Tuesday, March 17, 2026
ಸುದ್ದಿ

ಚಿತ್ರಾಪುರ ಬೀಚ್ ನಲ್ಲಿ ಆ.14ರಂದು ಉತ್ತಿಷ್ಟ ಭಾರತ ,ರಾಷ್ಟ್ರೀಯತೆಯ ಜಾಗೃತ ಕಾರ್ಯಕ್ರಮ –ಕಹಳೆ ನ್ಯೂಸ್

ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಬಿಜೆಪಿ ಮಂಗಳೂರು ನಗರ ಉತ್ತರ ಮ೦ಡಲ ವ್ಯಾಪ್ತಿಯಲ್ಲಿ, ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ.ಭರತ್ ಶೆಟ್ಟಿ ವೈ ಅವರ ನೇತೃತ್ವದಲ್ಲಿ ಸರಣಿ ಕಾರ್ಯಕ್ರಮ ಆಯೋಜಿಸಲಾಗಿದ್ದು ಆ.14ರಂದು 3 ಗಂಟೆಗೆ ಚಿತ್ರಾಪುರ ಕಡಲ ತೀರದ ಪಣಂಬೂರು ಕುಳಾಯಿ ಮೊಗವೀರ ಮಹಾಸಭಾದ ಬಯಲು ರಂಗ ಮಂದಿರದಲ್ಲಿ ಉತ್ತಿಷ್ಠ ಭಾರತ ರಾಷ್ಟ್ರೀಯತೆಯನ್ನು ಬಿಂಬಿಸುವ ವಿಶೇಷ ಕಾರ್ಯಕ್ರಮ ನಡೆಯಲಿದೆ. ಚಿತ್ರಾಪುರ ಸಭಾಂಗಣದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಮೃತ ಮಹೋತ್ಸವದ ಕಾರ್ಯಕ್ರಮವನ್ನು ಅಂತಿಮ ಗೊಳಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ವಾಗ್ಮಿ ಪ್ರಕಾಶ್ ಮಲ್ಪೆ ಮತ್ತು ಬಳಗದಿಂದ ಕಾರ್ಯಕ್ರಮ ನಡೆಯಲಿದ್ದು, ಪ್ರಸಿದ್ದ ಹಿನ್ನಲೆ ಗಾಯಕರಿ೦ದ ಗೀತ ಕಥನ,
ಭಕ್ತಿ ಗೀತೆ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಬರುವ ಎಲ್ಲಾ ದೇಶ ಭಕ್ತರಿಗೂ,ವೀಕ್ಷಕರಿಗೂ ದೋಸಾ ಕ್ಯಾಂಪ್ ಮೂಲಕ ಉಚಿತ ಫಲಹಾರ ವಿತರಣೆ ವ್ಯವಸ್ಥೆ ಮಾಡಲಾಗಿದೆ.

ಜಾಹೀರಾತು
ಜಾಹೀರಾತು

ವಿಧಾನ ಸಭಾ ಕ್ಷೇತ್ರದಾದ್ಯಂತ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದ್ದು, ಆ.13ರಂದು ಸಂಜೆ 6.30ಕ್ಕೆ ರಂದು ಪದವಿನಂಗಡಿಯಿ೦ದ ಮೇರಿಹಿಲ್ ಜಂಕ್ಷನ್ ವರೆಗೆ, ಯುವ ಮೋರ್ಚಾದಿಂದ ಅಲಂಕಾರ ಕಾರ್ಯಕ್ರಮ, ಬೆಳಗ್ಗೆ 11ರಿ೦ದ ಮಹಿಳಾ ಮೋರ್ಚಾದಿಂದ ಬೋಂದೆಲ್‌ ನಿಂದ ಕಾವೂರು ಜಂಕ್ಷನ್ ವರೆಗೆ ಪಾದಯಾತ್ರೆ ಆಯೋಜಿಸಲಾಗಿದೆ.
ಆ.14ರಂದು ಬೆಳಗ್ಗೆ 9ಕ್ಕೆ ಸುರತ್ಕಲ್ ಮಹಾಶಕ್ತಿ ಕೇಂದ್ರದಿಂದ ಸ್ವಾತಂತ್ರ ಹೋರಾಟದಲ್ಲಿ ಪಾತ್ರ ವಹಿಸಿದ ಕೇಂದ್ರದಲ್ಲಿ ಕಾರ್ಯಕ್ರಮ, ನೀರುಮಾರ್ಗ ಬೊಂಡಂತಿಲದಲ್ಲಿ ಶ್ರೀ ಸದಾಶಿವ ದೇವಸ್ಥಾನದಿಂದ ತಿರಂಗಾ ಜಾಥಾ, 11 ಗಂಟೆಗೆ ಬಂಗಕೂಳೂರಿನಲ್ಲಿ ವಿಶೇಷ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ. ಸಂಜೆ ಸಸಿಹಿತ್ಲು ಬೀಚ್ ನಿಂದ ಬೈಕಂಪಾಡಿ ವರೆಗೆ ವಿಭಜನ್ ವಿಭೀಷನ್ ಸ್ಮೃತಿ ದಿವಸ್ ಪ್ರಯುಕ್ತ ರಾಷ್ಟ್ರಧ್ವಜದೊಂದಿಗೆ ಮೌನ ಮೆರವಣಿಗೆ ನಡೆಯಲಿದೆ.

ಸುರತ್ಕಲ್ 2ರ ಮಹಾಶಕ್ತಿ ಕೇಂದ್ರದಿಂದ ಆ.15ರಂದು ಬೆಳಗ್ಗೆ 10 ಗಂಟೆಗೆ ಕಾಲ್ನಡಿಗೆ ಜಾಥಾ, ಕಾವೂರು ಜಂಕ್ಷನ್‌ನಿ೦ದ ಕಾವೂರು ಬಿಜೆಪಿ ಕಾರ್ಯಾಲಯ ದವರೆಗೆ ಪಾದಯಾತ್ರೆ, ಬಡಗಎಡ ಪದವಿನಲ್ಲಿ ಹನುಮಾನ್ ಮ೦ದಿರದಿ೦ದ ವಿವೇಕಾನ೦ದ ಕಾಲೇಜುವರೆಗೆ ಪಾದಯಾತ್ರೆ ಆಯೋಜಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ಸರ್ವ ಕಾರ್ಯಕರ್ತರು ಭಾಗಿಯಾಗಬೇಕೆಂದು ಶಾಸಕರಾದ ಡಾ.ಭರತ್ ಶೆಟ್ಟಿ ವೈ ನುಡಿದರು. ಬಿಜೆಪಿ ಮುಖಂಡರು ಪದಾಧಿಕಾರಿಗಳು ಉಪಸ್ಥಿತರಿದ್ದರು.