ಬಕ್ರೀದ್ ಸಂದರ್ಭ ನಡೆಯುವ ಗೋಹತ್ಯೆ ಹಾಗು ಅಕ್ರಮ ಗೋ ಸಾಗಾಣಿಕೆಗೆ ಕಡಿವಾಣ ಹಾಕುವಂತೆ ಆಗ್ರಹಿಸಿ, ವಿಶ್ವ ಹಿಂದು ಪರಿಷದ್ ಬಜರಂಗದಳ ಪುತ್ತೂರು ನಗರ ಪ್ರಖಂಡ ಹಾಗೂ ಪುತ್ತೂರು ಗ್ರಾಮಾಂತರ ಪ್ರಖಂಡ ವತಿಯಿಂದ ಪುತ್ತೂರು ನಗರ ಠಾಣೆ ಉಪ ನಿರೀಕ್ಷಕರಿಗೆ ಮನವಿ- ಕಹಳೆ ನ್ಯೂಸ್

ಪುತ್ತೂರು : ವಿಶ್ವ ಹಿಂದು ಪರಿಷದ್ ಬಜರಂಗದಳ ಪುತ್ತೂರು ನಗರ ಪ್ರಖಂಡ ಹಾಗೂ ಪುತ್ತೂರು ಗ್ರಾಮಾಂತರ ಪ್ರಖಂಡ ವತಿಯಿಂದ ಬಕ್ರೀದ್ ಸಂದರ್ಭ ನಡೆಯುವ ಗೋಹತ್ಯೆ ಹಾಗು ಅಕ್ರಮ ಗೋ ಸಾಗಾಣಿಕೆಗೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿ ಪುತ್ತೂರು ನಗರ ಠಾಣೆ ಉಪ ನಿರೀಕ್ಷಕ ರಾಜೇಶ್ ಅವರಿಗೆ ಹಾಗೂ ಪುತ್ತೂರು ಗ್ರಾಮಾಂತರ ಪ್ರಖಂಡ ವತಿಯಿಂದ ಸಂಪ್ಯ ಪೋಲಿಸ್ ಠಾಣೆಯ ಉಪ ನಿರೀಕ್ಷಕ ಉದಯ ರವಿ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಬಜರಂಗದಳ ಪುತ್ತೂರು ಜಿಲ್ಲಾ ಸುರಕ್ಷಾ ಪ್ರಮುಖ್ ಜಯಂತ ಕುಂಜೂರುಪ0ಜ, ಪುತ್ತೂರು ನಗರ ಪ್ರಖಂಡ ಸಂಯೋಜಕ ಹರೀಶ್ ಕುಮಾರ್ ದೋಳ್ಪಾಡಿ, ಸಹ ಸಂಯೋಜಕ ಚೇತನ್ ಬೊಳುವಾರು, ಅಖಾಡ ಪ್ರಮುಖ್ ಹರ್ಷಿತ್ ಬಲ್ನಾಡು, ಪುತ್ತೂರು ಗ್ರಾಮಾಂತರ ಪ್ರಖಂಡ ಕಾರ್ಯದರ್ಶಿ ರವಿಕುಮಾರ್ ಕೈತ್ತಡ್ಕ, ಬಜರಂಗದಳ ಪುತ್ತೂರು ಗ್ರಾಮಾಂತರ ಪ್ರಖಂಡ ಸಂಯೋಜಕ್ ವಿಶಾಕ್ ಸಸಿಹಿತ್ಲು, ಗ್ರಾಮಾಂತರ ಪ್ರಖಂಡ ಅಖಾಡ ಪ್ರಮುಖ್ ದಿನೇಶ್ ತಿಂಗಳಾಡಿ ಉಪಸ್ಥಿತರಿದ್ದರು.














