Tuesday, March 10, 2026
ದಕ್ಷಿಣ ಕನ್ನಡಪುತ್ತೂರುಸುದ್ದಿ

ಜು.17ರಿಂದ ಜು.24 ರವರೆಗೆ ಪೋಳ್ಯ ಶ್ರೀ ಲಕ್ಷ್ಮೀವೆಂಕಟರಮಣ ಮಠದಲ್ಲಿ ಸ್ವಸ್ಥ ಸಮಾಜದ ಸಜ್ಜನ ಶ್ರೀ ಕೃಷ್ಣ ಭಕ್ತರಿಂದ ‘ಶ್ರೀಮದ್ಭಾಗವತ ಸಪ್ತಾಹ ಯಜ್ಞ- 2022’ – ಕಹಳೆ ನ್ಯೂಸ್

ಪುತ್ತೂರು: ಜು.17ರಿಂದ ಜು.24 ರವರೆಗೆ ಪೋಳ್ಯ ಶ್ರೀನಿವಾಸ ಪುರಂ ಶ್ರೀ ಲಕ್ಷ್ಮೀವೆಂಕಟರಮಣ ಮಠದಲ್ಲಿ ವೇದ ಮೂರ್ತಿ ಗೋಪಾಲಕೃಷ್ಣ ಭಟ್ಟ ನೂಜಿ ಇವರ ಉಪಸ್ಥಿತಿಯಲ್ಲಿ ಸ್ವಸ್ಥ ಸಮಾಜದ ಸಜ್ಜನ ಶ್ರೀಕೃಷ್ಣ ಭಕ್ತರಿಂದ ಶ್ರೀಮದ್ಭಾಗವತ ಸಪ್ತಾಹ ಯಜ್ಞ- 2022 ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಜು.17 ರಿಂದ ಜು.24ರವರೆಗೆ ಬೆಳಿಗ್ಗೆಯಿಂದ ಶರೀರಶುದ್ಧಿ, ಸ್ಥಳಶುದ್ಧಿ, ಮಹಾಸಂಕಲ್ಪ, ಗಣಪತಿಹೋಮ, ಕಲಶ ಪ್ರತಿಷ್ಠೆ, ಪ್ರವಚನ, ಮಹಾಪೂಜೆ, ನಡೆದು ಬಳಿಕ ಉದಕಶಾಂತಿ ಪಾರಾಯಣ ನಡೆಯಲಿದ್ದು, ಶ್ರೀ ವಿಷ್ಣುಸಹಸ್ರನಾಮ ಪಾರಾಯಣ ಪೂರ್ವಕ ಭಾಗವತ ಪಾರಾಯಣಾರಂಭ , ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಸಂಜೆ ಶ್ರೀಮತಿ ವಿಜಯ ಕುಮಾರಿ ಶೆಣೈ ಮತ್ತು ಬಳಗದವರಿಂದ ದಾಸ ಸಂಕೀರ್ತನೆ, ಸಂಜೆ 5ರಿಂದ ಕಥಾ ಪ್ರವಚನಾರಂಭ , ರಾತ್ರಿ ಮಹಾಪೂಜೆ, ಮಂಗಳಾಶಾಸನ ನಡೆಯಲಿದೆ. ದಿನಂಪ್ರತಿ ವಿವಿಧ ತಂಡಗಳ ಕೂಡುವಿಕೆಯಲ್ಲಿ ದಾಸ ಸಂಕೀರ್ತನೆ, ಕಥಾ ಪ್ರವಚನಾ ನಡೆಯಲಿದೆ. ಹಾಗೆಯೇ ಪ್ರತಿ ದಿನ ರಾತ್ರಿ ಶ್ರೀ ದೇವರಿಗೆ ಮಹಾಪೂಜೆ ನಡೆದು ಮಂಗಳಾಶಾಸನ ನಡೆದ ಬಳಿಕ ಪ್ರಸಾದ ವಿತರಣೆ ನೇರವೇರಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು