Thursday, March 12, 2026
ಸುದ್ದಿ

ಬಂದಾರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘಕ್ಕೆ ಗ್ರಾಮ ಪಂಚಾಯತ್ ವತಿಯಿಂದ ಕಾಂಗ್ರೀಟ್ ರಸ್ತೆ, ಇಂದು ಅಧಿಕೃತ ಚಾಲನೆ – ಕಹಳೆ ನ್ಯೂಸ್

ಬಂದಾರು : ಬಂದಾರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಮತ್ತು ಹೈನುಗಾರರ ಮನವಿಗೆ ಸ್ಪಂದಿಸಿದ ಬಂದಾರು ಗ್ರಾಮ ಪಂಚಾಯತ್ ತಮ್ಮ ವಿಶೇಷ ಅನುದಾನದ ಮೂಲಕ ಸು.1ಲಕ್ಷ ವೆಚ್ಚದಲ್ಲಿ ಸು.20 ಮೀಟರ್ ಉದ್ದದ ಕಾಂಗ್ರೀಟ್ ರಸ್ತೆ ನಿರ್ಮಿಸಿ ಕೊಡುವ ಮೂಲಕ ಸಹಕರಿಸಿದೆ, ಈ ರಸ್ತೆ ಕಾಮಗಾರಿಯನ್ನು ಸಿದ್ದಿಶ್ರೀ ಅಸೋಸಿಯೇಟ್ಸ್ ನ ಕೇಶವ ಗೌಡ ಇವರು ತ್ವರಿತವಾಗಿ ಮಾಡಿಕೊಟ್ಟಿದ್ದು. ಇಂದು ಬಂದಾರು ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಪರಮೇಶ್ವರಿ. ಕೆ ಗೌಡ ಉದ್ಘಾಟಿಸಿ  ಅಧಿಕೃತ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಮಮತಾ ಕೆಳೆಂಜಿಮಾರು, ಕಾರ್ಯದರ್ಶಿ ಭವ್ಯ ಕೆ. ಎಸ್, ಸಂಘದ ನಿರ್ದೇಶಕರು, ಸಿಬ್ಬಂದಿಗಳು, ಸದಸ್ಯರು ಹಾಗೂ ಪಂಚಾಯತ್ ವಾರ್ಡ್ ಸದಸ್ಯರಾದ ದಿನೇಶ್ ಗೌಡ ಖಂಡಿಗ ಹಾಗೂ ಗಣ್ಯರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ  ಮಮತಾ.ಕೆ ಪಂಚಾಯತ್ ಅಧ್ಯಕ್ಷರು, ಸಿಬ್ಬಂದಿಗಳು ಹಾಗೂ ವಾರ್ಡ್ ಸದಸ್ಯ ದಿನೇಶ್ ಕೆ ಇವರ ಸೇವೆಯನ್ನು ವಿಶೇಷವಾಗಿ ಅಭಿನಂದಿಸಿದರು, ಕಾಮಗಾರಿಯನ್ನು ಸುಸೂತ್ರವಾಗಿ ನೆರವೇರಿಸಿದ ಸಿದ್ದಿಶ್ರೀ ಅಸೋಸಿಯೇಟ್ಸ್ ನ ಕೇಶವ ಇವರನ್ನು ಅಭಿನಂದಿಸಲಾಯಿತು ಮತ್ತು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಹಾಗೂ ಇನ್ನು ಮುಂದೆಯೂ ಸಂಘದ ಅಭಿವೃದ್ಧಿಗೆ  ನಿರಂತರ ಸಹಕಾರವನ್ನು ಕೋರಿದರು