Thursday, March 12, 2026
ಕ್ರೈಮ್ದಕ್ಷಿಣ ಕನ್ನಡಸುದ್ದಿ

ಮಾಣಿ ಸರಕಾರಿ ಆಸ್ಪತ್ರೆಯ ಬಳಿ ಪರಿಚಿತವಾದ ಅಪ್ರಾಪ್ತ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಒಂಟಿಕಾಲಿನ ಕಾಮುಕ ಡಾ. ಅನುಷ್ ನಾಯ್ಕ ; ಕೇಸ್ ಜಡಿದು, ಬೆಂಡೆತ್ತಿದ ವಿಟ್ಲ ಪೋಲೀಸರು…! – ಕಹಳೆ ನ್ಯೂಸ್

ವಿಟ್ಲ: ವೈದ್ಯನೊಬ್ಬ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿದೆ. ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ವೈದ್ಯನಾಗಿರುವ ಮಾಣಿ ಮೂಲದ ಡಾ ಅನುಷ್ ನಾಯ್ಕ ಎಂಬಾತ 14 ವರ್ಷದ ಬಾಲಕಿ ಮೇಲೆ ಈತ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಾ. ಅನುಷ್‌ಗೆ ಎರಡು ಮದುವೆಯಾಗಿದ್ದು ಮೊದಲ ಪತ್ನಿಯಿಂದ ದೂರವಾಗಿದ್ದಾನೆ ಎನ್ನಲಾಗಿದೆ. ಆರೋಪಿ ಅನುಷ್ ಈ ಹಿಂದೆಯೂ ಇಂತಹದ್ದೇ ಕೃತ್ಯ ಎಸಗಿದ್ದ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಪಿಯ ಹಿನ್ನಲೆ :

ಜಾಹೀರಾತು
ಜಾಹೀರಾತು

ಅರೋಪಿ ಪ್ರತಿಷ್ಠಿತ ಕುಟುಂಬದಕ್ಕೆ ಸೇರಿದ್ದು, ಆರೋಪಿಯ ತಂದೆ ವೈದ್ಯರಾಗಿರುತ್ತಾರೆ. ಆರೋಪಿ ಒಂಟಿ ಕಾಲನ್ನು ಹೊಂದಿದ್ದು, ಈ ಹಿಂದೆ ಈತನ ವಿರುದ್ಧ ಇಂತಹದ್ದೇ ಕೆಲವು ಆರೋಪಗಳು ಕೇಳಿಬಂದಿದೆ. ಮಂಗಳೂರಿನಲ್ಲಿ ತ್ರಿತೀಯಲಿಂಗಿ ಲೈಂಗಿಕ ಕಾರ್ಯಕರ್ತರೊಂದಿಗೆ ಲೈಂಗಿಕ ಕ್ರೀಯೆ ನಡೆಸಿ, ಹಣದ ವಿಷಯದಲ್ಲಿ ಸಣ್ಣಪುಟ್ಟ ಗಲಾಟೆ ನಡೆದು ನಂರತ ಪಾಂಡೇಶ್ವರ ಪೋಲೀಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆದು, ಪ್ರಕರಣ ರಾಜಿಯಲ್ಲಿ ಇತ್ಯರ್ಥವಾಗಿರುವ ಕುರಿತು ದಾಖಲೆಗಳಿವೆ. ಮಂಗಳೂರಿನ ಕೆಲವು ಉದ್ಯಮಿಗಳು ಆತನನ್ನು ಆ ಸಂದರ್ಭದಲ್ಲಿ ತಂದೆಯ ಮುಖನೋಡಿ ರಕ್ಷಿಸಿದ ಕುರಿತು ಬಲ್ಲ ಮೂಲಗಳು ಮಾಹಿತಿ ನೀಡದೆ. ಒಟ್ಟಿನಲ್ಲಿ ಕಾಮುಕ ವೈದ್ಯನನ್ನು ಜೈಲಿಗಟ್ಟುವಲ್ಲಿ ಪೋಲೀಸರು ಯಶಸ್ವಿಯಾಗಿದ್ದಾರೆ.