ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ವ್ಯಾಪ್ತಿಯ ಮಾಬುಕಳ ಬ್ರಿಡ್ಜ್ ಬಳಿ ಬೈಕ್ ಇಟ್ಟು ನಾಪತ್ತೆಯಾಗಿದ್ದ ಆರ್ ಟಿ ಓ ಏಜೆಂಟ್ ಸೀತಾನದಿಯಲ್ಲಿ ಶವ ಪತ್ತೆಯಾಗಿದ್ದಾರೆ. ಕೊಡಂಕೂರು ನಿವಾಸಿ ಅಶೋಕ್ ಸುವರ್ಣ(46) ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಆರ್ ಟಿ ಓ ಏಜೆಂಟ್. ಶುಕ್ರವಾರ ಮಧ್ಯಾಹ್ನ ಬ್ರಿಡ್ಜ್ ಮೇಲೆ ಅಶೋಕ್ ಸುವರ್ಣ ಬೈಕ್ ಪತ್ತೆಯಾಗಿತ್ತು.

ಅಶೋಕ್‌ಗಾಗಿ ನದಿಯಲ್ಲಿ ಆಪದ್ಭಾಂಧವ ಈಶ್ವರ್ ಮಲ್ಪೆಯಿಂದ ಹುಟುಕಾಟ ನಡೆಸಿದ್ದರು. ಆದಿತ್ಯ ವಾರ ಮಧ್ಯಾಹ್ನ ವೇಳೆ ಮಾಬುಕಳದ ಸೀತಾನದಿಯಲ್ಲಿ ಅಶೋಕ್ ಸುವರ್ಣ ಶವ ಪತ್ತೆಯಾಗಿದೆ. ಅಶೋಕ್ ಮನೆಯಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುದಾಗಿ ಡೆತ್ ನೋಟ್ ಬರೆದಿಟ್ಟಿದ್ದರು. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














