ ಹಾಗೂ ಮಾರಕಾಸ್ತ್ರ ದಾಳಿ ಪ್ರಕರಣದ ಸಂಬಂಧ ನವಾಜ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಈ ವೇಳೆ ಮಾರಕಾಸ್ತ್ರಗಳಿಂದ ಅಮಾಯಕ ಹಿಂದೂ ಯುವಕರ ಮೇಲೆ ದಾಳಿ ಮಾಡಿದ ಕೊಯಿಲದಲ್ಲಿ ಪರೋಟ ವ್ಯಾಪಾರ ಮಾಡುತ್ತಿರುವ ನೌಫಾಲ್’ನ ತಮ್ಮ ಸೀನಾನ್ ಹೆಸರು ಬಾಯಿ ಬಿಟ್ಟದೆ ಇಂದಿನ ಗಲಾಟೆಗೆ ಪ್ರಮುಖ ಕಾರಣ ಎಂದು ಮೂಲಗಳಿಂದ ತಿಳಿದುಬಂದಿದೆ.ಇನ್ನು ಈ ನೌಫಾಲ್ ಹಾಗೂ ನವಾಜ್ SDPI ಪಕ್ಷದ ಸಕ್ರಿಯ ಕಾರ್ಯಕರ್ತರು ಎಂದು ತಿಳಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇಂದು ನವಾಜ್ ನೌಫಾಲ್’ನ ಅಂಗಡಿಗೆ ಹೋಗಿದ್ದ ವೇಳೆ ತನ್ನ ತಮ್ಮನಾದ ಸೀನಾನ್ ಹೆಸರನ್ನು ಪೊಲೀಸರ ಎದುರು ಬಾಯಿಬಿಟ್ಟ ಹಿನ್ನಲೆ ನವಾಜ್ ಮೇಲೆ ನೌಫಾಲ್ ಚೂರಿಯಿಂದ ಇರಿದಿದ್ದು ಸದ್ಯ ನವಾಜ್ ನನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.ಘಟನೆ ಹಿನ್ನಲೆ ಕಡಬ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಆಂಜನೇಯ ರೆಡ್ಡಿ ಅವರು ಸ್ಥಳಕ್ಕೆ ಭೇಟಿ ನೀಡಿದ್ದು,ತನಿಖೆ ಮುಂದುವರಿದಿದೆ.

ಜಾಹೀರಾತು
ಜಾಹೀರಾತು